ಉಡುಪಿಗೆ ಮತ್ತೆ 'ಮಹಾ' ಸೋಂಕು: ಒಂದೇ ದಿನ 27 ಪ್ರಕರಣಗಳು

By Kannadaprabha News  |  First Published May 29, 2020, 1:56 PM IST

ಕಳೆದೆರಡು ದಿನಗಳಲ್ಲಿ ಒಂದಂಕಿಯಲ್ಲಿದ್ದ ಉಡುಪಿ ಜಿಲ್ಲೆಯ ಕೊರೋನಾ ಪ್ರಕರಣಗಳ ಸಂಖ್ಯೆ ಗುರುವಾರ ಮತ್ತೆ 27ಕ್ಕೆ ಜಿಗಿದಿದೆ. ಜಿಲ್ಲೆಯಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 145ಕ್ಕೆ ಏರಿಕೆಯಾಗಿದೆ.


ಉಡುಪಿ(ಮೇ 29): ಕಳೆದೆರಡು ದಿನಗಳಲ್ಲಿ ಒಂದಂಕಿಯಲ್ಲಿದ್ದ ಉಡುಪಿ ಜಿಲ್ಲೆಯ ಕೊರೋನಾ ಪ್ರಕರಣಗಳ ಸಂಖ್ಯೆ ಗುರುವಾರ ಮತ್ತೆ 27ಕ್ಕೆ ಜಿಗಿದಿದೆ. ಜಿಲ್ಲೆಯಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 145ಕ್ಕೆ ಏರಿಕೆಯಾಗಿದೆ.

ಗುರುವಾರ ಪತ್ತೆಯಾದ ಸೋಂಕಿತರಲ್ಲಿ 18 ಪುರುಷರು, 8 ಮಹಿಳೆಯರು ಮತ್ತು ಒಬ್ಬ ಬಾಲಕಿ ಸೇರಿದ್ದಾರೆ. ಅವರಲ್ಲಿ 24 ಮಂದಿ ಮಹಾರಾಷ್ಟ್ರದಿಂದ ಬಂದವರಾದರೆ, 2 ಮಂದಿ ತೆಲಂಗಾಣದಿಂದ ಮತ್ತು ಒಬ್ಬರು ಕೇರಳದಿಂದ ಬಂದವರು.

Tap to resize

Latest Videos

ಲಾಕ್‌ಡೌನ್‌ ಎಫೆಕ್ಟ್‌: ಹೆತ್ತವರ ಕಷ್ಟ ನೋಡಲಾರದೆ ಸುಡು ಬಿಸಿಲಿನಲ್ಲೇ ವ್ಯಾಪಾರಕ್ಕೆ ನಿಂತ ಮಕ್ಕಳು..!

ಸೋಮವಾರ 32 ಮಂದಿ ಸೋಂಕಿತರು ಪತ್ತೆಯಾಗಿದ್ದರೆ, ಮಂಗಳವಾರ 3 ಮತ್ತು ಬುಧವಾರ 9 ಮಂದಿಗೆ ಸೋಂಕಿತರ ಪತ್ತೆಯಾಗಿದ್ದರು, ಆದ್ದರಿಂದ ಸೋಂಕಿತರ ಸಂಖ್ಯೆ ಕಡಿಮೆಯಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಗುರುವಾರ ನಿರೀಕ್ಷೆಗೂ ಮೀರಿ 27 ಮಂದಿ ಸೋಂಕಿತರು ಪತ್ತಯಾಗಿರುವುದು ಕಳವಳಕ್ಕೆ ಕಾರಣವಾಗಿದೆ.

ಇದು ‘ಮಹಾ’ ಸೋಂಕು: ಉಡುಪಿ ಜಿಲ್ಲೆಗೆ ತೀವ್ರ ಆತಂಕಕ್ಕೆ ಕಾರಣವಾಗಿರುವುದು ಮಹಾರಾಷ್ಟ್ರದಿಂದ ಬಂದಿರುವ ಮತ್ತು ಇನ್ನೂ ಬರುವುದಕ್ಕೆ ಸಿದ್ಧರಾಗಿರುವ ನಮ್ಮವರು. ಜಿಲ್ಲೆಯಲ್ಲಿ ಇದುವರೆಗೆ ಪತ್ತೆಯಾಗಿರುವ 145 ಸೋಂಕಿತರಲ್ಲಿ 122 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಉಳಿದಂತೆ 13 ಮಂದಿ ದುಬೈಯಿಂದ ಬಂದವರು, 3 ಮಂದಿ ತೆಲಂಗಾಣ ಮತ್ತು 3 ಮಂದಿ ಕೇರಳದಿಂದ ಬಂದವರು. 4 ಮಂದಿ ಸ್ಥಳೀಯ ಪೊಲೀಸ್‌ ಸಿಬ್ಬಂದಿಗಳಾಗಿದ್ದಾರೆ.

145ಕ್ಕೆ ಇಳಿಯಿತು ಸಂಖ್ಯೆ

ಜಿಲ್ಲೆಯಲ್ಲಿ ಇದುವರೆಗೆ ಘೋಷಿತ ಸೋಂಕಿತರ ಸಂಖ್ಯೆ 147 ಆಗಿದ್ದರೂ, ಅವರಲ್ಲಿ ಗರ್ಭಿಣಿ ಮಹಿಳೆಗೆ ಮತ್ತು ಜಿಪಂ ಸಿಬ್ಬಂದಿಗೆ ಸೋಂಕೇ ಇಲ್ಲ ಎಂಬುದು ಪತ್ತೆಯಾದ ಮೇಲೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 145ಕ್ಕೆ ಇಳಿದಿದೆ. ಅಲ್ಲದೆ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಸೋಂಕಿತರೆಂದು ವರದಿ ಬಂದಿದ್ದ ಕಾರ್ಕಳ ತಾಲೂಕಿನ ತಾಯಿ ಮಗ ಇಬ್ಬರಿಗೂ ಕೊರೋನಾ ಇಲ್ಲ ಎಂಬ ವರದಿ ಬಂದಿದ್ದು, ಅವರಿಬ್ಬರೂ ಮನೆಗೆ ಹಿಂತಿರುಗಿದ್ದಾರೆ.

click me!