ರಂಜಾನ್ ಉಪವಾಸ ಅಂತ್ಯ ಬಳಿಕ ಪಾನೀಪೂರಿ ತಿಂದು 19 ಮಕ್ಕಳು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರು ಗ್ರಾಮದ ಜಾಮೀಯಾ ಮಸೀದಿ ಬಳಿ ನಡೆದಿದೆ.
ದಾವಣಗೆರೆ (ಮಾ.15): ಪಾನೀಪೂರಿ ತಿಂದು 19 ಮಕ್ಕಳು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರು ಗ್ರಾಮದ ಜಾಮೀಯಾ ಮಸೀದಿ ಬಳಿ ನಡೆದಿದೆ.
ರಂಜಾನ್ ಹಬ್ಬದ ಉಪವಾಸ ಅಂತ್ಯ ಮಾಡಿದ ನಂತರ ಮಸೀದಿ ಮುಂಭಾಗ ಪಾನೀಪೂರಿ ತಿನ್ನಲು ಹೋಗಿದ್ದ ಮಕ್ಕಳು. ಪಾನೀಪೂರಿ ತಿಂದ ಕೆಲ ಹೊತ್ತಿನಲ್ಲೇ ಮಕ್ಕಳಿಗೆ ವಾಂತಿಯಾಗಿದೆ ಬಳಿಕ ತೀವ್ರ ಅಸ್ವಸ್ಥಗೊಂಡು ಕುಸಿದುಬಿದ್ದಿರುವ ಮಕ್ಕಳು. ತಕ್ಷಣವೇ ಪೋಷಕರು ಮಕ್ಕಳನ್ನ ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಸ್ವಸ್ಥಗೊಂಡ 19 ಮಕ್ಕಳ ಪೈಕಿ ನಾಲ್ವರ ಮಕ್ಕಳ ಆರೋಗ್ಯ ಚಿಂತಾಜನಕವಾಗಿದೆ. ದಾವಣಗೆರೆ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡುತ್ತಿರುವ ವೈದ್ಯರು.
undefined
ಮೂಕಪ್ರಾಣಿಗಳ ಜೀವಕ್ಕೆ ಕುತ್ತು ತಂದ ಆನೆಗೊಂದಿ ಉತ್ಸವ; ಕೊಳೆತ ಆಹಾರ ತಿಂದು 30ಕ್ಕೂ ಹೆಚ್ಚು ಕುರಿ, ಮೇಕೆ ಸಾವು!
ಘಟನೆ ಮಾಹಿತಿ ತಿಳಿಯುತ್ತಿದ್ದ ಸ್ಥಳಕ್ಕೆ ದೌಡಾಯಿಸಿದ ಹರಿಹರ ತಹಸೀಲ್ದಾರ್ ಗುರುಬಸವರಾಜ್ ಪರಿಶೀಲನೆ ನಡೆಸಿದ್ದಾರೆ. ಹರಿಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ