ಕೊಡಗು ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ ಮೂರು ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಎಂದು ಮಾಹಿತಿ ನೀಡಿದ್ದಾರೆ. ಈ ಮೂಲಕ ಕೊಡಗಿನಲ್ಲಿ ಸುಮಾರು ಒಂದು ತಿಂಗಳ ಬಳಿಕ ಮತ್ತೆ ಕೊರೋನಾ ಪ್ರಕರಣಗಳು ಸಕ್ರಿಯಗೊಂಡಿದೆ.
ಮಡಿಕೇರಿ(ಜೂ.23): ಕೊಡಗು ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ ಮೂರು ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಎಂದು ಮಾಹಿತಿ ನೀಡಿದ್ದಾರೆ. ಈ ಮೂಲಕ ಕೊಡಗಿನಲ್ಲಿ ಸುಮಾರು ಒಂದು ತಿಂಗಳ ಬಳಿಕ ಮತ್ತೆ ಕೊರೋನಾ ಪ್ರಕರಣಗಳು ಸಕ್ರಿಯಗೊಂಡಿದೆ. ಈ ಹಿಂದೆ ಮೇ 24ರಂದು ಕೊರೋನಾ ಪ್ರಕರಣಗಳು ಪತ್ತೆಯಾದ ಬಳಿಕ ಸುಮಾರು 29 ದಿನಗಳ ಕಾಲ ಯಾವುದೇ ಪ್ರಕರಣ ಪತ್ತೆಯಾಗಿರಲಿಲ್ಲ.
ನಗರದ ತಮ್ಮ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಕೊಡ್ಲಿಪೇಟೆ ವ್ಯಾಪ್ತಿಯ ಹಂಡ್ಲಿ ಗ್ರಾಮ ಪಂಚಾಯಿತಿಯ ಶಿರಂಗಾಲ ಗ್ರಾಮದ 36 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು ಈ ವ್ಯಕ್ತಿ ಗದಗದಿಂದ ಕೊಡಗಿಗೆ ಆಗಮಿಸಿದ್ದರು. ಇವರು ಕುಟುಂಬ ಸದಸ್ಯರೊಂದಿಗೆ ನಿಕಟ ನಂಟು ಹೊಂದಿದ್ದು ಕುಟಂಬಸ್ಥರನ್ನು ಇದೀಗ ಜಿಲ್ಲಾ ಕೋವಿಡ್ ಆಸ್ಪತ್ರೆಗ ದಾಖಲಿಸಿ ಗಂಟಲ ದ್ವರ ಮಾದರಿಯನ್ನು ಪರೀಕ್ಷೆಗೆ ರವಾನಿಸಲಾಗಿದೆ. ಈ ವ್ಯಕ್ತಿ ಹಣ್ಣಿನ ವ್ಯಾಪಾರಿಯಾಗಿದ್ದು ಶನಿವಾರಸಂತೆ, ಸೋಮವಾರಪೇಟೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಹಿನ್ನಲೆಯಲ್ಲಿ ಕೆಲವರೊಂದಿಗೆ ಸಂಪರ್ಕ ಸಾಧಿಸಿರುವ ಸಂಶಯವಿದೆ. ಈ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.
ಶಿರಂಗಾಲ ಕಂಟೈನ್‌ಮೆಂಟ್ ವಲಯ:
ಸದ್ಯಕ್ಕೆ ಶಿರಂಗಾಲ ಗ್ರಾಮದ 32 ಮನೆಗಳಲ್ಲಿನ 120 ಸದಸ್ಯರನ್ನು ಸಂಪರ್ಕ ತಡೆಗೊಳಪಡಿಸಲಾಗಿದೆ. ಶಿರಂಗಾಲ ಗ್ರಾಮವನ್ನು ಕಂಟೈನ್‌ಮೆಂಟ್ ಜೋನ್ ಆಗಿ ಪರಿವರ್ತಿಸಲಾಗಿದ್ದು ಮೂರು ತಿಂಗಳ ಬಳಿಕ ಕೊಡಗಿನಲ್ಲಿ ಮತ್ತೊಂದು ಕಂಟೈನ್ ಮೆಂಟ್ ಜೋನ್ ಮಾಡಲಾಗಿದೆ. ಈ ಗ್ರಾಮಸ್ಥರಿಗೆ ಅಗತ್ಯವಾದ ಪಡಿತರ, ತರಕಾರಿಗಳನ್ನು ಜಿಲ್ಲಾಡಳಿತದಿಂದಲೇ 28 ದಿನಗಳ ಕಾಲ ವಿತರಿಸಲಾಗುತ್ತದೆ ಎಂದರು.
ಮಹಿಳೆಗೂ ಸೋಂಕು:
ಸೋಮವಾರಪೇಟೆ ತಾಲೂಕು ಆಲೂರು ಸಿದ್ದಾಪುರ ಬಳಿಯ ದೊಡ್ಡಳ್ಳಿ ಗ್ರಾಮದ ವರ್ಷದ ಮಹಿಳೆಗೂ ಸೋಂಕು ತಗುಲಿದೆ. ಮುಂಬೈನಿಂದ ಕರ್ನಾಟಕದ ಮಂಡ್ಯ ಜಿಲ್ಲೆಯ ನಾಗಮಂಗಲಕ್ಕೆ ಕಳೆದ ತಿಂಗಳು ಬಂದಿದ್ದ ಮಹಿಳೆಯು 14 ದಿನಗಳ ಗೃಹ ಸಂಪರ್ಕ ತಡೆಯಲ್ಲಿದ್ದು, ಅನಂತರ ಇತ್ತೀಚೆಗಷ್ಟೆದೊಡ್ಡಳ್ಳಿ ಗ್ರಾಮದ ಗಂಡನ ಮನೆಗೆ ಬಂದಿದ್ದರು. ಆಶಾ ಕಾರ್ಯಕರ್ತೆಯರು ಇವರ ಮನೆಗೆ ತೆರಳಿ ಗಂಟಲ ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ ಸಂದರ್ಭ ಸೋಂಕು ಇರುವುದು ಪತ್ತೆಯಾಗಿದೆ ಎಂದರು.
ದೊಡ್ಡಳ್ಳಿ ಗ್ರಾಮವನ್ನೂ ಕಂಟೈನ್‌ಮೆಂಟ್ ಮಾಡಲಾಗಿದೆ. 137 ಮನೆ, 37 ಕುಟುಂಬದ 137 ಕುಟುಂಬಸ್ಥರನ್ನು ಕಂಟೈನ್‌ಮೆಂಟ್ ಜೋನ್‌ನಲ್ಲಿರಿಸಲಾಗಿದೆ ಎಂದರು.
ಮಂಗಳೂರಿನಿಂದ ಬಸ್‌ನಲ್ಲಿ ಬಂದಾತಗೆ ಸೋಂಕು!:
ಮಡಿಕೇರಿ ತಾಲೂಕಿನ ಅಯ್ಯಂಗೇರಿ ಗ್ರಾಮ ಮೂಲದ 65 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಹೊಟೇಲ್ ಉದ್ಯಮಿಯಾಗಿರುವ ಇವರು ಮುಂಬೈನಿಂದ ಮಂಗಳೂರಿಗಾಗಿ ಕೊಡಗು ಜಿಲ್ಲೆಗೆ ಬಂದಿದ್ದರು. ಮಂಗಳೂರಿನವರೆಗೆ ಖಾಸಗಿ ಬಸ್‌ನಲ್ಲಿ ಮುಂಬೈನಿಂದ ಬಂದು ಅಲ್ಲಿಂದ ಮಡಿಕೇರಿಗೆ ಸರ್ಕಾರಿ ಬಸ್‌ನಲ್ಲಿ ಬಂದಿದ್ದಾರೆ. ಅವರು ಕೊವೀಡ್ ಆಸ್ಪತ್ರೆಗೆ ನೇರವಾಗಿ ಬಂದು ಪರೀಕ್ಷೆ ನಡೆಸಿದ್ದರಿಂದಾಗಿ ಕೊಡಗು ಜಿಲ್ಲೆಯಲ್ಲಿ ಇವರಿಗೆ ಇತರರ ಸಂಪರ್ಕ ಉಂಟಾಗಿರುವ ಸಾಧ್ಯತೆ ಕಡಿಮೆಯಿದೆ ಎಂದರು.
KSRTC ಕಂಡಕ್ಟರ್, ಡ್ರೈವರ್ ಭದ್ರತಾ ಕಾರ್ಯಕ್ಕೆ!
ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇಬ್ಬರು ಸೋಂಕಿತ ವ್ಯಕ್ತಿಗಳು ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಈವರೆಗೆ ಒಟ್ಟು 6 ಪ್ರಕರಣ ವರದಿಯಾಗಿದ್ದು, ಮೂವರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಹೊಸದ್ದಾಗಿ ಪ್ರಾರಂಭಿಸಲಾದ ಪ್ರಯೋಗಾಲಯದಲ್ಲಿ ದಿನಕ್ಕೆ 280ರಷ್ಟುಗಂಟಲ ದ್ರವ ಪರೀಕ್ಷೆ ನಡೆಸಲಾಗುತ್ತಿದ್ದು, ದಿನದ 24 ಗಂಟೆಯೂ ಈ ಪ್ರಯೋಗಾಲಯ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್ ಮತ್ತು ಡಾ.ಮಹೇಶ್ ಸುದ್ದಿಗೋಷ್ಠಿಯಲ್ಲಿದ್ದರು.