ದಾವಣಗೆರೆಯಲ್ಲಿ ಕೊರೋನಾದಿಂದ 37 ಮಂದಿ ಗುಣಮುಖ

By Kannadaprabha News  |  First Published Jul 15, 2020, 10:30 AM IST

ಬೆಣ್ಣೆ ನಗರಿ ದಾವಣಗೆರೆಯಲ್ಲಿ ಮಂಗಳವಾರ(ಜು.14) 37 ಮಂದಿ ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ದಾವಣಗೆರೆ(ಜು.15): ಕೊರೋನಾಗೆ ಮತ್ತೊಂದು ಬಲಿಯಾಗಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಮಂಗಳವಾರ 17 ಪಾಸಿಟಿವ್‌ ಪ್ರಕರಣ ವರದಿಯಾಗಿದ್ದು, ಸೋಂಕಿನಿಂದ ಗುಣಮುಖರಾದ 37 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ ಸಕ್ರಿಯ ಕೇಸ್‌ಗಳ ಸಂಖ್ಯೆ 108ಕ್ಕೆ ಇಳಿಕೆಯಾಗಿದೆ.

ನಗರದ ಎಸ್‌ಎಸ್‌ ಲೇಔಟ್‌ನ 85 ವರ್ಷದ ವೃದ್ಧೆ (ಪಿ-41693)ಯು ಜಿಲ್ಲಾ ನಿಗದಿತ ಕೋವಿಡ್‌​-19 ಆಸ್ಪತ್ರೆಯಲ್ಲಿ ಸೋಮವಾರ ಸಾವನ್ನಪ್ಪಿದ್ದಾರೆ. ಮೃತರು ಸೋಂಕಿನ ಜೊತೆಗೆ ಇತರೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಸರ್ಕಾರದ ಮಾರ್ಗಸೂಚಿ ಪ್ರಕಾರ ಮೃತರ ಅಂತ್ಯಕ್ರಿಯೆಯನ್ನು ನಡೆಸಲಾಗಿದೆ.

Latest Videos

undefined

ದಾವಣಗೆರೆ ತಾಲೂಕಿನಲ್ಲಿ 11, ಹರಿಹರ ತಾಲೂಕಿನಲ್ಲಿ 5 ಕೇಸ್‌ ಹಾಗೂ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ 1 ಸೇರಿದಂತೆ ಒಟ್ಟು 17 ಕೇಸ್‌ಗಳು ಮಂಗಳವಾರ ದೃಢಪಟ್ಟಿದ್ದು, ಜಿಲ್ಲಾ ನಿಗದಿತ ಕೋವಿಡ್‌-19 ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಹರಿಹರದ ವಿನಾಯಕ ನಗರದ 30 ವರ್ಷದ ಮಹಿಳೆ (41671), 19 ವರ್ಷದ ಮಹಿಳೆ (41674), 14 ವರ್ಷದ ಬಾಲಕಿ (41675), ದಾವಣಗೆರೆಯ 29 ವರ್ಷದ ಪುರುಷ(41677) ಸೋಂಕಿಗೊಳಗಾಗಿದ್ದಾರೆ. ಎಸ್‌ಎಸ್‌ ಲೇಔಟ್‌ನ 85 ವರ್ಷದ ವೃದ್ಧೆ (41693)ಯು ಶೀತಜ್ವರ (ಎಸ್‌ಎಆರ್‌ಐ)ನಿಂದ ಸೋಂಕಿಗೆ ತುತ್ತಾಗಿದ್ದಾರೆ.

ಹರಿಹರ ಭಾರತ ಆಯಿಲ್‌ ಮಿಲ್‌ ಕಾಂಪೌಂಡ್‌ನ 33 ವರ್ಷದ ಮಹಿಳೆ (41680) ಸೋಂಕಿತರ ಸಂಪರ್ಕದಿಂದ ಸೋಂಕಿಗೆ ತುತ್ತಾಗಿದ್ದಾರೆ. ದಾವಣಗೆರೆ ಎಲ್‌ಐಸಿ ಕಾಲನಿಯ 29 ವರ್ಷದ ಮಹಿಳೆ (41681) ಅಂತರ ಜಿಲ್ಲಾ ಪ್ರವಾಸ ಹಿನ್ನೆಲೆ, ನಿಜಲಿಂಗಪ್ಪ ಬಡಾವಣೆಯ 45 ವರ್ಷದ ಪುರುಷ (41682) ಸೋಂಕಿನ ಪತ್ತೆ ಕಾರ್ಯ ಕೈಗೊಳ್ಳಲಾಗಿದೆ.

ಇಲ್ಲಿನ ರಂಗನಾಥ ಬಡಾವಣೆಯ 28 ವರ್ಷದ ಮಹಿಳೆ (41683), ಬಳ್ಳಾರಿ ಜಿಲ್ಲೆ ಹೊಸಪೇಟೆಯ 59 ವರ್ಷದ ವೃದ್ಧೆ (41685) ಸಂಪರ್ಕ ಪತ್ತೆ ಕಾರ್ಯ ಕೈಗೊಳ್ಳಲಾಗಿದೆ. ತೀವ್ರ ಉಸಿರಾಟ ಸಮಸ್ಯೆ (ಐಎಲ್‌ಐ)ಯಿಂದಾಗಿ ದಾವಣಗೆರೆ ತಾ. ಬಸವನಾಳ್‌ ಗ್ರಾಮದ 60 ವರ್ಷದ ವೃದ್ಧ (41692), ದಾವಣಗೆರೆ ದೇವರಾಜ ಬಡಾವಣೆಯ 61 ವರ್ಷದ ವೃದ್ಧ (61686) ಸೋಂಕಿಗೆ ತುತ್ತಾಗಿದ್ದಾರೆ.

ನಗರದ ಎಂಸಿಸಿ ‘ಬಿ’ ಬ್ಲಾಕ್‌ನ 42 ವರ್ಷದ ಪುರುಷ (41687) ಸಂಪರ್ಕ ಪತ್ತೆ ಮಾಡಲಾಗುತ್ತಿದೆ. ವಿದ್ಯಾನಗರದ 55 ವರ್ಷದ ಮಹಿಳೆ (41688), ಹರಿಹರದ ವಿನಾಯಕ ನಗರದ 12 ವರ್ಷದ ಬಾಲಕಿ (41689), ದಾವಣಗೆರೆ ಎಸ್‌ಎಸ್‌ ಲೇಔಟ್‌ನ 31 ವರ್ಷದ ಪುರುಷ (41690) ಅಂತರ ಜಿಲ್ಲಾ ಪ್ರವಾಸ ಹಿನ್ನೆಲೆ ಸೋಂಕಿಗೊಳಗಾಗಿದ್ದಾರೆ. ಎಂಸಿಸಿ ‘ಎ’ ಬ್ಲಾಕ್‌ನ 45 ವರ್ಷದ ಪುರುಷ (41691)ನು ತೀವ್ರ ಉಸಿರಾಟ(ಐಎಲ್‌ಐ) ಸಮಸ್ಯೆಯಿಂದ ಸೋಂಕಿತರಾಗಿದ್ದಾರೆ.

ಗುಣಮುಖರಾದ ಆಂಧ್ರಪ್ರದೇಶದ ಅನಂತಪುರದ 63 ವರ್ಷದ ವೃದ್ಧ (ಪಿ-23566), ದಾವಣಗೆರೆ ಬಾಷಾ ನಗರದ 65 ವರ್ಷದ ವೃದ್ಧ (25825), ಚನ್ನಗಿರಿ ತಾ. ಕೊಂಡದಹಳ್ಳಿಯ 28 ವರ್ಷದ ಪುರುಷ (35911), ಹೊರಕೆರೆಯ 23 ವರ್ಷದ ಮಹಿಳೆ (35912), ದಾವಣಗೆರೆ ಕುರುಬರ ಕೇರಿಯ 47 ವರ್ಷದ ಪುರುಷ (35913), 60 ವರ್ಷದ ಮಹಿಳೆ (35914) ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಗಳೂರಿನ ಶ್ರೀ ಮಾರಿಕಾಂಬ ದೇವಸ್ಥಾನ ಸಮೀಪದ 23 ವರ್ಷದ ಮಹಿಳೆ (35915), ಚನ್ನಗಿರಿ ತಾ. ಮೆದಿಕೆರೆಯ 22 ವರ್ಷದ ಯುವಕ(35916), ಹಿರೇಕೋಗಲೂರಿನ 65 ವರ್ಷದ ಮಹಿಳೆ (35922), ಹಾವೇರಿ ಜಿಲ್ಲೆ ಚಳಗೇರಿಯ 26 ವರ್ಷದ ಪುರುಷ (35923) ಬಿಡುಗಡೆಯಾಗಿದ್ದಾರೆ. ಚನ್ನಗಿರಿಯ ಕುಂಬಾರ ಬೀದಿಯ 31 ವರ್ಷದ ಪುರುಷ(35924), 28 ವರ್ಷದ ಮಹಿಳೆ (35925), ಹರಿಹರದ ತಗ್ಗಿನ ಕೇರಿಯ 20 ವರ್ಷದ ಯುವಕ (35926) ಅಸ್ಪತ್ರೆಯಿಂದ ಮನೆಗೆ ಬಿಡುಗಡೆಯಾದವರು.

ಸೀಲ್‌ಡೌನ್‌ ಪ್ರದೇಶದ ಜನರಿಗೆ ಸೂಕ್ತ ಸೌಲಭ್ಯ ಒದಗಿಸಲು ಕಾಗೋಡು ತಿಮ್ಮಪ್ಪ ಒತ್ತಾಯ

ಹೊನ್ನಾಳಿ ಅಕ್ಕಸಾಲಿ ಬೀದಿಯ 49 ವರ್ಷದ ಪುರುಷ(35927), 54 ವರ್ಷದ ಪುರುಷ(35928), 35 ವರ್ಷದ ಮಹಿಳೆ (35929), 39 ವರ್ಷದ ಪುರುಷ (35930), ದಾವಣಗೆರೆ ನರಸರಾಜ ಪೇಟೆಯ 52 ವರ್ಷದ ಮಹಿಳೆ (35951), 21 ವರ್ಷದ ಮಹಿಳೆ(35952), 7 ವರ್ಷದ ಬಾಲಕ (35953), 30 ವರ್ಷದ ಮಹಿಳೆ (35954), ಚನ್ನಗಿರಿ ರಾಜಗೊಂಡನಹಳ್ಳಿ ತಾಂಡಾದ 23 ವರ್ಷದ ಪುರುಷ (35958), ಹೊನ್ನಾಳಿ ತಾ. ಚಿನ್ನಿಕಟ್ಟೆಯ 51 ವರ್ಷದ ಪುರುಷ (36429) ಬಿಡುಗಡೆಯಾದವರಾಗದ್ದಾರೆ.

ಬಿದರಹಳ್ಳಿಯ 17 ವರ್ಷದ ಯುವತಿ (36584), ದಾವಣಗೆರೆ ಹನುಮಂತ ನಗರದ 33 ವರ್ಷದ ಮಹಿಳೆ (36602), ಬಳ್ಳಾರಿ ಜಿಲ್ಲೆ ಸಂಡೂರಿನ 68 ವರ್ಷದ ಪುರುಷ (38998), 47 ವರ್ಷದ ಪುರುಷ (39003), ಹರಿಹರ ಇಂದಿರಾ ನಗರದ 55 ವರ್ಷದ ಪುರುಷ (39262), ಹಳ್ಳದ ಕೇರಿಯ 12 ವರ್ಷದ ಬಾಲಕ (39319), 40 ವರ್ಷದ ಪುರುಷ (39343), ಹಳ್ಳದ ಕೇರಿಯ 32 ವರ್ಷದ ಮಹಿಳೆ (39352), ಕುಂಬಾರ ಓಣಿಯ 10 ವರ್ಷದ ಬಾಲಕಿ (39362), ಅಮರಾವತಿ ಬಡಾವಣೆಯ 26 ವರ್ಷದ ಪುರುಷ (39371) ಆಸ್ಪತ್ರೆಯಿಂದ ಬಿಡುಗಡೆಯಾಗ ಮನೆಗೆ ಮರಳಿದ್ದಾರೆ.

ದಾವಣಗೆರೆಯ 51 ವರ್ಷದ ಮಹಿಳೆ (39378), 12 ವರ್ಷದ ಬಾಲಕಿ (39388), ಚನ್ನಗಿರಿ ತಾ. ಪಾಂಡೋಮಟ್ಟಿಯ 56 ವರ್ಷದ ಪುರುಷ (39399), 42 ವರ್ಷದ ಮಹಿಳೆ(39407) ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಹೋಂ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ.
 

click me!