ಸಿಎಂ ಬದಲಾವಣೆ ಕಾದು ನೋಡೋಣ: ಬಸನಗೌಡ ಪಾಟೀಲ ಯತ್ನಾಳ್‌

By Kannadaprabha News  |  First Published Apr 18, 2021, 2:40 PM IST

ವಿಜಯೇಂದ್ರ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಫೆಡರಲ್‌ ಬ್ಯಾಂಕ್‌ ಹಗರಣದ ತನಿಖೆ ಆರಂಭಗೊಂಡಿದ್ದು ಎಫ್‌ಐಆರ್‌ ಸಹ ದಾಖಲಾಗಿದೆ. ಯಾರೆಲ್ಲ ಎಷ್ಟು ಸಾವಿರ ಕೋಟಿ ಹಣ ಇಟ್ಟಿದ್ದಾರೆ ಎಂಬುದು ಹೊರಬೀಳಲಿದೆ ಎಂದ ಯತ್ನಾಳ್‌


ಬಾಗಲಕೋಟೆ(ಏ.18): ಉಪಚುನಾವಣೆ ಮುಗಿದಿದ್ದು, ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬದಲಾವಣೆ ಪ್ರಕ್ರಿಯೆ ಆರಂಭವಾಗುತ್ತೋ ಅಥವಾ ಬೇರೇನಾದರೂ ನಡೆಯುತ್ತೋ ನೋಡೋಣ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹೇಳಿದ್ದಾರೆ. 

ಜಿಲ್ಲೆಯ ತೇರದಾಳದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉಪಚುನಾವಣೆ ನಂತರದ ಪ್ರಕ್ರಿಯೆಯನ್ನು ಕಾದು ನೋಡೋಣ ಎಂಬರ್ಥದಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಅವರ ಪುತ್ರ ವಿಜಯೇಂದ್ರ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಫೆಡರಲ್‌ ಬ್ಯಾಂಕ್‌ ಹಗರಣದ ತನಿಖೆ ಆರಂಭಗೊಂಡಿದ್ದು ಎಫ್‌ಐಆರ್‌ ಸಹ ದಾಖಲಾಗಿದೆ. ಯಾರೆಲ್ಲ ಎಷ್ಟು ಸಾವಿರ ಕೋಟಿ ಹಣ ಇಟ್ಟಿದ್ದಾರೆ ಎಂಬುದು ಹೊರಬೀಳಲಿದೆ ಎಂದರು.

Tap to resize

Latest Videos

ಜಮಖಂಡಿ: ಮುಷ್ಕರದ ಮಧ್ಯೆ ಬಸ್‌ ಚಾಲನೆ, ಕಲ್ಲೇಟಿಗೆ ಚಾಲಕ ಬಲಿ

ಇದೇ ವೇಳೆ ಪಕ್ಷದ ಅಧ್ಯಕ್ಷ ಕಟೀಲ್‌ ತಮ್ಮ ಹೇಳಿಕೆಗಳಿಗೆ ಅಸಮಾಧಾನ ವ್ಯಕ್ತಪಡಿಸಿದ ಕುರಿತು ಪ್ರತಿಕ್ರಿಯಿಸಿದ ಯತ್ನಾಳ, ಅವರು ಪಕ್ಷದ ರಾಜ್ಯಾಧ್ಯಕ್ಷರು ಅವರಿಗೆ ಹೇಳುವ ಅಧಿಕಾರವಿದೆ ಎಂದು ತಿಳಿಸಿದ್ದಾರೆ.
 

click me!