ಚಾಮರಾಜನಗರ: ಮಲೆ ಮಹದೇಶ್ವರಸ್ವಾಮಿ ಹುಂಡಿ ಎಣಿಕೆ, ಕೇವಲ 34 ದಿನದಲ್ಲಿ ಎರಡು ಮುಕ್ಕಾಲು ಕೋಟಿ ಸಂಗ್ರಹ‌!

By Girish Goudar  |  First Published Dec 25, 2024, 5:07 PM IST

ಕೇವಲ 34 ದಿನಗಳಲ್ಲಿ ಎರಡು ಮುಕ್ಕಾಲು ಕೋಟಿ ರೂ. ಸಂಗ್ರಹ‌ವಾಗಿದೆ. ಪ್ರಾಧಿಕಾರದ ಕಾರ್ಯದರ್ಶಿ ರಘು ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಬರೋಬ್ಬರಿ 2,77,99,396 ಕೋಟಿ ರೂ. ಸಂಗ್ರಹ (ಹುಂಡಿ ಮತ್ತು ಇ-ಹುಂಡಿ ಸೇರಿ) ಸಂಗ್ರಹವಾಗಿದೆ. 


ಚಾಮರಾಜನಗರ(ಡಿ.25):  ಜಿಲ್ಲೆಯ ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಹುಂಡಿ ಎಣಿಕೆ ಮುಕ್ತಾಯಗೊಂಡಿದ್ದು ಬರೋಬ್ಬರಿ 2,77,99,396 ಕೋಟಿ ರೂ ಸಂಗ್ರಹವಾಗಿದೆ. ಮಲೆ ಮಾದಪ್ಪನಿಗೆ ಭಕ್ತರು ಭರ್ಜರಿ ಕಾಣಿಕೆಯನ್ನ ಸಲ್ಲಿಸಿದ್ದಾರೆ.  

ಕೇವಲ 34 ದಿನಗಳಲ್ಲಿ ಎರಡು ಮುಕ್ಕಾಲು ಕೋಟಿ ರೂ. ಸಂಗ್ರಹ‌ವಾಗಿದೆ. ಪ್ರಾಧಿಕಾರದ ಕಾರ್ಯದರ್ಶಿ ರಘು ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಬರೋಬ್ಬರಿ 2,77,99,396 ಕೋಟಿ ರೂ. ಸಂಗ್ರಹ (ಹುಂಡಿ ಮತ್ತು ಇ-ಹುಂಡಿ ಸೇರಿ) ಸಂಗ್ರಹವಾಗಿದೆ. 

Tap to resize

Latest Videos

undefined

ಮಲೆ ಮಹದೇಶ್ವರ ಬೆಟ್ಟಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ ಉಮಾಪತಿ ಶ್ರೀನಿವಾಸ್; ಫೋಟೋ ವೈರಲ್!

73 ಗ್ರಾಂ ಚಿನ್ನ , 3 ಕೆ.ಜಿ 900 ಗ್ರಾಂ ಬೆಳ್ಳಿ ಹುಂಡಿಯಲ್ಲಿ ಸಂಗ್ರಹವಾಗಿದೆ. ದಿನೇ ದಿನೇ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಾಕಷ್ಟು ಭಕ್ತರನ್ನ ಮಾದಪ್ಪ ತನ್ನತ್ತ ಸೆಳೆಯುತ್ತಿದ್ದಾನೆ. ಹೀಗಾಗಿ ದೇವಸ್ಥಾನಕ್ಕೆ ಬರುವ ಭಕ್ತರಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.  

ಚಾಮರಾಜನಗರ: ಮಾದಪ್ಪನ ಬೆಟ್ಟಕ್ಕೆ ಮದುವೆಗೆ ಹೆಣ್ಣು ಸಿಗಲಿ ಎಂದು ಬ್ರಹ್ಮಚಾರಿಗಳ ಪಾದಯಾತ್ರೆ!

ಹನೂರು: ಪ್ರಸಿದ್ಧ ಧಾರ್ಮಿಕ ಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಸಂಭ್ರಮ ಜೋರಾಗಿದ್ದು, ಯುವಕರ ಹಾಗೂ ಮಾದಪ್ಪನ ಭಕ್ತರ ದಂಡೇ ಬೆಟ್ಟಕ್ಕೆ ಸಾಗರೋಪಾದಿಯಲ್ಲಿ ಹರಿದು ಬರುತ್ತಿದೆ. ಅ.3೦ ರಂದು ನಾಡಿನ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಮಲೆ ಮಹದೇಶ್ವರ ಬೆಟ್ಟಕ್ಕೆ ಕೊಳ್ಳೇಗಾಲ ತಾಲೂಕಿನ ಹೊಸಮಾಲಂಗಿ ಗ್ರಾಮದ 62 ಯುವಕರು ವಧು ಸಿಗಲೆಂದು ಬರಿಗಾಲಿನಲ್ಲಿ ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ನಡೆಸಿದ್ದರು. 
ಹೊಸಮಾಲಂಗಿಯಲ್ಲಿ 62 ಮಂದಿ ಯುವಕರಿಗೆ ಮದುವೆಯಾಗಿಲ್ಲ, ಎಷ್ಟು ಹುಡುಕಿದರೂ ವಧು ಸಿಗುತ್ತಿಲ್ಲ, ಮಾದಪ್ಪ ಕರುಣೆ ತೋರಿಸಿ ನಮಗೆ ಮದುವೆ ಮಾಡಿಸಲೆಂದು ಯಾತ್ರೆ ಹೊರಟ್ಟಿದ್ದೇವೆ ಎಂದು ಮನು ಎಂಬ ಯಾತ್ರಿ ಕನ್ನಡಪ್ರಭ ಪತ್ರಿಕೆಗೆ ತಿಳಿಸಿದ್ದರು.

ಮಲೆ ಮಹದೇಶ್ವರ ಹುಂಡಿ ಎಣಿಕೆ : ಒಂದೇ ತಿಂಗಳಲ್ಲಿ 2.58 ಕೋಟಿ ರು.ಸಂಗ್ರಹ

ದೀಪಾವಳಿ ಜಾತ್ರೆ ಜೋರು: 

ಅ.29 ರಿಂದ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ ನಡೆದಿತ್ತು. ದೇವರಿಗೆ ವಿಶೇಷ ಪೂಜೆ, ಅಭಿಷೇಕಗಳು ಸಾಂಪ್ರದಾಯಿಕವಾಗಿ ಜರುಗುತ್ತಿದೆ. ರಾಜ್ಯ ಅಷ್ಟೇ ಅಲ್ಲದೇ ತಮಿಳುನಾಡಿನಿಂದಲೂ ಲಕ್ಷಾಂತರ ಮಂದಿ ಭಕ್ತರು ಆಗಮಿಸಿದ್ದರು. ಶೌಚಾಲಯ ವ್ಯವಸ್ಥೆ, ಕುಡಿಯುವ ನೀರು, ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಲೆ ಮಹದೇಶ್ವರ ಬೆಟ್ಟದ ಆಯಕಟ್ಟಿನ ಸ್ಥಳಗಳಲ್ಲಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. 

ವಿಶೇಷ ದಾಸೋಹ ವ್ಯವಸ್ಥೆ: 

ಭಕ್ತರಿಗೆ ತೊಂದರೆಯಾಗದಂತೆ ನಿರಂತರ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು ಎತ್ತ ನೋಡಿದರತ್ತ ಭಕ್ತ ಸಮೂಹವೇ ಕಂಡು ಬರುತ್ತಿದೆ. ಜತೆಗೆ ವಿಶೇಷ ವಿದ್ಯುತ್ ದೀಪಾಲಂಕರವನ್ನು ದೀಪಾವಳಿ ಹಬ್ಬದ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಬಗೆಯ ರಂಗುರಂಗಿನ ವಿದ್ಯುತ್ ದೀಪಾಲಂಕಾರಗಳ ತೋರಣ ಮಲೆಮಹದೇಶ್ವರ ಬೆಟ್ಟದ ರಾಜಗೋಪುರ ಸೇರಿದಂತೆ ಮುಖ್ಯದ್ವಾರ, ಇನ್ನಿತರ ಕಡೆ ಹಾಗೂ ಆಲಂಬಾಡಿ ಬಸವ ಸೇರಿದಂತೆ ದಾಸೋಹ ಭವನಕ್ಕೆ ತೆರಳುವ ರಸ್ತೆ ಮಾರ್ಗ ಮಧ್ಯದಲ್ಲಿ ಮತ್ತು ಪ್ರಾಧಿಕಾರ ಕಚೇರಿ ಮುಂಭಾಗದ ಪ್ರಧಾನ ರಸ್ತೆಯಲ್ಲಿಯೂ ವಿಶೇಷ ವಿದ್ಯುತ್ ದೀಪದ ಅಲಂಕಾರ ಜಗಮಗಿಸುವಂತೆ ನೋಡುಗರ ಕಣ್ಣಣ ಸೆಳೆಯುವಂತೆ ದೀಪಾಲಂಕರವನ್ನು ಮಾಡಲಾಗಿತ್ತು. 

click me!