ಶಿರಾ ಉಪಚುನಾವಣೆಗೆ 25 ನಾಮಪತ್ರ ಸಲ್ಲಿಕೆ

Kannadaprabha News   | Asianet News
Published : Oct 17, 2020, 09:36 AM IST
ಶಿರಾ ಉಪಚುನಾವಣೆಗೆ 25 ನಾಮಪತ್ರ ಸಲ್ಲಿಕೆ

ಸಾರಾಂಶ

ಶಿರಾ ಕ್ಷೇತ್ರದಲ್ಲಿ ನವೆಂಬರ್ 3 ರಂದು ಉಪ ಚುನಾವಣೆ ನಡೆಯಲಿದ್ದು, ಚುನಾವಣೆ ಹಿನ್ನೆಲೆಯಲ್ಲಿ 25 ನಾಮಪತ್ರಗಳು ಸಲ್ಲಿಕೆಯಾಗಿವೆ.  

ತುಮಕೂರು (ಅ.17):  ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಕ್ಟೋಬರ್‌ 9 ರಿಂದ 16ರವರೆಗೆ ಒಟ್ಟು 25 ನಾಮಪತ್ರಗಳು ಸಲ್ಲಿಕೆಯಾಗಿವೆ. 

ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಟಿ.ಬಿ. ಜಯಚಂದ್ರ, ಭಾರತೀಯ ಜನತಾ ಪಕ್ಷದಿಂದ ಸಿ.ಎಂ.ರಾಜೇಶ್‌ ಗೌಡ, ಜೆಡಿ(ಎಸ್‌) ಪಕ್ಷದ ಅಭ್ಯರ್ಥಿ ಅಮ್ಮಾಜಮ್ಮ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಓಬಳೇಶಪ್ಪ ಬಿ.ಟಿ., ಭಾರತ ಕಮ್ಯುನಿಸ್ಟ್‌ ಪಕ್ಷದಿಂದ ಗಿರೀಶ್‌, ಪಕ್ಷೇತರದಿಂದ ಜಯಣ್ಣ ವೈ.ಉರುಫ್‌ ಜಯಣ್ಣ, ಎಂ.ಎಲ್‌.ಎ.ಆರ್‌.ಕಂಬಣ್ಣ, ಸಾದಿಕ್‌ ಪಾಷ, ಗುರುಸಿದ್ದಪ್ಪ ಎಂ., ಎಲ್‌.ಕೆ.ದೇವರಾಜು, ತಿಮ್ಮರಾಜ್‌ಗೌಡ, ನಿಸಾರ್‌ ಅಹಮದ್‌, ಜಿ.ಎಸ್‌.ನಾಗರಾಜ ಸಲ್ಲಿಸಿದ್ದಾರೆ. 

200 ಜೆಡಿಎಸ್ ಮುಖಂಡರು ಕಾಂಗ್ರೆಸ್‌ಗೆ : ಇದೇ ನನ್ನ ರಾಜಕೀಯ ಎಂದ ಡಿಕೆಶಿ ...

ಅಂಬ್ರೋಸ್‌ ಡಿ. ಮೆಲ್ಲೋ ಹಾಗೂ ರಂಗಪ್ಪ, ರಿಪಬ್ಲಿಕನ್‌ ಸೇನೆಯಿಂದ ಪ್ರೇಮಕ್ಕ, ರೈತ ಭಾರತ ಪಕ್ಷದಿಂದ ತಿಮ್ಮಕ್ಕ ಅವರು ಮಧುಗಿರಿ ಉಪವಿಭಾಗಾಧಿಕಾರಿ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಚುನಾವಣಾಧಿಕಾರಿಗಳಾದ ಡಾ: ನಂದಿನಿದೇವಿ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ.

PREV
click me!

Recommended Stories

ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ?
ಮಕ್ಕಳಿಗಾಗಿ ಕೊನೆಗೂ ಒಂದಾದ್ರು ಲೀಲಾ-ಮಂಜು; ಚಿನ್ನೀ, ಬಂಗಾರಿ ಫ್ಲೇವರ್ ಬಿಟ್ಟುಕೊಟ್ಟ ಸಂತೋಷ್!