ಕೊಪ್ಪಳ: ಹುಲಿಗೆಮ್ಮ ದೇವಿ ದರ್ಶನಕ್ಕೆ 3 ಲಕ್ಷ ಭಕ್ತರು..!

Published : Feb 06, 2023, 11:26 AM IST
ಕೊಪ್ಪಳ: ಹುಲಿಗೆಮ್ಮ ದೇವಿ ದರ್ಶನಕ್ಕೆ 3 ಲಕ್ಷ ಭಕ್ತರು..!

ಸಾರಾಂಶ

ಹುಣ್ಣಿಮೆ ಪ್ರಯುಕ್ತ ದೇಗುಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನಡೆದವು. ಭಾನುವಾರ ಬೆಳಗ್ಗೆ 6ಕ್ಕೆ ಹುಲಿಗೆಮ್ಮ ದೇವಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಹಾಗೂ ಮಹಾ ನೈವೇದ್ಯ ನೆರವೇರಿಸಲಾಯಿತು. ಭಾನುವಾರ ರಾತ್ರಿ ದೇವಸ್ಥಾನದಲ್ಲಿ ಗಂಗಾದೇವಿ ಪೂಜೆ, ಕ್ಷೇತ್ರಪಾಲ ಅಜ್ಜಪ್ಪನಿಗೆ ಗುಗ್ರಿ ಮುಟ್ಟಿಗೆ ಕಟ್ಟುವ ಪೂಜೆ, ರಾಜ ಮಾತಂಗಿಗೆ ಕ್ಷೀರ ಸಮರ್ಪಣೆ ಹಾಗೂ ಪೂಜಾರರಿಗೆ ಗುಗ್ರಿ ಉಡಿ ತುಂಬು ಕಾರ್ಯಕ್ರಮದೊಂದಿಗೆ ಭಾರತ ಹುಣ್ಣಿಮೆ ಪೂಜೆಗಳು ಸಂಪನ್ನಗೊಂಡವು. 

ಮುನಿರಾಬಾದ್‌(ಫೆ.06): ಭಾರತ ಹುಣ್ಣಿಮೆ ಪ್ರಯುಕ್ತ ಭಾನುವಾರ ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಹುಲಿಗೆಮ್ಮ ದೇವಸ್ಥಾನಕ್ಕೆ ಸುಮಾರು ಮೂರು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದರು. ಶನಿವಾರ ರಾತ್ರಿಯಿಂದಲೇ ಪರಸ್ಥಳಗಳಿಂದ ಸಾವಿರಾರು ಭಕ್ತರು ಹುಲಿಗಿ ಗ್ರಾಮಕ್ಕೆ ಬರಲು ಪ್ರಾರಂಭಿಸಿದರು. ಶನಿವಾರ ರಾತ್ರಿ ದೇವಸ್ಥಾನದ ಆವರಣದಲ್ಲಿ ಸುಮಾರು 60 ಸಾವಿರ ಭಕ್ತರು ಇದ್ದರು. ಭಾನುವಾರ ಬೆಳಗ್ಗೆ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಅಮ್ಮನವರ ದರ್ಶನ ಪಡೆದರು.

ಹುಣ್ಣಿಮೆ ಪ್ರಯುಕ್ತ ದೇಗುಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನಡೆದವು. ಭಾನುವಾರ ಬೆಳಗ್ಗೆ 6ಕ್ಕೆ ಹುಲಿಗೆಮ್ಮ ದೇವಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಹಾಗೂ ಮಹಾ ನೈವೇದ್ಯ ನೆರವೇರಿಸಲಾಯಿತು.
ಭಾನುವಾರ ರಾತ್ರಿ ದೇವಸ್ಥಾನದಲ್ಲಿ ಗಂಗಾದೇವಿ ಪೂಜೆ, ಕ್ಷೇತ್ರಪಾಲ ಅಜ್ಜಪ್ಪನಿಗೆ ಗುಗ್ರಿ ಮುಟ್ಟಿಗೆ ಕಟ್ಟುವ ಪೂಜೆ, ರಾಜ ಮಾತಂಗಿಗೆ ಕ್ಷೀರ ಸಮರ್ಪಣೆ ಹಾಗೂ ಪೂಜಾರರಿಗೆ ಗುಗ್ರಿ ಉಡಿ ತುಂಬು ಕಾರ್ಯಕ್ರಮದೊಂದಿಗೆ ಭಾರತ ಹುಣ್ಣಿಮೆ ಪೂಜೆಗಳು ಸಂಪನ್ನಗೊಂಡವು.

ತಾಂತ್ರಿಕ, ಆಡಳಿತಾತ್ಮಕ ಸಮಸ್ಯೆಯ ನೆಪ: ಕನಕಗಿರಿ ಪಾಲಿಟೆಕ್ನಿಕ್‌ ಕಾಲೇಜು ಬೆಂಗಳೂರಿಗೆ ಎತ್ತಂಗಡಿ!

ಹುಣ್ಣಿಮೆ ಪ್ರಯುಕ್ತ ಹುಲಿಗಿ ಗ್ರಾಮಕ್ಕೆ ಲಕ್ಷಾಂತರ ಭಕ್ತರು ಬಂದ ಹಿನ್ನೆಲೆ ಹೊಸಪೇಟೆ, ಕೊಪ್ಪಳ ಹಾಗೂ ಗಂಗಾವತಿಯಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ವಿಶೇಷ ಬಸ್ಸುಗಳ ಸೌಲಭ್ಯ ಕಲ್ಪಿಸಿತು. ರಾಜ್ಯವಲ್ಲದೇ ನೆರೆಯ ಆಂಧ್ರ ಮತ್ತು ತೆಲಂಗಾಣದಿಂದಲೂ ಭಾರಿ ಸಂಖ್ಯೆಯ ಭಕ್ತರು ದೇವಿ ದರ್ಶನಕ್ಕೆ ಆಗಮಿಸಿದ್ದರು.

ವಾಹನ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಕೊಪ್ಪಳ-ಹೊಸಪೇಟೆ ಹಾಗೂ ಬಳ್ಳಾರಿ ಕಡೆಯಿಂದ ಬರುವ ವಾಹನಗಳಿಗೆ ಕೋರಮಂಡಲ ರಾಸಾಯನಿಕ ಕಾರ್ಖಾನೆ ಮುಂಭಾಗದಲ್ಲಿರುವ ಜಾಗದಲ್ಲಿ ನಿಲ್ಲಿಸಲು ಅವಕಾಶ ಕಲ್ಪಿಸಲಾಯಿತು. ರಾಯಚೂರು ಹುಬ್ಬಳ್ಳಿ ಹಾಗೂ ಇತರ ಕಡೆಯಿಂದ ಬರುವ ವಾಹನಗಳನ್ನು ಶಿವಪುರ ರಸ್ತೆಯಲ್ಲಿರುವ ತುಂಗಭದ್ರಾ ಪ್ರೌಢಶಾಲೆಯ ಆವರಣದಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿತ್ತು. ಜನ ಹಾಗೂ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಪೊಲೀಸ್‌ ಇಲಾಖೆಯವರು ಬ್ಯಾರಿಕೇಡ್‌ ಹಾಕಿದ್ದರು. ಅಲ್ಲದೇ ಬಿಗಿ ಬಂದೋಬಸ್ತ್‌ ಒದಗಿಸಿದ್ದರು.

PREV
Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ