ಬಳ್ಳಾರಿಯಲ್ಲಿ 23 ವೈದ್ಯರಿಗೆ ಕೊರೋನಾ

Sujatha NR   | Asianet News
Published : Apr 25, 2021, 07:14 AM IST
ಬಳ್ಳಾರಿಯಲ್ಲಿ 23 ವೈದ್ಯರಿಗೆ ಕೊರೋನಾ

ಸಾರಾಂಶ

 ಬಳ್ಳಾರಿಯ 23 ವೈದ್ಯರಲ್ಲಿ ಕೊರೋನಾ ಸೋಂಕು ಕಂಡು ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್‌ ಹೇಳಿದ್ದಾರೆ. 

ಬಳ್ಳಾರಿ (ಏ.25): ಕರ್ತವ್ಯದಲ್ಲಿ ನಿರತರಾಗಿರುವ ಬಳ್ಳಾರಿಯ 23 ವೈದ್ಯರಲ್ಲಿ ಕೊರೋನಾ ಸೋಂಕು ಕಂಡು ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್‌ ಹೇಳಿದ್ದಾರೆ.

ನಗರದ ಟ್ರಾಮಾಕೇರ್‌ ಸೆಂಟರ್‌ ಭೇಟಿ ನೀಡಿದ ಬಳಿಕ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಅವರು, ಸೇವೆಯಲ್ಲಿ ತೊಡಗಿರುವ ವೈದ್ಯರಲ್ಲಿ ಸಹ ಸೋಂಕು ಹಬ್ಬುತ್ತಿದೆ. ಎರಡು ಜಿಲ್ಲೆಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಅಗತ್ಯ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಬೆಂಗಳೂರು: ಒಂದೇ ದಿನ 149 ಮಂದಿ ಸಾವು, ಸಾವಿನಲ್ಲೂ ಕೊರೋನಾ ದಾಖಲೆ..!

ಈಗಾಗಲೇ ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಕೊರೋನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಒಂದೇ ದಿನ 30 ಸಾವಿರದಷ್ಟಾಗಿದ್ದು ಸಾವಿನ ಸಂಖ್ಯೆ 200ರ ಗಡಿ ದಾಟಿದೆ. ಬೆಂಗಳುರು ಕೊರೋನಾ ಸೋಂಕಿನ ರಾಜಧಾನಿಯಾಗಿದೆ. 

ದಿನದಿನವೂ ಸೋಂಕಿನ ಪ್ರಮಾಣ ಅಧಿಕವಾಗುತ್ತಿದ್ದು ಇದು ರಾಜ್ಯವನ್ನೇ ಇನ್ನಷ್ಟು ತಲ್ಲಣಗೊಳಿಸಿದೆ. 

PREV
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!