ದುಬೈನಿಂದ ಮುಂದಿನ ವಿಮಾನ ಮೇ 18ರಂದು ಆಗಮಿಸಲಿದ್ದು, ಸುಮಾರು 170ರಷ್ಟುಪ್ರಯಾಣಿಕರು ಆಗಮಿಸುವ ನಿರೀಕ್ಷೆಯಿದೆ ಎಂದು ಜಿಲ್ಲಾಧಿಕಾರಿ ಸಿಂಧು ರೂಪೇಶ್ ತಿಳಿಸಿದ್ದಾರೆ.
ಮಂಗಳೂರು(ಮೇ 16): ದುಬೈನಿಂದ ಮುಂದಿನ ವಿಮಾನ ಮೇ 18ರಂದು ಆಗಮಿಸಲಿದ್ದು, ಸುಮಾರು 170ರಷ್ಟುಪ್ರಯಾಣಿಕರು ಆಗಮಿಸುವ ನಿರೀಕ್ಷೆಯಿದೆ ಎಂದು ಜಿಲ್ಲಾಧಿಕಾರಿ ಸಿಂಧು ರೂಪೇಶ್ ತಿಳಿಸಿದ್ದಾರೆ.
ದುಬೈನಿಂದ ವಿಮಾನದಲ್ಲಿ ಆಗಮಿಸುವವರನ್ನು ಸ್ಕ್ರೀನಿಂಗ್ ಹಾಗೂ ರಾರಯಪಿಡ್ ಟೆಸ್ಟ್‌ಗೆ ಒಳಪಡಿಸುತ್ತಾರೆ. ಪ್ರಥಮ ವಿಮಾನದಲ್ಲಿ ಬಂದವರಲ್ಲಿ ಬಹುತೇಕರು ವೈದ್ಯಕೀಯ ಅಗತ್ಯಗಳಿದ್ದವರು, ಗರ್ಭಿಣಿಯರೂ ಸೇರಿದ್ದಾರೆ. ಮುಂದಿನ ವಿಮಾನ ಬರುವಾಗ ಯಾವುದೇ ರೀತಿಯ ಸಮಸ್ಯೆಗಳಾದದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದರು.
ಕ್ವಾರಂಟೈನ್ ಕೇಂದ್ರಗಳಲ್ಲಿ ಕಣ್ಗಾವಲು!
ದುಬೈನಿಂದ ಆಗಮಿಸಿದ ಕನ್ನಡಿಗರು ಹೊಟೇಲ್‌ಗಳಿಂದ ಹೊರಬರದೆ ಕ್ವಾರಂಟೈನ್ ನಿಯಮ ಪಾಲಿಸುವಂತೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಕ್ವಾರಂಟೈನ್ ಕೇಂದ್ರಕ್ಕೆ ಒಬ್ಬ ನೋಡಲ್ ಅಧಿಕಾರಿ ಹಾಗೂ ಕೇಂದ್ರದ ಸಿಬ್ಬಂದಿಗೆ ತರಬೇತಿ ನೀಡಿ ಮುಂಜಾಗೃತಾ ಕ್ರಮಗಳನ್ನು ಪಾಲಿಸಲು ಸೂಚಿಸಲಾಗಿದೆ. ಸಿಸಿ ಟಿವಿ ಕಣ್ಗಾವಲು ಕೂಡ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ಧಾರೆ.