ತುಂಗಭದ್ರಾ ನಾಲೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

By Web DeskFirst Published Sep 1, 2019, 11:03 AM IST
Highlights

ಈ ಬಾರಿ ಭಾರೀ ಪ್ರಮಾಣದಲ್ಲಿ ಮಳೆಯಾದರೂ ಕೂಡ ರೈತರು ನೀರಿಗಾಗಿ ಪರದಾಡುವುದು ಮಾತ್ರ ತಪ್ಪಿಲ್ಲ. ತುಂಗಭದ್ರಾ ಕಾಲುವೆ ನೀರನ್ನೇ ನಂಬಿ ಬೆಳೆ ಬೆಳೆದ ರೈತರೀಗ ಕಂಗಾಲಾಗಿದ್ದಾರೆ. 

ರಾಯಚೂರು [ಸೆ.01]:  ಈ ಬಾರೀ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದ ಕಾರಣ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಆದರೂ ಕೂಡ ಇಲ್ಲಿ ತಾವು ಬೆಳೆದ ಬೆಳೆಗಳಿಗೆ ನೀರು ಸಿಗದೇ ರೈತರು ಕಂಗಾಲಾಗಿದ್ದಾರೆ.

ತುಂಗಭದ್ರಾ ಎಡದಂಡೆ ನಾಲೆಯ ನೀರನ್ನೇ ನಂಬಿದ್ದ ಕೆಳಭಾಗದ ರೈತರು ನೀರಿಗಾಗಿ ಪರದಾಡುತ್ತಿದ್ದಾರೆ. 

ರಾಯಚೂರು ಜಿಲ್ಲೆಯ ಸಿಂಧನೂರು ಹಾಗು ಮಾನ್ವಿ ತಾಲೂಕಿನ ರೈತರು ಕಾಲುವೆ ನೀರು ನಂಬಿ‌ ಭತ್ತ ನಾಟಿ‌ ಮಾಡಿದ್ದು, ಈಗ ತಮ್ಮ ಬೆಳೆಗಳಿಗೆ ನೀರಿಲ್ಲದೇ ಪರದಾಡುತ್ತಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಕ್ರಮವಾಗಿ ನೀರನ್ನು ಹರಿಸಿಕೊಳ್ಳಬಹುದಾದ ಶಂಕೆ ಹಿನ್ನೆಲೆ ಜಿಲ್ಲಾಡಳಿತ ತುಂಗಭದ್ರಾ ನಾಲೆಯ ವ್ಯಾಪ್ತಿಯಲ್ಲಿ 144 ಕಲಂ ಜಾರಿ ಮಾಡಿದ್ದು, ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿದೆ. 

click me!