ಮಕ್ಕಳಂತೆ ಸಾಕಿದ್ದ ಮರಗಳ ಮಾರಣ ಹೋಮ..! ಮುಗಿಲು ಮುಟ್ಟಿತು ರೈತ ಮಹಿಳೆಯ ಆಕ್ರಂದನ

By Kannadaprabha NewsFirst Published Mar 9, 2020, 11:08 AM IST
Highlights

ಮಹಿಳಾ ದಿನಾಚರಣೆಯಂದೆ ಮಹಿಳೆಯೊಬ್ಬರ ಆಕ್ರಂದನ ಮುಗಿಲು ಮುಟ್ಟಿದ್ದು ತಾನೇ ನೀರು ಹೊಯ್ದು ಬೆಳೆಸಿದ್ದ ಸಿದ್ದಮ್ಮ ಅವರಿಗೆ ಸೇರಿದ್ದ ತೆಂಗು ಮತ್ತು ಅಡಿಕೆ ಮರಗಳು ಕಣ್ಣೆದುರೇ ನೆಲಕ್ಕುರುಳಿರುವ ಘಟನೆ ಗುಬ್ಬಿ ತಾಲೂಕು ತಿಪ್ಪೂರು ಗ್ರಾಮದಲ್ಲಿ ನಡೆದಿದೆ.

ತುಮಕೂರು(ಮಾ.09): ಮಹಿಳಾ ದಿನಾಚರಣೆಯಂದೆ ಮಹಿಳೆಯೊಬ್ಬರ ಆಕ್ರಂದನ ಮುಗಿಲು ಮುಟ್ಟಿದ್ದು ತಾನೇ ನೀರು ಹೊಯ್ದು ಬೆಳೆಸಿದ್ದ ಸಿದ್ದಮ್ಮ ಅವರಿಗೆ ಸೇರಿದ್ದ ತೆಂಗು ಮತ್ತು ಅಡಿಕೆ ಮರಗಳು ಕಣ್ಣೆದುರೇ ನೆಲಕ್ಕುರುಳಿರುವ ಘಟನೆ ಗುಬ್ಬಿ ತಾಲೂಕು ತಿಪ್ಪೂರು ಗ್ರಾಮದಲ್ಲಿ ನಡೆದಿದೆ.

ಜಿಲ್ಲಾಧಿಕಾರಿ ಆದೇಶವನ್ನೇ ಧಿಕ್ಕರಿಸಿದ ಅಧಿಕಾರಿಗಳು ಮುಂದೆ ನಿಂತು ಸಿದ್ದಮ್ಮನವರಿಗೆ ಸೇರಿದ ಅಡಿಕೆ ಮತ್ತು ತೆಂಗಿನ ಮರಗಳನ್ನು ಕಡಿಸಿಹಾಕಿದ್ದಾರೆ. ತಾನು ಸಲಹಿದ ಫಲ ನೀಡುತ್ತಿದ್ದ ಮರಗಳು ಕಡಿದ್ದನ್ನು ನೋಡಿ ಸಿದ್ದಮ್ಮ ಮಕ್ಕಳು ಕಳೆದುಕೊಂಡಂತೆ ಅಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ.

ಕರ್ನಾಟಕ ಬಜೆಟ್ 2020 : ಅಡಕೆ ಬೆಳೆಗಾರರಿಗೆ ಬಂಪರ್

ತಿಪ್ಪೂರು ಗ್ರಾಮದಲ್ಲಿ ಕೋಡಿಕೆಂಪಮ್ಮ ದೇವಾಲಯದ ಜಾತ್ರೆ ಇತ್ತು. ಆ ಜಾತ್ರೆ ನಡೆಯುವ ಜಾಗದ ಭೂಮಿ ವಿವಾದದಲ್ಲಿತ್ತು. ಆ ಜಮೀನನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಆದರೆ ಅಧಿಕಾರಿಗಳು ಸಿದ್ದಮ್ಮ ಅವರ ತೋಟವನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗಿದೆ ಎಂಬುದು ಗ್ರಾಮಸ್ಥ ದೂರಾಗಿದೆ.

ಕೋಡಿಕೆಂಪಮ್ಮ ಜಾತ್ರೆಯ ಹಿನ್ನೆಲೆಯಲ್ಲಿ ಜಾತ್ರೆ ನಡೆಯಬೇಕಿದ್ದ ಬೇರೆ ಸ್ಥಳದಲ್ಲಿ ಪರಿಶೀಲನೆ ಮಾಡುವ ಬದಲು ಸಿದ್ದಮ್ಮನವರ ತೋಟಕ್ಕೆ ಕೊಡಲಿ ಪೆಟ್ಟು ನೀಡಲಾಗಿದೆ. ಭಾನುವಾರ ಬೆಳಿಗ್ಗೆ ಸಿದ್ದಮ್ಮ ಅವರು ತೋಟಕ್ಕೆ ಹೋದ ಅಧಿಕಾರಿಗಳು 170 ಅಡಿಕೆ ಗಿಡಗಳು ಮತ್ತು 25 ತೆಂಗಿನ ಮರಗಳನ್ನು ಕಡಿಸಿ ಹಾಕಿದ್ದಾರೆ. ಈ ಮೂಲಕ ಜಿಲ್ಲಾಧಿಕಾರಿಗಳು ನೀಡಿದ್ದ ಆದೇಶವನ್ನು ಉಲ್ಲಂಘಿಸಿದ್ದಾರೆ. ಈ ಘಟನೆ ವೈರಲ್‌ ಆಗಿದ್ದು ಅಧಿಕಾರಿಗಳ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

"

click me!