ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನಲ್ಲಿ 15 ಕೊರೋನಾ ಕೇಸ್, ಆತಂಕಕ್ಕೀಡಾದ ಗ್ರಾಮಸ್ಥರು| ಮಾಸೂರು ಗ್ರಾಮದ ಓರ್ವ ಆಶಾ ಕಾರ್ಯಕರ್ತೆಗೆ ಹಾಗೂ ಗುಡ್ಡದ ಮಾದಾಪುರ ಗ್ರಾಮದ ಆಶಾ ಕಾರ್ಯಕರ್ತೆಗೆ ಕೊರೋನಾ ಕೇಸ್ ದೃಢ|
ಗೀತಾ ನಾಯಕ
ರಟ್ಟಿಹಳ್ಳಿ(ಜು. 01): ಈ ವರೆಗೂ ರಟ್ಟಿಹಳ್ಳಿ ತಾಲೂಕು ಗ್ರೀನ್ ಜೋನ್‌ನಲ್ಲಿತ್ತು. ಆದರೆ ಖವಾಸಪುರದ ವೃದ್ಧೆಯೊಬ್ಬಳಿಂದ ರಟ್ಟಿಹಳ್ಳಿ ಪಟ್ಟಣಕ್ಕೆ ವಕ್ಕರಿಸಿ ರೆಡ್‌ಜೋನ್ ಆಗಿ ಪರಿವರ್ತನೆ ಆಗಿದೆ. ಅದೇ ರೀತಿ ತಾಲೂಕಿನ ಮಾಸೂರು ಗ್ರಾಮದಲ್ಲಿ 6, ರಾಮತೀರ್ಥದಲ್ಲಿ 7 ಹಾಗೂ ಗುಡ್ಡದ ಮಾದಾಪುರ ಗ್ರಾಮದಲ್ಲಿ ಒಂದು ಕೇಸ್ ದೃಢಪಟ್ಟಿದೆ ಎಂದು ತಹಸೀಲ್ದಾರ್ ಗುರುಬಸವರಾಜ ಮಂಗಳವಾರ ತಿಳಿಸಿದ್ದಾರೆ.
ಖವಾಸಪುರದ ವೃದ್ಧೆಯು ಜೂ. 18ರಂದು ಬಂದು ಹೋಗಿದ್ದು, ಅವರು ಬಂದಂತಹ ಸಂಧರ್ಭದಲ್ಲಿ ಆರೋಗ್ಯದ ಏರುಪೇರಿನಿಂದಾಗಿ ಸ್ಥಳೀಯ ಖಾಸಗಿ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದು, ಅಂದು ಅವಳಿಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಕೋವಿಡ್-19 ದೃಢಪಟ್ಟಿದೆ. ವೃದ್ಧೆ ಬಂದು ಹೋದ ಮೇಲೆ ಆ ವೈದ್ಯರು ಯಾರಾರಯರಿಗೆ ಚಿಕಿತ್ಸೆ ನೀಡಿದ್ದಾರೆ ಎಂಬುದರ ಹಿನ್ನೆಲೆ ನೋಡಿದಾಗ ರಟ್ಟಿಹಳ್ಳಿಯಲ್ಲಿ ಬಹಳಷ್ಟುಜನರಿಗೆ ಬಂದಿದೆ ಎಂಬ ಆತಂಕ ಜನರ ಮನದಲ್ಲಿದೆ.
ಹಾವೇರಿಯಲ್ಲಿ ಕೊರೋನಾಕ್ಕೆ ಇಬ್ಬರು ವೃದ್ಧೆಯರು ಬಲಿ: 49 ಪಾಸಿಟಿವ್
ಜೋಶಿ ಡಾಕ್ಟರ್ ಓಣಿ ಸೀಲ್‌ಡೌನ್
ರಟ್ಟಿಹಳ್ಳಿ ಖಾಸಗಿ ವೈದ್ಯರಿಗೆ ಮಂಗಳವಾರ ಕೊರೋನಾ ದೃಢಪಟ್ಟಹಿನ್ನೆಲೆಯಲ್ಲಿ ಜೋಶಿ ಡಾಕ್ಟರ್ ಓಣಿಯ ಬಳಿ 100 ಮೀಟರ್ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದ್ದು, 200 ಮೀಟರ್ ಪ್ರದೇಶವನ್ನು ಬಫರ್ ಜೋನ್ ಪ್ರದೇಶವೆಂದು ಗುರುತಿಸಲಾಗಿದೆ.
ಮಾಸೂರಿನ 3 ಪ್ರದೇಶ ಸೀಲ್‌ಡೌನ್
ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಕೊಪ್ಪಿನ ಹೊಂಡ, ಹುಬ್ಬಳ್ಳಿಯವರ ಓಣಿ ಮತ್ತು ಸರ್ವಜ್ಞ ಪ್ಲಾಟ್ ಓಣಿಗಳಲ್ಲಿ ಕೊರೋನಾ ಕೇಸ್ ದೃಢಪಟ್ಟಹಿನ್ನೆಲೆಯಲ್ಲಿ ಸೀಲ್‌ಡೌನ್ ಮಾಡಲಾಗಿದೆ. ಜತೆಗೆ ಗುಡ್ಡದ ಮಾದಾಪುರ ಗ್ರಾಮದಲ್ಲಿ ಒಂದು ಕೇಸ್ ದೃಢಪಟ್ಟಿದೆ. ಒಟ್ಟು ರಟ್ಟಿಹಳ್ಳಿ ತಾಲೂಕಿನಲ್ಲಿ 15 ಕೇಸ್ ದಾಖಲಾಗಿವೆ.
ಇಬ್ಬರು ಆಶಾಗಳಿಗೆ ಕೊರೋನಾ ದೃಢ
ಮಾಸೂರು ಗ್ರಾಮದ ಓರ್ವ ಆಶಾ ಕಾರ್ಯಕರ್ತೆಗೆ ಹಾಗೂ ಗುಡ್ಡದ ಮಾದಾಪುರ ಗ್ರಾಮದ ಆಶಾ ಕಾರ್ಯಕರ್ತೆಗೆ ಕೊರೋನಾ ಕೇಸ್ ದೃಢವಾಗಿದೆ. ದಿನದಿಂದ ದಿನಕ್ಕೆ ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಟ್ಟಿಹಳ್ಳಿ ಸೇರಿದಂತೆ ತಾಲೂಕಿನ ಎಲ್ಲಾ ಹಳ್ಳಿಯ ಜನರು ಆತಂಕಕ್ಕೀಡಾಗಿದ್ದಾರೆ.