Koppal: ಸಿಹಿ ತಿಂಡಿಯ ಬಾಟಲಿ ಗಂಟಲಲ್ಲಿ ಸಿಲುಕಿ 3 ವರ್ಷದ ಬಾಲಕ ಸಾವು

By Kannadaprabha News  |  First Published Apr 29, 2023, 9:24 PM IST

ಸಿಹಿ ತಿನಿಸಿನ ಗಾಜಿನ ಬಾಟಲಿ ಮಗುವಿನ ಗಂಟಲಲ್ಲಿ ಸಿಲುಕಿ ಹಾಕಿಕೊಂಡು ಮಗು ಮೃತಪಟ್ಟ ಘಟನೆ ಜರುಗಿದೆ. ಪಟ್ಟಣದ ಮದೀನಾ ಗಲ್ಲಿಯ ನಿವಾಸಿ ರಬ್ಬಾನಿ ಬಾಗೇವಾಡಿ ಅವರ ಮಗ ಮಹ್ಮದಹ್ಮದ್ ರಬ್ಬಾನಿ ಬಾಗೇವಾಡಿ (2) ಮೃತಪಟ್ಟ ಬಾಲಕನೆಂದು ಗುರುತಿಸಲಾಗಿದೆ. 


ಕುಷ್ಟಗಿ (ಏ.29): ಸಿಹಿ ತಿನಿಸಿನ ಗಾಜಿನ ಬಾಟಲಿ ಮಗುವಿನ ಗಂಟಲಲ್ಲಿ ಸಿಲುಕಿ ಹಾಕಿಕೊಂಡು ಮಗು ಮೃತಪಟ್ಟ ಘಟನೆ ಜರುಗಿದೆ. ಪಟ್ಟಣದ ಮದೀನಾ ಗಲ್ಲಿಯ ನಿವಾಸಿ ರಬ್ಬಾನಿ ಬಾಗೇವಾಡಿ ಅವರ ಮಗ ಮಹ್ಮದಹ್ಮದ್ ರಬ್ಬಾನಿ ಬಾಗೇವಾಡಿ (2) ಮೃತಪಟ್ಟ ಬಾಲಕನೆಂದು ಗುರುತಿಸಲಾಗಿದೆ. ಸಿಹಿ ತಿನಿಸಿನ ಬಾಟಲಿ ಖರೀದಿ ಮಾಡಿಕೊಂಡು ಸಿಹಿ ತಿನಿಸನ್ನು ಬಾಯಲ್ಲಿ ಹಾಕಿಕೊಳ್ಳುವ ಸಂದರ್ಭದಲ್ಲಿ ಕೈ ಜಾರಿ ಬಾಟಲಿ ಗಂಟಲಿನಲ್ಲಿ ಹೋಗಿರುವ ಪರಿಣಾಮವಾಗಿ ಮೃತಪಟ್ಟಿದ್ದು ಮನಕಲಕುವ ಘಟನೆಗೆ  ಕುಷ್ಟಗಿ ಪಟ್ಟಣ ಸಾಕ್ಷಿಯಾಗಿದೆ.

ಸಿಹಿ ತಿಂಡಿಯ ಬಾಟಲಿಯ ಮುಚ್ಚಳವನ್ನು ಬಾಲಕ ತನ್ನ ಬಾಯಿಂದ ತೆಗೆಯಲು ಪ್ರಯತ್ನ ಮಾಡುತ್ತಿರುವಾಗ ಗಂಟಲಿನ ಅನ್ನನಾಳದಲ್ಲಿ ಅಡ್ಡ ಸಿಲುಕಿಕೊಂಡ  ಪರಿಣಾಮವಾಗಿ ತೀವ್ರ ಅಸ್ವಸ್ಥಗೊಂಡಿದ್ದಾನೆ. ರಬ್ಬಾನಿ ಬಾಗೇವಾಡಿ ಗಮನಕ್ಕೆ ಬರುತ್ತಿದ್ದಂತೆ ತಕ್ಷಣವೇ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲು ತೆರಳುವ ದಾರಿ ಮಧ್ಯದಲ್ಲಿ ಬಾಲಕ ಮೃತಪಟ್ಟಿದ್ದಾನೆ.

Tap to resize

Latest Videos

undefined

ಮಸಾಲಾ ಜಯರಾಂ ಸಚಿವರಾಗುವುದು ನಿಶ್ಚಿತ: ರಾಜ್ಯಸಭಾ ಸದಸ್ಯ ಜಗ್ಗೇಶ್‌

ತಾಯಿಯ ಆಕ್ರಂದನ ಮುಗಿಲು ಮುಟ್ಟಿದ್ದು ಕಂಡು ಬಂತು: ತಾಯಿ ಮೃತಪಟ್ಟ ಬಾಲಕನನ್ನು 9 ತಿಂಗಳು ತನ್ನ ಉದರದಲ್ಲಿ ಇಟ್ಟುಕೊಂಡು  ಮಗು ಹುಟ್ಟಿದ ನಂತರ ಎರಡು ವರ್ಷಗಳ ಕಾಲ ಚೆನ್ನಾಗಿ ತಿನಿಸಿ ಉಳಿಸಿ ಬೆಳೆಸಿದ್ದಳು. ಆದರೆ ಮಗುವಿನ ದುರ್ಮರಣ ಸಿಹಿ ತಿಂಡಿಯ ಸಾವುನಪ್ಪಿದ ವಿಷಯಕ್ಕೆ ಜನತೆ ದಿಗ್ಭ್ರಮೆಯನ್ನು  ವ್ಯಕ್ತಪಡಿಸಿದರು.

ಮನೆ ಮಹಡಿಯಿಂದ ಜಾರಿ ಬಿದ್ದು ಮೇಸ್ತ್ರಿ ಸಾವು: ಮನೆಯ ಮಹಡಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಯುವಕನೋರ್ವ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಕುಕ್ಕಾವಿನಲ್ಲಿ ನಡೆದಿದೆ. ತಾಲೂಕಿನ ಮಿತ್ತಬಾಗಿಲು ಗ್ರಾಮದ ಕುಕ್ಕಾವು ಮನೆಯ ನಿವಾಸಿ ಲಕ್ಷ್ಮಣ ಕುಂಬಾರ ಎಂಬವರ ಪುತ್ರ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಹರೀಶ್‌ (30) ಸಾವನ್ನಪ್ಪಿದ ದುರ್ದೈವಿ.

ಕಾಂಗ್ರೆಸ್‌ ನೀಡಿದ್ದ ಅನುದಾನ ಇಳಿಸಿದ್ದು ಎಚ್‌ಡಿಕೆ: ಜಮೀರ್‌ ಅಹಮದ್‌ ಖಾನ್‌

ಏ.21ರಂದು ಹರೀಶ್‌, ನಾರಾಯಣ ಕುಂಬಾರ ಎಂಬವರಿಗೆ ಸೇರಿದ ಮನೆಯ ಮಹಡಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ತಲೆಯ ಮಧ್ಯೆ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಅವರನ್ನು ಕೂಡಲೇ ಉಜಿರೆಯ ಆಸ್ಪತ್ರೆಗೆ ಸೇರಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಒಂದು ವಾರ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡಿ ಶುಕ್ರವಾರ ಮಧ್ಯಾಹ್ನ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೃತರು ತಂದೆ ಲಕ್ಷ್ಮಣ ಕುಂಬಾರ, ತಾಯಿ ಕುಸುಮಾವತಿ, ಪತ್ನಿ, ಒಂದೂವರೆ ವರ್ಷದ ಮಗು, ಸಹೋದರರು, ಸಹೋದರಿಯರು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

click me!