ಬೆಂಗಳೂರು ಕರಗಕ್ಕೆ ನೂರೆಂಟು ವಿಘ್ನ : ನಡೆಯೋದು ಡೌಟ್

By Kannadaprabha NewsFirst Published Apr 6, 2021, 3:42 PM IST
Highlights

ಬೆಂಗಳೂರು ಪ್ರಸಿದ್ಧ ಕರಗಕ್ಕೆ ಆರಂಭದಲ್ಲೇ ಕಂಟಕ ಎದುರಾಗಿದೆ. ಧರ್ಮರಾಯಸ್ವಾಮಿ ದೇಗುಲದ ಪಕ್ಕದಲ್ಲೇ 33 ಪ್ರಕರಣಗಳು ಪತ್ತೆಯಾಗಿದೆ.

ಬೆಂಗಳೂರು (ಏ.06): ಬೆಂಗಳೂರಿನ ಐತಿಹಾಸಿಕ ಕರಗಕ್ಕೆ ಮಹಾ ಕಂಟಕ ಎದುರಾಗಿದೆ.  ಕರಗ ಪ್ರಾರಂಭವಾಗುವುದಕ್ಕೂ ಮುಂಚೆಯೇ ಧರ್ಮರಾಯ ಸ್ವಾಮಿಗೆ ನೂರೆಂಟು ವಿಘ್ನ ಎದುರಾಗಿದೆ. 

ಧರ್ಮರಾಯ ಸ್ವಾಮಿ ದೇವಾಲಯದ ಪಕ್ಕದಲ್ಲೇ 33 ಪಾಸಿಟಿವ್ ಕೇಸ್ ಪತ್ತೆಯಾಗಿದೆ.  ಮಹಾರಾಷ್ಟ್ರದಿಂದ  ಬಂದವರಲ್ಲಿ ಸೋಂಕು ಕಾಣಿಸಿಕೊಂಡಿದೆ.  ಇಲ್ಲಿರುವ ಮೆಹ್ತಾ ಟವರ್ಸ್ ಕಟ್ಟಡದಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಧರ್ಮರಾಯಸ್ವಾಮಿ ದೇವಾಲಯದ ಬಳಿಯಲ್ಲಿಯೇ ಮೆಹ್ತಾ ಟವರ್ಸ್ ಇದ್ದು ಇನ್ನಷ್ಟು ಆತಂಕ ಮೂಡಿಸಿದೆ. 

ಬ್ರಿಟಿಷ್ ಕಾಲದಲ್ಲೂ, ಕರ್ಫ್ಯೂ ಇದ್ದಾಗಲೂ ಕರಗ ನಡೆದಿತ್ತು : ಈ ಬಾರಿ ನಡೆಯುತ್ತಾ

ಈಗಾಗಲೇ ಕರಗ ನಡೆಸುವ ಬಗ್ಗೆ ನಿನ್ನೆಯಷ್ಟೇ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ  ಸಭೆ ನಡೆಸಿದ್ದು, ಇದೇ ತಿಂಗಳು 27 ಕ್ಕೆ  ಕರಗ ನಡೆಸಲು ತೀರ್ಮಾನಿಸಲಾಗಿತ್ತು. 

ಆದರೆ ಕೊರೋನಾ ಮಹಾಮಾರಿ ಕಾಣಿಸಿಕೊಂಡ ಹಿನ್ನೆಲೆ ಆಯುಕ್ತ ಗೌರವ್ ಗುಪ್ತಾ ಅಪಾಟ್೯ ಮೆಂಟ್ ಪರಿಸ್ಥಿತಿ ನೋಡಿ ಕರಗ ನಡೆಸುವ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು. 

click me!