Kumta: ಅಬ್ಬೊಳ್ಳಿಯಲ್ಲಿ 3 ಕಾಳಿಂಗ ಸರ್ಪಗಳ ರಕ್ಷಣೆ ಮಾಡಿದ ಅರಣ್ಯ ಇಲಾಖೆಯ ಸಿಬ್ಬಂದಿ

By Govindaraj S  |  First Published Apr 3, 2022, 9:43 PM IST

ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಉಳ್ಳೂರು ಮಠ ಸಮೀಪ ಇಂದು ಒಂದೇ ದಿ‌ನದಲ್ಲಿ ಕಾಣಿಸಿಕೊಂಡ ಮೂರು ಕಾಳಿಂಗ ಸರ್ಪಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಿಸಿದ ಘಟನೆ ನಡೆದಿದೆ.


ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಕುಮಟಾ (ಏ.03): ಉತ್ತರಕನ್ನಡ (Uttara Kannada) ಜಿಲ್ಲೆಯ ಕುಮಟಾ (Kumta) ತಾಲೂಕಿನ ಉಳ್ಳೂರು ಮಠ ಸಮೀಪ ಇಂದು ಒಂದೇ ದಿ‌ನದಲ್ಲಿ ಕಾಣಿಸಿಕೊಂಡ ಮೂರು ಕಾಳಿಂಗ ಸರ್ಪಗಳನ್ನು (King Cobra) ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಿಸಿದ ಘಟನೆ ನಡೆದಿದೆ. ಉಳ್ಳೂರು ಮಠ ಸಮೀಪ ಅಬ್ಬೊಳ್ಳಿಯ ರಾಮನಾಥ ನಾಯ್ಕ್ ಅವರ ಮನೆಯ ಬಾವಿಯಲ್ಲಿ ಕಾಳಿಂಗ ಸರ್ಪ ಬಿದ್ದಿದೆ ಎಂದು ದೊರೆತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾಳಿಂಗ ಸರ್ಪವನ್ನು ರಕ್ಷಿಸಿ ಕಾಡಿಗೆ ಬಿಟ್ಟು ಬಂದಿದ್ದರು. ಅಷ್ಟರಲ್ಲೇ, ಅದೇ ಬಾವಿಯಲ್ಲಿ ಇನ್ನೊಂದು ಕಾಳಿಂಗ ಬಿದ್ದಿದ್ದು, ಮತ್ತೆ ಅದೇ ಮನೆಗೆ ತೆರಳಿ ಬಾವಿಯಲ್ಲಿದ್ದ ಕಾಳಿಂಗವನ್ನು ರಕ್ಷಿಸಿ ಅರಣ್ಯ ಇಲಾಖೆ ಸಿಬ್ಬಂದಿ ಒಂದೆರಡು ಕಿ.ಮೀ. ಕ್ರಮಿಸಿದ್ದರು. 

Latest Videos

undefined

ಆದರೆ, ಮತ್ತೆ ಅದೇ ಮನೆಯಿಂದ ಸಿಬ್ಬಂದಿಗೆ ಕರೆ ಬಂದಿದ್ದು, ಪಕ್ಕದ ಕಾಂಪೌಂಡಿನಲ್ಲಿ ಇನ್ನೊಂದು ಕಾಳಿಂಗ ಸರ್ಪವಿದೆ ಎಂದು ಮಾಹಿತಿ ನೀಡಿದ್ದರು. ಈ ಹಾವು ಕೂಡಾ ರಾಮನಾಥ್ ನಾಯ್ಕ್ ಅವರ ಮನೆಯ ಕಡೆಗೆ ಸಾಗುತ್ತಿದ್ದದ್ದರಿಂದ ಜನರೆಲ್ಲಾ ಭಯಬೀತರಾಗಿ ಒಂದೆಡೆ ಒಟ್ಟಾಗಿದ್ದರು. ನಂತರ ಮತ್ತೆ ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆ ಸಿಬ್ಬಂದಿ ಆ ಹಾವನ್ನು ಕೂಡಾ ಹಿಡಿದು ರಕ್ಷಿಸಿ ಒಟ್ಟಿಗೆ ಕಾಡಿಗೆ ಬಿಟ್ಟಿದ್ದಾರೆ. 3 ಕಾಳಿಂಗಗಳ ಪೈಕಿ 2 ಗಂಡು ಹಾಗೂ ಒಂದು ಹೆಣ್ಣು ಕಾಳಿಂಗ ಸರ್ಪವಾಗಿದ್ದು, ಈಗ ಹಾವುಗಳು ಮಿಲನಕಾಲದ ಅಂತ್ಯದಲ್ಲಿತ್ತು. ಅಧಿಕಾರಿಗಳು ನೀಡಿದ ಮಾಹಿತಿಯಂತೆ, ಮಿಲನಕ್ಕೆ ಸಿದ್ದವಾದ ಹೆಣ್ಣು ಹಾವುಗಳು ಫೆರಾಮೋನ್ ಅನ್ನು (ಗಂಡು ಹಾವುಗಳನ್ನು ಆಕರ್ಷಿಸುವ ದ್ರವ) ಸ್ರವಿಸುತ್ತದೆ. 

ಹೆಣ್ಣು ಕಾಳಿಂಗ ಸರ್ಪವನ್ನ ಮೆಚ್ಚಿಸಲು ಎರಡು ಗಂಡು ಕಾಳಿಂಗಗಳ ಕೋಂಬ್ಯಾಕ್ ಡ್ಯಾನ್ಸ್..!

ಇದರ ವಾಸನೆಗೆ ಮಿಲನಕ್ಕೆ ಸಿದ್ಧವಾದ ಹಲವು ಗಂಡು ಹಾವುಗಳು ಬರುತ್ತದೆ. ಬೇರೆ ಬೇರೆ ಪ್ರದೇಶದಿಂದ ತನ್ನ ಗಡಿ ದಾಟಿಯೂ ಬರುತ್ತವೆ. ಗಂಡುಗಳ ನಡುವೆ ಹೆಣ್ಣು ಹಾವುಗಳಿಗಾಗಿ ಕಾಳಗ ನಡೆದು ಗೆದ್ದ ಬಲಿಷ್ಟ ಹಾವು ಹೆಣ್ಣು ಹಾವನ್ನು ಸೇರುತ್ತದೆ. ನಂತರ ಮತ್ತೆ ತನ್ನ ಮೂಲ ಸ್ಥಾನಕ್ಕೆ ಹೋಗಿ ನೆಲೆಸುತ್ತವೆ. ಇಂತಹ ಸಂದರ್ಭದಲ್ಲಿ ತೊಂದರೆ ಮಾಡಿದರೆ ಆ ವರ್ಷ ಹಾವುಗಳ ಮಿಲನಕ್ಕೆ ಧಕ್ಕೆಯಾಗಿ ಸಂತಾನೋತ್ಪನ್ನಕ್ಕೆ ಅಡ್ಡಿಯಾಗುತ್ತದೆ. ಆದ್ದರಿಂದ, ಮಿಲನದ ಸಂದರ್ಭದಲ್ಲಿ ಅನಾವಶ್ಯಕವಾಗಿ ಹಾವುಗಳನ್ನು ಹಿಡಿಯದೇ ಇರುವುದು ಒಳ್ಳೆಯದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

13 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ ಮಾಡಿದ ಸ್ನೇಕ್‌ ಸೂರ್ಯಕೀರ್ತಿ: ಉರಗತಜ್ಞ ಸ್ನೇಕ್‌ ಶ್ಯಾಮ್‌ ಅವರ ಪುತ್ರ ಸೂರ್ಯಕೀರ್ತಿ ಇತ್ತೀಚೆಗೆ ಕೊಡಗಿನಲ್ಲಿ 13 ಅಡಿ ಉದ್ದದ ಕಾಳಿಂಗ ಸರ್ಪವನ್ನು ಪ್ರಥಮ ಬಾರಿಗೆ ರಕ್ಷಣೆ ಮಾಡಿದ್ದಾರೆ. ಕೊಡಗಿನ ಮೂರ್ನಾಡು ಸಮೀಪದ ಬೋಪಯ್ಯ ಎಂಬವರ ನಿವಾಸದಲ್ಲಿ ಟೈರಿನ ಮಧ್ಯಭಾಗದಲ್ಲಿ ಅಡಗಿಕೊಂಡಿದ್ದ ಈ ಕಾಳಿಂಗ ಸರ್ಪವನ್ನು ಸೂರ್ಯ ರಕ್ಷಿಸಿದರು. ನಂತರ ಬಾಗಮಂಡಲದ ಬಳಿ ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಈ ಕಾಳಿಂಗ ಸರ್ಪವನ್ನು ಬಿಡುಗಡೆ ಮಾಡಿದರು. ಕೊಡಗಿನಲ್ಲಿ ಹಾವುಗಳನ್ನು ಸಂರಕ್ಷಣೆ ಮಾಡುವ ಪ್ರಜ್ವಲ್‌ ಅವರು ಸೂರ್ಯಕೀರ್ತಿಗೆ ಕರೆ ಮಾಡಿ ಕಾಳಿಂಗ ಸರ್ಪ ಇರುವ ಬಗ್ಗೆ ಮಾಹಿತಿ ನೀಡಿದರು. ನಂತರ ಸೂರ್ಯ ಅಲ್ಲಿಗೆ ತೆರಳಿ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿದ್ದಾರೆ. ಕಾಳಿಂಗ ಸರ್ಪ ಕಂಡು ಬಂದರೆ ನನಗೆ ತಿಳಿಸುವಂತೆ ಸೂರ್ಯ ಕೀರ್ತಿ ಅವರು ಪ್ರಜ್ವಲ್‌ ಅವರ ಬಳಿ ಮನವಿ ಮಾಡಿದ್ದರು.

11 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದ ಭೂಪ ... ಇಲ್ಲಿದೆ ಈ ವಾರದ ವೆರೈಟಿ ಸ್ಪೆಷಲ್ ನ್ಯೂಸ್‌ಗಳು

12 ಅಡಿ ಕಾಳಿಂಗ ರಕ್ಷಣೆ-326 ಹಾವುಗಳು ಕಾಡಿಗೆ: ಗುಬ್ಬಿಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಬ್ಬುಗುಣಿಯ ಗೋವಿಂದಪ್ಪ ಎಂಬವರ ಮನೆ, ತೋಟದ ಹತ್ತಿರ ಬಂದಿದ್ದ 12 ಅಡಿಗಳ ಉದ್ದದ ಕಾಳಿಂಗ ಸರ್ಪವನ್ನು ಕುದುರೆಗುಂಡಿಯ ಉರಗತಜ್ಞ ಹರೀಂದ್ರ ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ. 1 ವಾರದಿಂದಲೂ ದಬ್ಬುಗುಣಿಯ ಗೋವಿಂದಪ್ಪ ಅವರ ಮನೆಯ ಸಮೀಪ, ಅಡಕೆ ತೋಟಕ್ಕೆ ಕಾಳಿಂಗ ಬಂದು ಹೋಗುತ್ತಿತ್ತು. ಇದರಿಂದ ಭಯಭೀತರಾದ ಗೋವಿಂದಪ್ಪ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಶುಕ್ರವಾರ ಸಂಜೆಯ ಹೊತ್ತಿಗೆ ಮತ್ತೆ ಕಾಳಿಂಗ ಸರ್ಪವು ಮನೆಯ ಹತ್ತಿರ ಬಂದು ಸುತ್ತಾಡಿದೆ. ಅನಂತರ ಸಮೀಪದ ತೋಟಕ್ಕೆ ಇಳಿದು ಬಿಲ ಒಂದಕ್ಕೆ ಸೇರಿಕೊಂಡಿತು. ಅರಣ್ಯಾಧಿಕಾರಿಗಳ ಸೂಚನೆಯಂತೆ ತಕ್ಷಣ ಹರೀಂದ್ರ ಅವರು ಆಗಮಿಸಿ ಕಾಳಿಂಗವನ್ನು ಸುರಕ್ಷಿತವಾಗಿ ಹಿಡಿದು, ಬಳಿಕ ಅಭಯಾರಣ್ಯಕ್ಕೆ ಬಿಟ್ಟುಬಂದಿದ್ದಾರೆ.

click me!