ದಕ್ಷಿಣ ಕನ್ನಡ ಧಗಧಗ: ಪುತ್ತೂರಲ್ಲಿ 40, ಮಂಗಳೂರಲ್ಲಿ 36.6 ಡಿಗ್ರಿ ಸೆಲ್ಸಿಯನ್‌ ಉಷ್ಣಾಂಶ!

Published : Mar 05, 2023, 02:01 PM IST
ದಕ್ಷಿಣ ಕನ್ನಡ ಧಗಧಗ: ಪುತ್ತೂರಲ್ಲಿ 40, ಮಂಗಳೂರಲ್ಲಿ 36.6 ಡಿಗ್ರಿ ಸೆಲ್ಸಿಯನ್‌ ಉಷ್ಣಾಂಶ!

ಸಾರಾಂಶ

 ದ.ಕ.ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ ಶನಿವಾರವೂ ಮುಂದುವರಿದಿದೆ. ಮಂಗಳೂರಿನಲ್ಲಿ ಗರಿಷ್ಠ 36.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿ. ಇನ್ನೊಂದೆಡೆ ಪುತ್ತೂರಿನಲ್ಲಿ ಶನಿವಾರ ರಾಜ್ಯದಲ್ಲಿಯೇ ಅತಿ ಗರಿಷ್ಠ ತಾಪಮಾನ ದಾಖಲಾಗಿದೆ 

ಮಂಗಳೂರು (ಮಾ.5) : ದ.ಕ.ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ ಶನಿವಾರವೂ ಮುಂದುವರಿದಿದೆ. ಮಂಗಳೂರಿನಲ್ಲಿ ಗರಿಷ್ಠ 36.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿ. ಇನ್ನೊಂದೆಡೆ ಪುತ್ತೂರಿನಲ್ಲಿ ಶನಿವಾರ ರಾಜ್ಯದಲ್ಲಿಯೇ ಅತಿ ಗರಿಷ್ಠ ತಾಪಮಾನ ದಾಖಲಾಗಿದೆ  ಭಾರತೀಯ ಹವಾಮಾನ ಇಲಾಖೆ(Indian Meteorological Department) ಪ್ರಕಾರ ಒಂದು ವಾರ ಕಾಲ ಉಷ್ಣಾಂಶದಲ್ಲಿ ಏರಿಕೆ ಕಂಡುಬರಲಿದ್ದು, ಬಳಿಕ ತುಸು ಇಳಿಕೆಯಾಗಲಿದೆ. ಮಾ.5ರಿಂದ ಮತ್ತೆ ಉಷ್ಣಾಂಶದಲ್ಲಿ ಇಳಿಕೆ ಕಂಡುಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾರಿ ಉಷ್ಣಾಂಶ ಹಿನ್ನೆಲೆಯಲ್ಲಿ ಮಂಗಳೂರು(Mangaluru) ತಾಲೂಕಿನ ಬಜಪೆಯ ಸುಂಕದಕಟ್ಟೆ(Sunkadakatte forest)ಯಲ್ಲಿ ಅರಣ್ಯದ ಅಂಚಿನಲ್ಲಿ ಬೆಂಕಿ(forest fire) ಕಾಣಿಸಿಕೊಂಡಿದೆ. ಶನಿವಾರ ಈ ಬೆಂಕಿ ಕಂಡುಬಂದಿದ್ದು, ಬಳಿಕ ಅಗ್ನಿಶಾಮಕದಳ ನೆರವಿನಲ್ಲಿ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.

ಬೇಸಗೆಯಲ್ಲಿ ಗಿಡ ರಕ್ಷಣೆ, ಕಾಳಜಿ ಮಾಡಲು ಇಲ್ಲಿವೆ ಸಿಂಪಲ್ ಟಿಪ್ಸ್

ಕಾಡ್ಗಿಚ್ಚು ಕಂಡುಬಂದರೆ ಮಾಹಿತಿ ನೀಡಲು ಸೂಚನೆ:

ತಾಪಮಾನದ ವೈಪರೀತ್ಯದಿಂದ ಪ್ರಸಕ್ತ ಬಿಸಿಲಿನ ಶಾಖ 32 ಡಿಗ್ರಿಯಿಂದ 40.7 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಸೂರ್ಯನ ಕಿರಣಗಳು ಸುಡುವಂತೆ ಭಾಸವಾಗುತ್ತಿದೆ.

ಅರಣ್ಯ ಪ್ರದೇಶಗಳಲ್ಲಿ ಹಾದು ಹೋಗುವ ವಿದ್ಯುತ್‌ ಸರಬರಾಜು ಪರಿವರ್ತಕ, ತಂತಿಗಳ ಮೂಲಕ ಕಿಡಿ ಹಾರಿ ಬೆಂಕಿ ಜ್ವಾಲೆ ಕಂಡು ಬಂದರೆ ಸಾರ್ವಜನಿಕರು ಅರಣ್ಯ ಪ್ರದೇಶದ ಬಳಿ ವಿನಾಕಾರಣ ತ್ಯಾಜ್ಯಗಳಿಗೆ ಬೆಂಕಿ ಹಾಕುವುದರಿಂದ ಬೆಂಕಿ ಜ್ವಾಲೆ ಕಾಡ್ಗಿಚ್ಚಿಗೆ ಕಾರಣವಾಗುತ್ತದೆ. ಆದ್ದರಿಂದ ಮಾಚ್‌ರ್‍, ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಎಲ್ಲೆಂದರಲ್ಲಿ ಬೆಂಕಿ ಹಚ್ಚುವುದು, ಅನಗತ್ಯ ಪಟಾಕಿ ಸ್ಫೋಟಿಸುವುದು, ರಸ್ತೆ ಪಕ್ಕದಲ್ಲಿ ಧೂಮಪಾನ ಮಾಡುವುದು ಚಿಕ್ಕ, ಪುಟ್ಟಅಂಗಡಿಯವರು ತ್ಯಾಜ್ಯ ಬಿಸಾಡಿ ಬೆಂಕಿ ಹಚ್ಚುವುದು ಅಪರಾಧ ಎಂದು ಪರಿಗಣಿಸಲಾಗಿದೆ.

 

ಬೇಸಗೆ ಬಿಸಿ ಹೆಚ್ಚಿಸ್ತಿದ್ದಾರೆ ಸಾರಾ..! ಸನ್‌ಶೈನ್ ಎಲ್ರಿಗೂ ಇಷ್ಟ ಎಂದ ವರುಧಿನಿ

ಅರಣ್ಯ ವೀಕ್ಷಕರು, ಅಧಿಕಾರಿಗಳು ನಿರಂತರ ಅರಣ್ಯ ಪ್ರದೇಶಗಳ ರಕ್ಷಣೆಗೆ ಕರ್ತವ್ಯ ನಿರ್ವಹಿಸುತ್ತಿದ್ದು ಬೆಂಕಿ ಅವಘಡ, ಕಾಡ್ಗಿಚ್ಚು, ಬೆಂಕಿ ಜ್ವಾಲೆ ಕಂಡು ಬಂದರೆ ಸಾರ್ವಜನಿಕರು ಆಯಾ ವಲಯದ ಉಪ್ಪಿನಂಗಡಿ-9480346249, ಪುತ್ತೂರು-9980808650, ಬೆಳ್ತಂಗಡಿ-9481808105, ಸುಳ್ಯ-9449506304, ಬಂಟ್ವಾಳ-9845732332, ಮಂಗಳೂರು-9620426901, ಸುಬ್ರಹ್ಮಣ್ಯ-9036604975 ಹಾಗೂ ಪಂಜ- 9481390040 ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮಂಗಳೂರು ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC