ಶನಿವಾರ 17,342 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆ| ಸಕ್ರಿಯ ಪ್ರಕರಣಗಳ ಸಂಖ್ಯೆ 1,62,171ಕ್ಕೆ ಹೆಚ್ಚಳ| ಈವರೆಗೆ ಸೋಂಕಿತರಾದವರ ಸಂಖ್ಯೆ 6,32,923ಕ್ಕೆ ಏರಿಕೆ| 149 ಮಂದಿಯ ಸಾವಿನೊಂದಿಗೆ ಈವರೆಗೆ ಮೃತಪಟ್ಟವರ ಸಂಖ್ಯೆ 5723ಕ್ಕೆ ಏರಿಕೆ| 10 ನಿಮಿಷಕ್ಕೊಂದು ಸಾವು|
ಬೆಂಗಳೂರು(ಏ.25): ನಗರದಲ್ಲಿ ಶನಿವಾರ ದಾಖಲೆಯ 149 ಜನರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದು, ಇದೇ ವೇಳೆ ದಾಖಲೆಯ 17,342 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಶುಕ್ರವಾರ 16,662 ಸೋಂಕಿತ ಪ್ರಕರಣಗಳು ಮತ್ತು 124 ಜನರು ಸಾವಿಗೀಡಾಗಿದ್ದರು. ಆದರೆ ಶನಿವಾರ ಸೋಂಕಿನ ಪ್ರಕರಣ ಹಾಗೂ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ. ಶನಿವಾರ ಪತ್ತೆಯಾದ ಹೊಸ ಪ್ರಕರಣಗಳೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 1,62,171ಕ್ಕೆ ಹೆಚ್ಚಳವಾಗಿದೆ. ಈವರೆಗೆ ಸೋಂಕಿತರಾದವರ ಸಂಖ್ಯೆ 6,32,923ಕ್ಕೆ ಏರಿದೆ. 149 ಮಂದಿಯ ಸಾವಿನೊಂದಿಗೆ ಈವರೆಗೆ ಮೃತಪಟ್ಟವರ ಸಂಖ್ಯೆ 5723ಕ್ಕೆ ಏರಿಕೆಯಾಗಿದೆ. 4646 ಮಂದಿ ಬಿಡುಗಡೆಯಾಗಿದ್ದು ಈವರೆಗೂ ಗುಣಮುಖರಾದವರ ಸಂಖ್ಯೆ 4,65,028ಕ್ಕೆ ಏರಿಕೆಯಾಗಿದೆ. ಸದ್ಯ 259 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಅಧಿಕಾರಿಗಳಿಗೆ ಡಿಸಿಎಂ ಅಶ್ವತ್ಥನಾರಾಯಣ ಖಡಕ್ ವಾರ್ನಿಂಗ್!
10 ನಿಮಿಷಕ್ಕೊಂದು ಸಾವು
ಶನಿವಾರದ 149 ಜನರು ಸಾವಿನ ಪ್ರಕರಣಗಳನ್ನು ವಿಶ್ಲೇಷಿಸಿದಾಗ ಅಂದಾಜು ಪ್ರತಿ 9.66 ನಿಮಿಷಕ್ಕೆ ಒಬ್ಬರು ಸಾವನ್ನಪ್ಪಿದ್ದಾರೆ. ಅದೇ ರೀತಿ ಸೋಂಕು ಪ್ರಕರಣಗಳು ಒಂದು ನಿಮಿಷಕ್ಕೆ 12 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕರಣ ಮುಂದಿನ ಎರಡ್ಮೂರು ದಿನಗಳಲ್ಲಿ ಇದಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಇದೆ.