ತುಮಕೂರು: 3 ಸಾವಿರ ಕೋಳಿಗಳು ಬೆಂಕಿಗಾಹುತಿ

By Suvarna News  |  First Published Jan 25, 2020, 10:39 AM IST

ತುಮಕೂರಿನಲ್ಲಿ ನಡೆದ ಬೆಂಕಿ ಅವಘಡದಲ್ಲಿ ಸಾವಿರಾರು ಕೋಳಿಗಳು ಬೆಂಕಿಗಾಹುತಿಯಾಗಿದೆ. ಸುಮಾರು 3 ಸಾವಿರ ಕೋಳಿಗಳು ಬೆಂಕಿಗಾಹುತಿಯಾಗಿದೆ.


ತುಮಕೂರು(ಜ.25): ತುಮಕೂರಿನಲ್ಲಿ ನಡೆದ ಬೆಂಕಿ ಅವಘಡದಲ್ಲಿ ಸಾವಿರಾರು ಕೋಳಿಗಳು ಬೆಂಕಿಗಾಹುತಿಯಾಗಿದೆ. ಸುಮಾರು 3 ಸಾವಿರ ಕೋಳಿಗಳು ಬೆಂಕಿಗಾಹುತಿಯಾಗಿದೆ. ಕೋಳಿ ಫಾರಂಗೆ ಬೆಂಕಿ ತಗುಲಿದ್ದು ಸಾವಿರಾರು ಕೋಳಿಗಳು ಬೆಂಕಿಗಾಹುತಿಯಾಗಿವೆ.

ಆಕಸ್ಮಿಕ ಬೆಂಕಿಗೆ ಕೋಳಿ ಫಾರಂ ಹಾಗೂ ಪಾಲಿಹೌಸ್ ಭಸ್ಮವಾಗಿದ್ದು, ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ  ಎಳನಾಡು ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಸಿದ್ದರಾಮಯ್ಯಗೆ ಎಂಬ ವ್ಯಕ್ತಿಗೆ ಸೇರಿದ ಕೋಳಿ ಫಾರಾಂಗೆ ಬೆಂಕಿ ಬಿದ್ದಿದೆ.

Tap to resize

Latest Videos

ಬಾಂಬರ್ ಆದಿತ್ಯರಾವ್‌ನ ಇಂಟ್ರೆಸ್ಟಿಂಗ್ ಕಹಾನಿ ಕೇಳಿದ ಪೊಲೀಸರು

ಘಟನೆಯಲ್ಲಿ ಸುಮಾರು 3000 ಕೋಳಿಗಳು ಸುಟ್ಟು ಭಸ್ಮವಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಕೋಳಿ ಫಾರಂ ಸಂಪೂರ್ಣ ಉರಿದು ಭಸ್ಮವಾಗಿದೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!