ನೀನಾಸಂ ಕೆವಿ ಸುಬ್ಬಣ್ಣ ಪತ್ನಿ ಹಿರಿಯ ಚೇತನ ಶೈಲಜಾ(80) ಇನ್ನಿಲ್ಲ

By Suvarna News  |  First Published Mar 28, 2021, 7:43 PM IST

ಶೈಲಜಾ ಕೆ.ವಿ. ಸುಬ್ಬಣ್ಣ ನಿಧನ/ ಭಾನುವಾರ ಮಧ್ಯಾಹ್ನ  ನಿಧನ/ ನೀನಾಸಂ ಬಳಗದವರಿಂದ ಅಮ್ಮ ಎಂದೇ ಕರೆಸಿಕೊಂಡರು/ ಅಪಾರ ಗೌರವಕ್ಕೆ ಪಾತ್ರವಾಗಿದ್ದ ಮಹಾತಾಯಿ 


ಶಿವಮೊಗ್ಗ(ಮಾ.  28)  ಹೆಗ್ಗೋಡಿನ ಹಿರಿಯ ಜೀವ, ನೀನಾಸಂ ಬಳಗದವರ ನೆಚ್ಚಿನ 'ಅಮ್ಮ ಶೈಲಜಾ ಕೆ.ವಿ. ಸುಬ್ಬಣ್ಣ (80 ವರ್ಷ) ಭಾನುವಾರ ನಿಧನರಾಗಿದ್ದಾರೆ. ಮಧ್ಯಾಹ್ನ 1.10ಕ್ಕೆ  ಲೋಕ ತ್ಯಜಿಸಿದ್ದಾರೆ.

ನೀನಾಸಂ ಎಂಬ  ಸಂಸ್ಥೆಯ ಬೆಳವಣಿಗೆಯ ಹಿಂದೆ ಈ ತಾಯಿಯ ಕೊಡುಗೆ ದೊಡ್ಡದು.  ನೀಲಕಂಠೇಶ್ವರ ನಾಟ್ಯ ಸಂಘವನ್ನು ರಂಗಕರ್ಮಿ ಕೆವಿ ಸುಬ್ಬಣ್ಣ 1949 ರಲ್ಲಿ ಸ್ಥಾಪನೆಮಾಡಿದ್ದರು. ಹೆಗ್ಗೋಡಿನ ಈ ರಂಗಸಜ್ಜಿಕೆ ಮಹಾನ್ ಕಲಾವಿದರನ್ನು ತಯಾರು ಮಾಡಿದೆ.

Tap to resize

Latest Videos

ಪ್ರಸನ್ನ ಕೂಸು ಚರಕದ ಕಟು ವಾಸ್ತವ

ಚಾಲೆಂಜಿಂಗ್ ಸ್ಟಾರ್ ದರ್ಶನ್, ನೀನಾಸಂ ಸತೀಶ್  ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಅವರ ಪ್ರತಿಭೆ ಅನಾವರಣಕ್ಕೆ ವೇದಿಕೆ ಮಾಡಿಕೊಟ್ಟಿದ್ದುನ ನೀನಾಸಂ. ಸುಬ್ಬಣ್ಣ ನೀನಾಸಂ ತಂದೆಯಾಗಿದ್ದರೆ ಶೈಲಜಾ  ತಾಯಿಯಾಗಿದ್ದರು.  ಮಗ  ಲೇಖಕ ಅಕ್ಷರ, ಸೊಸೆ ವಿದ್ಯಾ, ಮೊಮ್ಮಗ ಶಿಶಿರ ಇವರ ಕುಟುಂಬ.

ಹಸಿರನ ತಪ್ಪಲಿನ ನಡುವೆ ಸಮಾಜಮುಖಿ ಚಿಂತನೆಗಳೊಂದಿಗೆ ಕಲಾವಿದರನ್ನು ಕೊಡುಗೆಯಾಗಿ ನೀಡುವ ನೀನಾಸಂನಲ್ಲಿ ಮೌನ ಆವರಿಸಿದೆ. ಮಹಾನ್ ಚೇತನವೊಂದು  ಅಗಲಿದೆ. 

 

 

click me!