ನ್ಯೂ ಬಿಇಎಲ್ ರಸ್ತೆಯ ಪಬ್‌ವೊಂದರ ಸಿಬ್ಬಂದಿಗೆ ವೈರಸ್| 87 ಮಂದಿ ಸಿಬ್ಬಂದಿಗೆ ಪರೀಕ್ಷೆ| ಬೆಂಗಳೂರಿನಲ್ಲಿ ಕಸ್ಟರ್ ಸೋಂಕು ಹೆಚ್ಚಳ| ಕೇರ್ ಸೆಂಟರ್‌ಗೆ 30 ಮಂದಿ|
ಬೆಂಗಳೂರು(ಮಾ.29): ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಉಲ್ಬಣವಾಗುತ್ತಿದ್ದು, ಕ್ಲಸ್ಟರ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ನಗರದಲ್ಲಿ ಈವರೆಗೆ ಐದಕ್ಕಿಂತ ಹೆಚ್ಚಿನ ಪ್ರಕರಣಗಳು ಕಂಡು ಬಂದಿರುವ 29 ಕ್ಲಸ್ಟರ್‌ಗಳನ್ನು ಗುರುತಿಸಲಾಗಿದೆ. ಈ ಪೈಕಿ ದಾಸರಹಳ್ಳಿ ವಲಯದಲ್ಲಿ 9, ಯಲಹಂಕ ವಲಯದಲ್ಲಿ 8, ಪೂರ್ವ ವಲಯದಲ್ಲಿ 7, ಪಶ್ಚಿಮ ವಲಯದಲ್ಲಿ 3 ಹಾಗೂ ದಕ್ಷಿಣ ವಲಯದಲ್ಲಿ 2 ಕ್ಲಸ್ಟರ್‌ಗಳಿವೆ.
undefined
ಪಬ್‌ನ 16 ಸಿಬ್ಬಂದಿಗೆ ಸೋಂಕು:
ನಗರದ ನ್ಯೂ ಬಿಇಎಲ್ ರಸ್ತೆಯ ಪಬ್‌ವೊಂದರ 87 ಸಿಬ್ಬಂದಿಯನ್ನು ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ 16 ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಆ ಸ್ಥಳವನ್ನು ಕೊರೋನಾ ಕ್ಲಸ್ಟರ್ ಎಂದು ಗುರುತಿಸಲಾಗಿದೆ.
ಕೋವಿಡ್ ವರದಿಗೆ ಹೆದರಿ ಆಂಧ್ರ, ತೆಲಂಗಾಣ ಜನ ಬೆಂಗ್ಳೂರಿಗೆ ದೌಡು..!
ಕೇರ್ ಸೆಂಟರ್‌ಗೆ 30 ಮಂದಿ:
ನಗರದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆಯು ಹಜ್ ಭವನದಲ್ಲಿ 200 ಹಾಸಿಗೆ ಸಾಮರ್ಥ್ಯದ ಕೋವಿಡ್ ಆರೈಕೆ ಕೇಂದ್ರ ಆರಂಭಿಸಿದೆ. ಭಾನುವಾರ ಈ ಕೇಂದ್ರದಲ್ಲಿ 22 ಪುರುಷರು ಹಾಗೂ 8 ಮಹಿಳೆಯರು ಸೇರಿ ಒಟ್ಟು 30 ಸೋಂಕಿತರು ದಾಖಲಾಗಿದ್ದಾರೆ.
48 ಮಕ್ಕಳಿಗೆ ಸೋಂಕು ದೃಢ
ನಗರದಲ್ಲಿ ಭಾನುವಾರ ವರದಿಯಾದ ಒಟ್ಟು 2,004 ಪ್ರಕರಣಗಳ ಪೈಕಿ 10 ವರ್ಷದೊಳಗಿನ 48 ಮಕ್ಕಳಿಗೆ ಸೋಂಕು ದೃಢಪಟ್ಟಿದೆ. ಅಂತೆಯೆ 30ರಿಂದ 39 ವರ್ಷದೊಳಗಿನ 429, 20ರಿಂದ 29 ವರ್ಷದೊಳಗಿನ 413, 40ರಿಂದ 49 ವರ್ಷದೊಳಗಿನ 329, 50ರಿಂದ 59 ವರ್ಷದೊಳಗಿನ 275, 10ರಿಂದ 19 ವರ್ಷದೊಳಗಿನ 203, 60ರಿಂದ 69 ವರ್ಷದೊಳಗಿನ 177, 70 ವರ್ಷ ಮೇಲ್ಪಟ್ಟ 130 ಮಂದಿ ಸೋಂಕಿಗೆ ತುತ್ತಾಗಿದ್ದಾರೆ.