ಕೊರೋನಾ ಸೋಂಕಿನಿಂದ ಮಂಗಳವಾರ ಬಿಡುಗಡೆಯಾದ 13 ಮಂದಿ ಸೇರಿ ಇದುವರೆಗೂ 235 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ತಿಳಿಸಿದರು.
ಮಂಡ್ಯ(ಜೂ.10): ಕೊರೋನಾ ಸೋಂಕಿನಿಂದ ಮಂಗಳವಾರ ಬಿಡುಗಡೆಯಾದ 13 ಮಂದಿ ಸೇರಿ ಇದುವರೆಗೂ 235 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ತಿಳಿಸಿದರು.
ಇಲ್ಲಿಯವರೆಗೆ 334 ಪ್ರಕರಣಗಳಲ್ಲಿ 235 ಪ್ರಕರಣಗಳು ಗುಣಮುಖರಾಗಿ ಡಿಸ್ಚಾಜ್‌ರ್ ಆಗಿದ್ದಾರೆ. ಇನ್ನೂ 99 ಸಕ್ರಿಯ ಪ್ರಕರಣಗಳಿವೆ. ಎಲ್ಲರೂ ಬಹುತೇಕ ಕೆಲವು ದಿನಗಳಲ್ಲಿ ಗುಣಮುಖರಾಗುತ್ತಾರೆ. ಎಲ್ಲರನ್ನೂ ಜಿಲ್ಲಾಡಳಿತ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
undefined
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್
ಮಂಡ್ಯದಲ್ಲಿ ಕೊರೋನಾ ಸೋಂಕಿತರಾಗಿದ್ದ ಕೊರೋನಾ ವಾರಿಯರ್ಸ್ ಸೇರಿದಂತೆ ಇತರ ರೋಗಿಗಳಿಗೆ ಜಿಲ್ಲಾಡಳಿತದಿಂದ ವಾದ್ಯಗಳಿಂದ ಹೂಮಳೆ ಸುರಿಸಿ ಸನ್ಮಾನಿಸಿ ಆಸ್ಪತ್ರೆ ಯಿಂದ ಬಿಡುಗಡೆ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಇಂದು ಕೊರೋನಾ ವಾರಿಯರ್ಸ್ ಜೊತೆಗೆ 13 ಜನರು ಇಂದು ಆಸ್ಪತ್ರೆಯಿಂದ ಡಿಸ್ಚಾಜ್‌ರ್‍ಮಾಡಲಾಗಿದೆ. ಕೊರೋನಾ ವಿರುದ್ಧ ಹೋರಾಟ ನೆಡೆಸುತ್ತಿರುವ ಸಿಬ್ಬಂದಿಗೆ ಗಿಡ ನೀಡಿ ಅಭಿನಂದಿಸಿದರು.
ಜಿಲ್ಲೆಯ ಮಟ್ಟಿಗೆ ಇತಿಹಾಸದಲ್ಲಿ ಈ ದಿನ ಅವಿಸ್ಮರಣೀಯ. 68 ವರ್ಷದ ವೈದ್ಯರು ಕೊರೋನಾ ವಿರುದ್ಧ ಪ್ರಾಣದ ಹಂಗು ತೊರೆದು ಸಾರ್ವಜನಿಕ ಸೇವೆಯಲ್ಲಿ ತೊಡಗಿದ್ದರು. ಅವರಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ಈ ವೈದ್ಯರು ಧೃತಿಗೆಡದೆ ಕೊರೋನಾ ವಿರುದ್ಧದ ಹೋರಾಟದಲ್ಲಿ ಜಯಶಾಲಿಯಾಗಿ ಬಂದಿದ್ದಾರೆ. 55 ವರ್ಷದ ಮೇಲ್ಪಟ್ಟವರು ಕೋವಿಡ್ ವಿರುದ್ಧ ಕೆಲಸ ಮಾಡಬಾರದು ಎಂದು ರೂಲ್ಸ್ ಇದೆ. ಇವರು 68 ವರ್ಷದ ಯುವತಿಯಂತೆ ಹೇಳಬಹುದು. ಅದ್ಬುತ ಕೆಲಸ ಮಾಡಿರುವ ಕೆ.ಆರ್.ಪೇಟೆಯ ಡಾ. ರುಕ್ಮಿಣಿ ರವರು ಕೊರೋನಾ ವಿರುದ್ಧ ಜಯಶಿಲಾರಾಗಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ವಿಡಿಯೋ ವೈರಲ್
ಮಂಡ್ಯ ವೈದ್ಯಾಧಿಕಾರಿಗಳು ತಾಲೂಕು ಮಟ್ಟದ ಅಧಿಕಾರಿಗಳು ಸಾರ್ವಜನಿಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ರೋಗಿಗಳಿಗೆ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸಮಾಡಿದ್ದಾರೆ. ಜಿಲ್ಲೆಯ 18 ಲಕ್ಷ ಜನರು ಆತ್ಮವಿಶ್ವಾಸದಿಂದ ಕೊರೋನಾ ಎದುರಿಸಲು ಸಹಕರಿಸಿ ಎಂದು ಡಿಸಿ ಕೋರಿದರು.
ಕೊರೋನಾ ಫ್ರಂಟ್‌ಲೈನ್ ವಾರಿಯರ್ಸ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಇಒ ಯಾಲಕ್ಕಿಗೌಡ, ಡಿಎಚ್‌ಒ ಮಂಚೇಗೌಡ, ಎಸ್ಪಿ ಪರಶುರಾಮ…, ತಹಶೀಲ್ದಾರ್ ನಾಗೇಶ್ ಭಾಗಿದ್ದರು.