ಹಾಸನ : ಸೇತುವೆ ಮೇಲಿಂದ ಬಿದ್ದು ಇಬ್ಬರು ಸಾವು

By Kannadaprabha NewsFirst Published Oct 5, 2019, 1:17 PM IST
Highlights

ಸೇತುವೆ ಮೇಲಿನಿಂದ ಕೆಳಕ್ಕೆ ಬಿದ್ದು ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸಂಬಂಧಿಗಳ ಮನೆಗೆ ತೆರಳುತ್ತಿದ್ದವರು ಮಸಣ ಸೇರಿದ್ದಾರೆ.

ಹಾಸನ [ಅ.05]: ಇಪ್ಪತ್ತು ಅಡಿ ಸೇತುವೆಯಿಂದ ಕೆಳಗೆ ಬಿದ್ದು ಇಬ್ಬರು ಸ್ಥಳದಲ್ಲೇ ಮೃತರಾದ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಬಸವನಹಳ್ಳಿ ಕೊಪ್ಪಲು ಬಳಿ ಗುರುವಾರ ರಾತ್ರಿ ನಡೆದಿದೆ.

ಮೈಸೂರು ಜಿಲ್ಲೆ ಕೆ.ಆರ್‌.ನಗರ ತಾಲೂಕು ಸಾಲಿಗ್ರಾಮದ ರಂಗ (32), ಸಿದ್ದು (35) ಮೃತಪಟ್ಟ ದುರ್ದೈವಿಗಳು. ಅವರಿಬ್ಬರು ಬೈಕ್‌ನಲ್ಲಿ ಅರಕಲಗೂಡು ತಾಲೂಕಿನ ಕೇರಳಾಪುರದ ಸಂಬಂಧಿಕರ ಮನೆಗೆ ಪಿತೃಪಕ್ಷ ಹಬ್ಬಕ್ಕೆ ಹೋಗುತ್ತಿದ್ದರು. ಈ ವೇಳೆ ಸೇತುವೆಯ ಬಳಿ ಬಂದಾಗ ಆಯಾತಪ್ಪಿ ಸೇತುವೆಯ ಮೇಲಿಂದ ಬಿದ್ದ ಪರಿಣಾಮ ಬೈಕ್‌ ಓಡಿಸುತ್ತಿದ್ದ ರಂಗ ಮತ್ತು ಹಿಂಬದಿ ಸವಾರ ಸಿದ್ದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಈ ಅವಘಡಕ್ಕೆ ಗುತ್ತಿಗೆದಾರ ಶಿವೇಗೌಡನ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂಬುದು ಗ್ರಾಮ ಪಂಚಾಯ್ತಿಯ ಸದಸ್ಯ ಸುರೇಶ್‌ ಆರೋಪ. ಕಳೆದ ಎರಡು ತಿಂಗಳ ಹಿಂದೆ ಅತೀ ಮಳೆಯಿಂದ ಉಂಟಾಗಿದ್ದ ಪ್ರವಾಹದ ಹಿನ್ನೆಲೆಯಲ್ಲಿ ಸೇತುವೆ ಹಾಳಾಗಿತ್ತು. ಪರಾರ‍ಯಯವಾಗಿ ಪಕ್ಕದಲ್ಲಿಯೇ ಒಂದು ರಸ್ತೆಯನ್ನು ಮಾಡಿದರು. ಆದರೆ, ಸೇತುವೆಗೆ ತಡೆಗೋಡೆ ನಿರ್ಮಿಸಲಿಲ್ಲ ಮತ್ತು ಮಾರ್ಗಸೂಚಿ ಫಲಕವನ್ನು ಹಾಕದ ಕಾರಣ ವಾಹನ ಸವಾರರು ಸೇತುವೆ ರಸ್ತೆ ಸರಿಯಿದೆ ಎಂದು ತಿಳಿದು ಹೋಗಿದ್ದರಿಂದ ಈ ದುರ್ಘಟನೆ ನಡೆದಿದೆ ಎಂದು ಗ್ರಾಪಂ ಸದಸ್ಯ ಸುರೇಶ್‌ ಆರೋಪಿಸಿದ್ದಾರೆ.

ಸೇತುವೆ ಮೇಲಿಂದ ವಾಹನ ಸಮೇತ ತಳಭಾಗದಲ್ಲಿದ್ದ ಕಲ್ಲು ಬಂಡೆಯ ಮೇಲೆ ಬಿದ್ದಿದ್ದರಿಂದ ತಲೆಗೆ ಬಲವಾದ ಪೆಟ್ಟು ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪಕ್ಷದ ಊಟಕ್ಕಾಗಿ ಸಂಬಂಧಿಕರ ಮನೆಗೆ ಹೊರಟಿದ್ದವರು ಮಸಣ ಸೇರಿದ್ದು, ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲುಮುಟ್ಟಿತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ,ಪರಿಶೀಲನೆ ನಡೆಸಿದರು. ಕೊಣನೂರು ಪೊಲೀಸ್‌ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

(ಸಾಂದರ್ಬಿಕ ಚಿತ್ರ)

click me!