ಮಲ್ಪೆ ಬೀಚಲ್ಲಿ ಮುಳುಗುತ್ತಿದ್ದ 3 ವಿದ್ಯಾರ್ಥಿಗಳ ರಕ್ಷಣೆ

By Kannadaprabha News  |  First Published Sep 23, 2021, 9:16 AM IST
  • ಮಲ್ಪೆ ಸಮುದ್ರ ತೀರದಲ್ಲಿ ಮುಳುಗುತ್ತಿದ್ದ 3 ಮಂದಿ ಪ್ರವಾಸಿಗರ ರಕ್ಷಣೆ
  • ಶಿವಮೊಗ್ಗದ ಸುಮಾರು 35 ಮಂದಿ ವಿದ್ಯಾರ್ಥಿಗಳು ಬಸ್ಸಿನಲ್ಲಿ ಮಲ್ಪೆ ಸಮುದ್ರ ತೀರಕ್ಕೆ ಪ್ರವಾಸಕ್ಕೆಂದು ಬಂದಿದ್ದರು.
  • ಭಾರಿ ಅಲೆಯೊಂದು ಅಪ್ಪಳಿಸಿ  ದುರಂತ

ಉಡುಪಿ (ಸೆ.23): ಮಲ್ಪೆ ಸಮುದ್ರ ತೀರದಲ್ಲಿ ಮುಳುಗುತ್ತಿದ್ದ 3 ಮಂದಿ ಪ್ರವಾಸಿಗರನ್ನು ಬುಧವಾರ ರಕ್ಷಿಸಲಾಗಿದೆ. ಅವರನ್ನು ಶಿವಮೊಗ್ಗದ ತರಿಕೆರೆ ನಿವಾಸಿ ಕಿರಣ್‌ (19), ಕಾಶಿಪುರ ನಿವಾಸಿಗಳಾದ ನಿತಿನ್‌ (19) ಮತ್ತು ಮಂಜುನಾಥ್‌ (19) ಎಂದು ಗುರುತಿಸಲಾಗಿದೆ.

ಬುಧವಾರ ಮಧ್ಯಾಹ್ನ ಶಿವಮೊಗ್ಗದ ಸುಮಾರು 35 ಮಂದಿ ವಿದ್ಯಾರ್ಥಿಗಳು ಬಸ್ಸಿನಲ್ಲಿ ಮಲ್ಪೆ ಸಮುದ್ರ ತೀರಕ್ಕೆ ಪ್ರವಾಸಕ್ಕೆಂದು ಬಂದಿದ್ದರು.

Tap to resize

Latest Videos

ಸಮುದ್ರದಲ್ಲಿ ಮುಳುಗುತ್ತಿದ್ದ ಮಗುವನ್ನು ರಕ್ಷಿಸಿದ ನಾಯಿ, ಪ್ರಾಮಾಣಿಕತೆಗಿಲ್ಲ ಸರಿಸಾಟಿ!

ಮಳೆಗಾಲವಾದ್ದರಿಂದ ಸಮುದ್ರ ಪ್ರಕ್ಷುಬ್ಧವಾಗಿದ್ದು, ಕೆಲವು ವಿದ್ಯಾರ್ಥಿಗಳು ಸಮುದ್ರಕ್ಕಿಳಿದು ನೀರಲ್ಲಿ ಆಟವಾಡತೊಡಗಿದ್ದರು. ಆಗ ಭಾರಿ ಅಲೆಯೊಂದು ಅಪ್ಪಳಿಸಿ ಒಬ್ಬ ವಿದ್ಯಾರ್ಥಿ ಕೊಚ್ಚಿಕೊಂಡ ಹೋಗಿದ್ದ. ಆತನನ್ನು ರಕ್ಷಿಸಲು ಇನ್ನಿಬ್ಬರು ಮುಂದಕ್ಕೆ ಹೋದಾಗ ಅವರೂ ಕೊಚ್ಚಿಕೊಂಡು ಹೋಗಿದ್ದರು. ತಕ್ಷಣ ಇತರ ವಿದ್ಯಾರ್ಥಿಗಳು ಬೊಬ್ಬೆ ಹೊಡೆದಾಗ, ಬೀಚಿನ ಜೀವರಕ್ಷಕರು ಸಮುದ್ರಕ್ಕೆ ಧುಮುಕಿ ಮೂವರೂ ವಿದ್ಯಾರ್ಥಿಗಳನ್ನು ಮೇಲೆಕ್ಕೆ ಎಳೆದು ತಂದು ರಕ್ಷಿಸಿದ್ದಾರೆ.

ಕೊರೋನಾ ಲಾಕ್‌ಡೌನ್‌ ಸಂದರ್ಭದಲ್ಲಿ ಮಲ್ಪೆ ಬೀಚಿಗೆ ಪ್ರವಾಸಿಗರನ್ನು ನಿಷೇಧಿಸಿದ್ದ ಅವಧಿಯಲ್ಲಿ ಬೀಚಲ್ಲಿ ಬೇಲಿ ಹಾಕಲಾಗಿತ್ತು. ಇದೀಗ ಪ್ರವಾಸಿಗರಿಗೆ ಮತ್ತೆ ಅವಕಾಶ ನೀಡಿರುವುದರಿಂದ ಬೇಲಿಯನ್ನು ತೆಗೆದು ಹಾಕಲಾಗಿದ್ದು, ಬೀಚಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ

click me!