ವಿಜಯನಗರದಲ್ಲಿ ಭರ್ಜರಿ ಬೇಟೆ: ದಾಖಲೆ ಇಲ್ಲದ ಕೋಟ್ಯಂತರ ರೂ. ಜಪ್ತಿ..!

By Girish Goudar  |  First Published Mar 31, 2023, 1:11 PM IST

3 ಕೋಟಿ 15 ಲಕ್ಷ ನಗದು, 40 ಸಾವಿರ ಮೌಲ್ಯದ ಅಕ್ರಮ ಮದ್ಯ ವಶಕ್ಕೆ ಪಡೆಯಲಾಗಿದೆ. ಲಕ್ಷಾಂತರ ಮೌಲ್ಯದ ಗಾಂಜಾ, 35 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಬೆಳ್ಳಿ, ಬಂಗಾರ ಜಪ್ತಿ. 


ವಿಜಯನಗರ(ಮಾ.31):  ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ವಿಜಯನಗರ ಜಿಲ್ಲೆಯಲ್ಲಿ ಭರ್ಜರಿ ಕಾರ್ಯಚರಣೆ ನಡೆದಿದೆ. ಹೌದು, ಕೋಟಿ, ಕೋಟಿ ಅನಧಿಕೃತ ಹಣವನ್ನ ವಿಜಯನಗರ ಜಿಲ್ಲಾಡಳಿತ ಸೀಜ್ ಮಾಡಿದೆ.

ವಿಜಯನಗರ ಜಿಲ್ಲೆಯಲ್ಲಿ ಅಕ್ರಮ ಹಣ, ಅಕ್ರಮ ಡ್ರಗ್ಸ್ (ಗಾಂಜಾ), ಅಕ್ರಮ ಬೆಳ್ಳಿ ಬಂಗಾರದ್ದೇ ಹವಾ ಎದ್ದಿದೆ. ಚುನಾವಣೆ ನೀತಿ ಸಂಹಿತೆ ಜಾರಿ ಮುನ್ನವೇ ಚೆಕ್ ಪೋಸ್ಟ್ ರಚನೆ ಮಾಡಲಾಗಿತ್ತು. ಹೀಗಾಗಿ ಕಳೆದ ಹತ್ತು ದಿನದಲ್ಲಿ  ಜಿಲ್ಲಾಡಳಿತ ಭರ್ಜರಿ ಬೇಟೆಯಾಡಿದೆ. 

Latest Videos

undefined

ಕೂಡ್ಲಿಗಿ: ಬಿಜೆಪಿ ಶಾಸಕ ಗೋಪಾಲಕೃಷ್ಣ ರಾಜೀನಾಮೆ ಸಲ್ಲಿಕೆ, ಕಾಂಗ್ರೆಸ್ ತೆಕ್ಕೆಗೆ ಬಿದ್ದ ಕಮಲ ನಾಯಕ..!

23 ಚಕ್ ಪೋಸ್ಟ್‌ಗಳಲ್ಲಿ ಬರೋಬ್ಬರಿ 3 ಕೋಟಿವರೆ ಕೋಟಿ ನಗದು ಮತ್ತು ಚಿನ್ನ ಜಪ್ತಿ ಮಾಡಲಾಗಿದೆ. 3 ಕೋಟಿ 15 ಲಕ್ಷ ನಗದು, 40 ಸಾವಿರ ಮೌಲ್ಯದ ಅಕ್ರಮ ಮದ್ಯ ವಶಕ್ಕೆ ಪಡೆಯಲಾಗಿದೆ. ಲಕ್ಷಾಂತರ ಮೌಲ್ಯದ ಗಾಂಜಾ, 35 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಬೆಳ್ಳಿ, ಬಂಗಾರ ವಶಕ್ಕೆ ಪಡೆಯಲಾಗಿದೆ ಅಂತ ವಿಜಯನಗರ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ಮಾಹಿತಿ ನೀಡಿದ್ದಾರೆ. 

click me!