ಬೆಂಗಳೂರು: ರೇಸ್ ಕೊರ್ಸ್ ಮೇಲೆ‌ ಸಿಸಿಬಿ ರೇಡ್‌, ಮಧ್ಯರಾತ್ರಿ 1 ಗಂಟೆಗೆ ದಾಳಿ ಅಂತ್ಯ, 3.47 ಕೋಟಿ ಹಣ ಪತ್ತೆ

Published : Jan 13, 2024, 08:58 AM IST
ಬೆಂಗಳೂರು: ರೇಸ್ ಕೊರ್ಸ್ ಮೇಲೆ‌ ಸಿಸಿಬಿ ರೇಡ್‌, ಮಧ್ಯರಾತ್ರಿ 1 ಗಂಟೆಗೆ ದಾಳಿ ಅಂತ್ಯ, 3.47 ಕೋಟಿ ಹಣ ಪತ್ತೆ

ಸಾರಾಂಶ

ಸಿಸಿಬಿ ದಾಳಿಯಲ್ಲಿ ಸಿಕ್ಕವರ ಮೇಲೆ ಹೈ ಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸುಮಾರು 60 ಜನರನ್ನು ವಶಕ್ಕೆ ಪಡೆದು ಸ್ಟೇಷನ್ ಬೇಲ್‌ ಮೇಲೆ ಬಿಡುಗಡೆ ಮಾಡಲಾಗಿದೆ. ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. 

ಬೆಂಗಳೂರು(ಜ.13):  ನಗರದ ರೇಸ್ ಕೊರ್ಸ್ ಮೇಲೆ‌ ಸಿಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯ ರಾತ್ರಿ 1 ಗಂಟೆಗೆ ದಾಳಿ ಅಂತ್ಯಗೊಳಿಸಲಾಗಿದೆ. ದಾಳಿ ವೇಳೆ ಸುಮಾರು 3 ಕೋಟಿ 47 ಲಕ್ಷ ಹಣ ಪತ್ತೆಯಾಗಿದೆ. ಲೆಕ್ಕವಿಲ್ಲದ ಹಣ ಹಾಗೂ ಜಿಎಸ್‌ಟಿ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಕೆಲವರನ್ನ ವಶಕ್ಕೆ ಪಡೆಯಲಾಗಿದೆ. 

ಸಿಸಿಬಿ ದಾಳಿಯಲ್ಲಿ ಸಿಕ್ಕವರ ಮೇಲೆ ಹೈ ಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸುಮಾರು 60 ಜನರನ್ನು ವಶಕ್ಕೆ ಪಡೆದು ಸ್ಟೇಷನ್ ಬೇಲ್‌ ಮೇಲೆ ಬಿಡುಗಡೆ ಮಾಡಲಾಗಿದೆ. ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. 

ರೇಸ್ ಕೋರ್ಸ್ ಬುಕ್ಕಿಂಗ್‌ ಕೌಂಟರ್‌ಗೆ ಸಿಸಿಬಿ ರೇಡ್, 3 ಕೋಟಿ 47 ಲಕ್ಷ ಹಣ ವಶಕ್ಕೆ!

ದಾಳಿ ವೇಳೆ ಲೆಕ್ಕಕ್ಕಿಂತ ಅಧಿಕ ಹಣ ಪತ್ತೆಯಾಗಿದ್ದು ಜೊತೆಗೆ ಜಿಎಸ್‌ಟಿ ವಂಚಿಸಿರುವ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ. ದಾಳಿ ವೇಳೆ ಸಿಕ್ಕ ಹಣಕ್ಕೆ ದಾಖಲೆ ಸಲ್ಲಿಸುವಂತೆ ಸಿಸಿಬಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ದಾಖಲೆ ನೀಡಲು ವಿಫಲರಾದ್ರೆ ಸಿಸಿಬಿ ಅಧಿಕಾರಿಗಳು ಇಡಿಗೆ ಮಾಹಿತಿ ನೀಡಲಿದ್ದಾರೆ. 

PREV
Read more Articles on
click me!

Recommended Stories

Bhatkal: ಮರ ಏರಿ ಹರಕೆ ತೀರಿಸುವ ವಿಶಿಷ್ಟ ಆಚರಣೆಗೆ ಸಾಕ್ಷಿಯಾದ ಶೇಡಬರಿ ಜಾತ್ರೆ
'ನಾಯಿ-ನರಿಗಳು ಕರವೇ ಬಗ್ಗೆ ಮಾತಾಡಿದ್ರೆ ಏನ್‌ ಹೇಳೋಕೆ ಆಗುತ್ತೆ..' ಸುದೀಪ್‌ ಭೇಟಿ ಕುರಿತ ವಿವಾದದ ಬಗ್ಗೆ ನಾರಾಯಣ ಗೌಡ ತಿರುಗೇಟು