ಶಿವಮೊಗ್ಗದಲ್ಲಿ 11 ತಿಂಗಳ ಹೆಣ್ಣು ಮಗು ಸೇರಿದಂತೆ 8 ಮಹಿಳೆಯರು, 16 ಪುರುಷರಿಗೆ ಸೋಂಕು ಬಂದಿದೆ. ಈ ಪೈಕಿ ಏಳು ಮಂದಿ ತೀವ್ರ ಶೀತ, ಜ್ವರದಿಂದ ಬಳಲುತ್ತಿದ್ದರು. ಓರ್ವರಿಗೆ ಸೋಂಕು ಹೇಗೆ ತಗುಲಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜು.07): ಜಿಲ್ಲೆಯಲ್ಲಿ ಸೋಮವಾರ 11 ತಿಂಗಳ ಹಸುಗೂಸು ಸೇರಿದಂತೆ 24 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 285ಕ್ಕೇರಿದೆ.
ಪಿ-23598 ರಿಂದ ಪಿ-23621 ರವರೆಗಿನ ಸೋಂಕಿತರಲ್ಲಿ 11 ತಿಂಗಳ ಹೆಣ್ಣು ಮಗು ಸೇರಿದಂತೆ 8 ಮಹಿಳೆಯರು, 16 ಪುರುಷರಿಗೆ ಸೋಂಕು ಬಂದಿದೆ. ಈ ಪೈಕಿ ಏಳು ಮಂದಿ ತೀವ್ರ ಶೀತ, ಜ್ವರದಿಂದ ಬಳಲುತ್ತಿದ್ದರು. ಓರ್ವರಿಗೆ ಸೋಂಕು ಹೇಗೆ ತಗುಲಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಇನ್ನಿಬ್ಬರು ಬಳ್ಳಾರಿ, ಉಡುಪಿ ಟ್ರಾವೆಲ್ ಹಿಸ್ಟರಿ ಹೊಂದಿದ್ದಾರೆ. ಉಳಿದ 14 ಮಂದಿಗೆ ಸೋಂಕಿತರ ಪ್ರಥಮ ಸಂಪರ್ಕದಿಂದ ಪಾಸಿಟಿವ್ ಬಂದಿದೆ.
undefined
ಶಿವಮೊಗ್ಗ 14, ಶಿಕಾರಿಪುರ 7, ಹೊಸನಗರ 1, ಸೊರಬ ಹಾಗೂ ಸಾಗರ ತಾಲೂಕಿನಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ. ನಗರದ ಗೋಪಾಲಗೌಡ ಬಡಾವಣೆ ‘ಇ’ ಬ್ಲಾಕ್‌ನ 2ನೇ ತಿರುವಿನಲ್ಲಿ ವೈದ್ಯರೊಬ್ಬರಿಗೆ ಪಾಸಿಟಿವ್ ಬಂದಿದ್ದು, ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಇನ್ನೂ ಗಾಂಧಿಬಜಾರಿನ 5ನೇ ತಿರುವು ಅಶೋಕ ರಸ್ತೆಯ ವೃದ್ಧೆಯೊಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಸದರಿ ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ.
ಕೊರೋನಾ ಪಾಸಿಟಿವ್; ಆಸ್ಪತ್ರೆಯಿಂದ ಜಿಗಿದು ಪತ್ರಕರ್ತ ಆತ್ಮಹತ್ಯೆ
ದುರ್ಗಿಗುಡಿಯ ಪ್ರತಿಷ್ಟಿತ ಬಟ್ಟೆಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವನಿಗೆ ಸೋಂಕು ತಗುಲಿದೆ. ಬಿಹೆಚ್ ರಸ್ತೆಯಲ್ಲಿರುವ ಫೋಟೋ ಲ್ಯಾಬ್‌ವೊಂದರಲ್ಲಿ ಯುವಕನಿಗೆ ಸೋಂಕು ಕಂಡುಬಂದಿದೆ. ಅಜಾದ್‌ನಗರದಲ್ಲಿ ಓರ್ವರಿಗೆ ಸೋಂಕು ಬಂದಿರುವ ಹಿನ್ನೆಲೆಯಲ್ಲಿ 3ನೇ ತಿರುವನ್ನು ಸೀಲ್‌ಡೌನ್ ಮಾಡಲಾಗಿದೆ. ಸೋಮವಾರ 8 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇದುವರೆಗೂ 125 ಸೋಂಕಿತರು ಬಿಡುಗಡೆಯಾಗಿದ್ದಾರೆ. 156 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.