ಸ್ವಗ್ರಾಮ ಹನುಮನಾಳದಿಂದ ಹುಲಿಹೈದರ್ ಮಾರ್ಗವಾಗಿ ಊಮಲೂಟಿ ಕಡೆ ಹೋರಟಾಗ ಎದುರಿಗೆ ಬಂದ ಕಾರೊಂದು ನೇರವಾಗಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಚಾಲಕ ಹನುಮನಗೌಡನಿಗೆ ತಲೆಗೆ, ದೇಹಕ್ಕೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲಿಯೇ ಮೃತನಾಗಿದ್ದಾನೆ.
ಕನಕಗಿರಿ(ಅ.05): ಬೈಕ್-ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಅವಿವಾಹಿತ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಹುಲಿಹೈದರ್ ಗ್ರಾಮದ ಕಲ್ಯಾಣಿ ಬಾವಿ ಸಮೀಪ ಬುಧವಾರ ನಡೆದಿದೆ.
ಹನುಮನಗೌಡ ಮಾಲಿ ಗೌಡ್ರು (೨೮) ಮೃತ ದುರ್ದೈವಿ. ಸಿಂಧನೂರು ತಾಲೂಕಿನ ಊಮಲೂಟಿ ಗ್ರಾಮದಲ್ಲಿ ಡಿಸೆಂಬರ್ ೧೫ಕ್ಕೆ ಮದುವೆ ನಿಶ್ಚಯವಾದ ಹಿನ್ನೆಲೆಯಲ್ಲಿ ತಯಾರಿಗಾಗಿ ಹನುಮನಗೌಡ ಓಡಾಟ ನಡೆಸಿದ್ದರು. ಬುಧವಾರ ಸ್ವಗ್ರಾಮ ಹನುಮನಾಳದಿಂದ ಹುಲಿಹೈದರ್ ಮಾರ್ಗವಾಗಿ ಊಮಲೂಟಿ ಕಡೆ ಹೋರಟಾಗ ಎದುರಿಗೆ ಬಂದ ಕಾರೊಂದು ನೇರವಾಗಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಚಾಲಕ ಹನುಮನಗೌಡನಿಗೆ ತಲೆಗೆ, ದೇಹಕ್ಕೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲಿಯೇ ಮೃತನಾಗಿದ್ದಾನೆ.
undefined
ಬೆಂಗಳೂರಲ್ಲಿ ಭೀಕರ ಅಪಘಾತ: ತಾಯಿ, 2 ಮಕ್ಕಳು ಸಜೀವ ದಹನ
ಕಾರು ಚಾಲಕ ಮಹೇಶ್ವರಸ್ವಾಮಿ ಎಂಬಾತನಿಗೂ ತಲೆಗೆ, ಕೈಗೆ ಗಾಯಗಳಾಗಿವೆ. ಗಂಗಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಪಿಐ ಜಗದೀಶ ಕೆಜೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಕನಕಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.