ದಕ್ಷಿಣ ಕನ್ನಡ​ದಲ್ಲಿ 206 ಮಂದಿ ಕೊರೋನಾ ಗುಣಮುಖರು ಬಿಡುಗಡೆ

By Kannadaprabha News  |  First Published Jun 20, 2020, 7:13 AM IST

ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 13 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 422 ಮಂದಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾದಂತಾಗಿದೆ.


ಮಂಗಳೂರು(ಜೂ.20): ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 13 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 422 ಮಂದಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾದಂತಾಗಿದೆ.

ಶುಕ್ರವಾರ ಬಂದ ಒಟ್ಟು 118 ವರದಿಗಳ ಪೈಕಿ 105 ನೆಗೆಟಿವ್‌ ಮತ್ತು 13 ಪಾಸಿಟಿವ್‌ ಆಗಿದೆ. ಸೋಂಕಿತರ ಪೈಕಿ ಬಹುತೇಕ ಮಂದಿ ಸೌದಿ ಅರೇಬಿಯಾದಿಂದ ಬಂದು ಕ್ವಾರಂಟೈನ್‌ನಲ್ಲಿ ಇದ್ದವರು.

Tap to resize

Latest Videos

ರಾತ್ರೋ ರಾತ್ರಿ ಬಂತು ಫೋನ್: ಬೆಳ್ತಂಗಡಿಯ ಸಮಾನ್ಯ ಕಾರ್ಯಕರ್ತ ಎಂಲ್ಸಿ ಅಭ್ಯರ್ಥಿ

30 ಮಂದಿ ಡಿಸ್ಚಾರ್ಜ್‌: ಕೊರೋನಾ ಪಾಸಿಟಿವ್‌ ಪ್ರಕರಣಗಳು ಹೆಚ್ಚುತ್ತಿರುವ ಜೊತೆಯಲ್ಲಿ ಸೋಂಕು ಗುಣಮುಕ್ತರಾಗುವವರ ಸಂಖ್ಯೆಯೂ ಹೆಚ್ಚಾಗಿದೆ. ಶುಕ್ರವಾರ ಕೊರೋನಾ ಸೋಂಕು ಮುಕ್ತರಾಗಿ ಒಟ್ಟು 30 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 206 ಮಂದಿ ಡಿಸ್ಚಾರ್ಜ್‌ ಆದಂತಾಗಿದೆ. ಒಟ್ಟು ಎಂಟು ಮಂದಿ ಕೊರೋನಾದಿಂದಾಗಿ ಮೃತಪಟ್ಟಿದ್ದಾರೆ. 28 ಮಂದಿಯಲ್ಲಿ ಶ್ವಾಸಕೋಶದ ಸೋಂಕು ಪತ್ತೆಯಾಗಿದೆ.

ಮೇಲ್ಮನೆಗೆ 7 ಮಂದಿ ಅವಿರೋಧ ಆಯ್ಕೆ ನಿಶ್ಚಿತ..?

ಇಬ್ಬರು ಐಸಿಯುನಲ್ಲಿ: ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಯಲ್ಲಿ ದಾಖಲಾಗಿರುವ 50 ವರ್ಷ ಮತ್ತು 70 ವರ್ಷದ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಅವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ ಸೋಂಕಿತರ ಸಂಖ್ಯೆ 422ಕ್ಕೆ ಏರಿಕೆಯಾಗಿದೆ. ಈಗ 206 ಮಂದಿ ಗುಣಮುಖರಾಗಿದ್ದು, 208 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 8 ಮಂದಿ ಸೋಂಕಿ​ನಿಂದ ಮೃತ​ಪ​ಟ್ಟಿ​ದ್ದಾ​ರೆ.

click me!