
ವಿಜಯಪುರ (ಮಾ.19): ಆಕಸ್ಮಿಕವಾಗಿ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಅವಘಡ ಸಂಭವಿಸಿದ ಘಟನೆ ವಿಜಯಪುರ ಜಿಲ್ಲೆಯ ರಾಜಾಜಿನಗರದಲ್ಲಿ ನಡೆದಿದೆ.
ಮಹಾದೇವ ದಿಂಡವಾರ ಎಂಬುವರ ಮನೆಯಲ್ಲಿ ನಡೆದಿರುವ ಘಟನೆ. ಸಿಲಿಂಡರ್ ಅನಿಲ ಸೋರಿಕೆಯಿಂದ ಹೊತ್ತಿಕೊಂಡ ಬೆಂಕಿ. ಇಡೀ ಮನೆ ವ್ಯಾಪಿಸಿದೆ. ಘಟನೆಯಲ್ಲಿ ಮಹಾದೇವ ಸಂಕೇತ, ಮಣಿಕಂಠ ರಾಮು ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಗಾಯಾಳುಗಳು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮನೆಯೊಳಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮನೆಯ ವಸ್ತುಗಳು ಹಾನಿಯಾಗಿವೆ. ಜಲನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ಕಾರವಾರ: ಸಿಲಿಂಡರ್ ಸ್ಫೋಟ, ಕಾರ್ಮಿಕ ಕಾಲೋನಿಯ ಮನೆಗಳಿಗೆ ಬೆಂಕಿ
ಸಿಲಿಂಡರ್ ಸೋರಿಕೆಯಾದಾಗ ಏನು ಮಾಡಬೇಕು?
ಗ್ಯಾಸ್ ಸಿಲಿಂಡರ್ ಸೋರಿಕೆಯಾಗುವ ದುರದೃಷ್ಟಕರ ಪರಿಸ್ಥಿತಿಯಲ್ಲಿ, ಗಾಬರಿಗೊಳ್ಳದೆ ಶಾಂತವಾಗಿರಿ. ಯಾವುದೇ ರೀತಿಯ ಅಪಘಾತಗಳನ್ನು ತಪ್ಪಿಸಲು ಕೆಲವು ಸರಳ ಉಪಾಯಗಳನ್ನು ಅನುಸರಿಸಿ. ಎಲ್‌ಪಿಜಿ ಸೋರಿಕೆಯಾಗುತ್ತಿದ್ದರೆ ದುರ್ವಾಸನೆಯಿಂದ ಗ್ಯಾಸ್ ಸೋರಿಕೆಯನ್ನು ಆರಂಭಿಕ ಹಂತದಲ್ಲೇ ಕಂಡುಹಿಡಿಯುವುದು ಸುಲಭ. ಅನಿಲದ ವಾಸನೆ ಬಂದ ತಕ್ಷಣ ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು:
ಬೆಂಗಳೂರಲ್ಲಿ ಮತ್ತೊಂದು ಬ್ಲಾಸ್ಟ್: ಇದು ಬಾಂಬ್ ಅಲ್ಲ, ಕಾರ್ ಗ್ಯಾರೇಜಿನ ಗ್ಯಾಸ್ ವೆಲ್ಡಿಂಗ್ ಮಶಿನ್!
ಮೊದಲನೆಯದಾಗಿ ನಿಮ್ಮ ಮನೆಯ ಎಲ್ಲಾ ಬಾಗಿಲು ಮತ್ತು ಕಿಟಕಿಗಳನ್ನು ತೆರೆಯಿರಿ. ಸಿಲಿಂಡರ್ ಆಫ್ ಮಾಡಿ, ಅದನ್ನು ಈಗಾಗಲೇ ಆಫ್ ಮಾಡಿದ್ದರೆ, ಸರಿಯಾಗಿ ಜೋಡಿಸಲಾಗಿದೆಯೇ ಪರೀಕ್ಷಿಸಿ. ಈ ವೇಳೆ ಮನೆಯಲ್ಲಿ ಫ್ಯಾನ್ ಅಥವಾ ಲೈಟ್ ಆನ್ ಮಾಡಬೇಡಿ. ಸಿಗರೇಟ್, ಬೆಂಕಿಕಡ್ಡಿಗಳು, ಲೈಟರ್‌ಗಳು ಅಥವಾ ಯಾವುದೇ ಉಪಕರಣಗಳನ್ನು ಹೊತ್ತಿಸುವುದನ್ನು ತಪ್ಪಿಸಿ. ಗ್ಯಾಸ್ ಸೋರಿಕೆಯಾದಾಗ ಸ್ಟವ್ ಅಥವಾ ಬರ್ನರ್ ಆನ್ ಮಾಡಬೇಡಿ. ಸಮಸ್ಯೆ ಮುಂದುವರಿದಂತೆ ತೋರುತ್ತಿದ್ದರೆ ತಕ್ಷಣ ಸಹಾಯಕ್ಕಾಗಿ ಕರೆ ಮಾಡುವ ಮೂಲಕ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದು.