ಗೋವಿಂದರಾಜು ಮತ್ತು ಆತನ ಸ್ನೇಹಿತ ಲೋಕೇಶ್ ಇಬ್ಬರು ನಾಗಮಲೆಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ವೇಳೆ ದಿಢೀರನೆ ಪ್ರತ್ಯಕ್ಷವಾದ ಕಾಡಾನೆ ಗೋವಿಂದರಾಜು ಮೇಲೆ ದಾಳಿ ಮಾಡಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹನೂರು(ಆ.21): ಕಾಡಾನೆ ದಾಳಿಯಿಂದ ಮಾದಪ್ಪನ ಭಕ್ತನೊಬ್ಬ ಬಲಿಯಾದ ಘಟನೆ ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಶನಿವಾರ ಜರುಗಿದೆ.
ಬೆಂಗಳೂರು ಮೂಲದ ಜೋಗಿಪಾಳ್ಯದ ಗೋವಿಂದರಾಜು (38) ಆನೆ ದಾಳಿಯಿಂದ ಮೃತಪಟ್ಟ ದುರ್ದೈವಿಯಾಗಿದ್ದಾನೆ.
undefined
ಬಹಿರ್ದೆಸೆಗೆ ತೆರಳಿದ್ದ ಯುವಕನ ಮೇಲೆ ಕಾಡಾನೆ ದಾಳಿ: ದೂರು ನೀಡಿದರೂ ಸ್ವೀಕರಿಸದ ಅರಣ್ಯಾಧಿಕಾರಿಗಳು
ಮಲೆ ಮಹದೇಶ್ವರ ಬೆಟ್ಟವನ್ಯ ಜೀವಿಯ ವಿಭಾಗದ ಗೋಪಿನಾಥಂ ವಲಯದ ಇಂಡಿಗನತ್ತ-ನಾಗಮಲೆ ಗ್ರಾಮಗಳ ಮಧ್ಯೆ ಬರುವ ಅರಣ್ಯ ಪ್ರದೇಶದಲ್ಲಿ ಶನಿವಾರ ರಾತ್ರಿ 11:30 ರಲ್ಲಿ ಗೋವಿಂದರಾಜು ಮತ್ತು ಆತನ ಸ್ನೇಹಿತ ಲೋಕೇಶ್ ಇಬ್ಬರು ನಾಗಮಲೆಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ವೇಳೆ ದಿಢೀರನೆ ಪ್ರತ್ಯಕ್ಷವಾದ ಕಾಡಾನೆ ಗೋವಿಂದರಾಜು ಮೇಲೆ ದಾಳಿ ಮಾಡಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೊತೆಯಲ್ಲಿದ್ದ ಲೋಕೇಶ್ ಸ್ವಲ್ಪ ಅಂತರದಲ್ಲಿಯೇ ಪ್ರಾಣಾಪಾಯದಿಂದ ಪಾರಾರಿಯಾಗಿದ್ದಾರೆ.