ಪಿಕ್‌ನಿಕ್‌ ಹೋದವರು ಜಲಪಾತಕ್ಕೆ ಬಿದ್ದು ದಾರುಣ ಸಾವು

By Kannadaprabha News  |  First Published Apr 18, 2021, 4:30 PM IST

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತದಲ್ಲಿ ಮುಳುಗಿ ಇಬ್ಬರು ದಾರುಣವಾಗಿ ಸಾವಿಗೀಡಾಗಿದ್ದಾರೆ.  ನೀರಿನಲ್ಲಿ ಬಿದ್ದ ಯುವತಿಯನ್ನು ರಕ್ಷಿಸಲು ಹೋದವನೂ ಕೂಡ ಮುಳುಗಿ ಮೃತಪಟ್ಟಿದ್ದಾನೆ.


ಕೊಡಗು (ಏ.18): ಕೊಡಗು ಜಿಲ್ಲೆಯ ಮಲ್ಲಳ್ಳಿ ಜಲಪಾತದಲ್ಲಿ ಬಿದ್ದು ಇಬ್ಬರು ದಾರುಣವಾಗಿ ಸಾವಿಗೀಡಾಗಿದ್ದಾರೆ.  

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತದಲ್ಲಿ ಇಂದು ಬೆಳಗ್ಗೆ 9.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. 

Tap to resize

Latest Videos

ಯುಗಾದಿ ಹಬ್ಬದಂದು ಕರಾವಳಿಯಲ್ಲಿ ದೋಣಿ ದುರಂತ! ...

ಜಲಪಾತಕ್ಕೆ ಪಿಕ್‌ನಿಕ್ ಗೆಂದು 6 ಮಂದಿ ತೆರಳಿದ್ದು, ಈ ವೇಳೆ ನೀರಿನಲ್ಲಿ ಬಿದ್ದು  ದಿವ್ಯಾ (20) ಹಾಗೂ ಶಶಿಕುಮಾರ್ (32), ಮೃತಪಟ್ಟಿದ್ದಾರೆ. 

ದಿವ್ಯಾ ಆಯತಪ್ಪಿ‌ ನೀರಿಗೆ ಬಿದ್ದಿದ್ದು,  ದಿವ್ಯಾಳನ್ನು ರಕ್ಷಣೆ ಮಾಡಲು  ಶಶಿಕುಮಾರ್ ಹೋಗಿದ್ದು, ಇಬ್ಬರೂ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ.  

ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

click me!