ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸುಳೇಭಾವಿ, ಬಾಳೆಕುಂದ್ರಿ, ಹೊನ್ನಿಹಾಳ ಹಾಗೂ ಯದ್ದಲಬಾವಿ ಹಟ್ಟಿ ಗ್ರಾಮದ ಬಿಜೆಪಿ ಪ್ರಮುಖರು, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಬೆಳಗಾವಿ : ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸುಳೇಭಾವಿ, ಬಾಳೆಕುಂದ್ರಿ, ಹೊನ್ನಿಹಾಳ ಹಾಗೂ ಯದ್ದಲಬಾವಿ ಹಟ್ಟಿ ಗ್ರಾಮದ ಬಿಜೆಪಿ ಪ್ರಮುಖರು, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಸುಳೇಭಾವಿ ಗ್ರಾಪಂ ಮಾಜಿ ಅಧ್ಯಕ್ಷ ನಾನಪ್ಪ ಪಾರ್ವತಿ, ಮಾಜಿ ಉಪಾಧ್ಯಕ್ಷ ದ್ಯಾಮಣ್ಣ ಒಂಟಿ, ಜೀವಣಪ್ಪ ಶಿಂಧೆ, ಆಶೋಕ ಯರಝರವಿ, ಲಕ್ಷ್ಮಣ ಮೂರಾರಿ, ದೇವಪ್ಪ ಪಾಟೀಲ, ಯಮನಪ್ಪ ರಾಹುಲ ಗೌಡರ, ಅಶೋಕ ಒಂಟಿ, ಮಹೇಶ ದೇವಡಿ, ಬಾಳಕೇಶ ಭೀಮಪ್ಪ ಕಿರಿಬನೂರು, ಬಸವಪ್ಪ ಮ್ಯಾಕಲೇಗೊಳ, ವಿಠಲ ಪಾರ್ವತಿ, ಕಿಟ್ಟು ತಿಗಡಿ, ಸಂತೋಷ ಸುರ್ವೆ, ಪ್ರಕಾಶ ಮರಗಿ, ಪ್ರಕಾಶ ಬೈರಪ್ಪನವರ, ಮಂಜುನಾಥ ದುದುಮಿ, ತಮ್ಮಣ್ಣ ಕಾಮ್ಕರ್ ಸೇರಿದಂತೆ 35ಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್ ಸೇರಿದರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಎಲ್ಲರಿಗೂ ಹಾರ ಮತ್ತು ಕಾಂಗ್ರೆಸ್ ಶಾಲು ಹಾಕಿ ಪಕ್ಷಕ್ಕೆ ಸ್ವಾಗತಿಸಿದರು.
undefined
ಬಿಜೆಪಿ ಮಾಜಿ ಸಂಸದ ಕರಡಿ ಸಂಗಣ್ಣ ಕಾಂಗ್ರೆಸ್ ಸೇರ್ಪಡೆ
50ಕ್ಕೂ ಅಧಿಕ ಮಂದಿ ಕೈನತ್ತ
ಕೊಪ್ಪಳ : ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಾಜಿ ಸಂಸದ ಸಂಗಣ್ಣ ಕರಡಿ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಅವರ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಕೊಪ್ಪಳ ತಾಲೂಕಿನ ಅಬ್ಬಿಗೇರಿ, ನೀರಲಗಿ, ಕವಲೂರು, ಕೊಪ್ಪಳ ನಗರದ ಪಿರ್ದೋಸ್ ನಗರ, ದೇವರಾಜ ಅರಸ್ ಕಾಲನಿ, ಭಾಗ್ಯನಗರದ ಬೇಂದ್ರೆ ನಗರ, ಪ್ರಶಾಂತ ನಾಯಕ, ಗವಿ ಹೂಗಾರ, ನವೀನ ಗಿಣಿಗೇರಿ, ಅಕ್ಬರ್ ಸಾಬ್, ಅಜಗರ ಅಲಿ, ಅಲ್ತಾಫ್, ದೇವೇಂದ್ರ ಮುಂತಾದವರು ಸೇರಿ 50ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.ಪ್ರಸನ್ನ ಗಡದ, ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ಗಾಳೆಪ್ಪ ಎಚ್. ಪೂಜಾರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಲ್ಟನ್, ರಾಮಣ್ಣ ಚೌಡಿಕಿ, ರಾಮಣ್ಣ ಕಲನವರ್, ಶಿವಮೂರ್ತಿ ಗುತ್ತೂರ್, ನಾಗನ ಗೌಡ, ಸಿದ್ದೇಶ್ ದದೆಗಲ್, ಕೆಪಿಸಿಸಿ ಜಿಲ್ಲಾ ಮಾಧ್ಯಮ ವಕ್ತಾರ ಪರಶುರಾಮ್ ಕೆರೆಹಳ್ಳಿ ಹಾಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.