14ರ ಬಾಲೆಗೆ RFO ಹುದ್ದೆ: ಕ್ಯಾನ್ಸರ್‌ ಪೀಡಿತ ಬಾಲಕಿ ಆಸೆ ಈಡೇರಿಸಿದ ಅರಣ್ಯ ಇಲಾಖೆ..!

By Girish Goudar  |  First Published Apr 29, 2022, 11:52 AM IST

*  ಇಂದು ವಿಶ್ವ ವಿಶ್ ಡೇ ವಿಶೇಷ
*  ಒಂದು ದಿನದ ಮಟ್ಟಿಗೆ ಆಕೆಯ ಆಸೆ ಈಡೇರಿಸಲು ಅವಕಾಶ ಕಲ್ಪಿಸುವಂತೆ ಕೇಳಿಕೊಂಡಿದ್ದ ಮೇಕ್ ವಿಶ್ವ ಸಂಸ್ಥೆ
*  ಐಶ್ವರ್ಯ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ 


ವರದಿ: ಮಧು. ಎಂ. ಚಿನಕುರಳಿ, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಮೈಸೂರು

ಮೈಸೂರು(ಏ.29):  ಇವತ್ತು ಒಂದು ಸರ್ಕಾರಿ ಕೆಲಸ(Government Job) ಪಡಿಬೇಕು ಅಂದ್ರೆ ಬಹಳ ಕಷ್ಟ ಇದೆ. ಕಷ್ಟಪಟ್ಟು ಸ್ಪರ್ಧಾತ್ಮಕ ಪರೀಕ್ಷೆ(Competitive Exnams) ಬರೆದರೂ ಭ್ರಷ್ಟಾಚಾರದಿಂದ ಆ ಕೆಲಸವೂ ಕೈ ತಪ್ಪುವ ಸಾಧ್ಯತೆಗಳಿರುತ್ತವೆ. ಅಂತಹದ್ದರಲ್ಲಿ ಎಸ್‌ಎಸ್‌ಎಲ್‌ಸಿಯನ್ನೇ(SSLC) ಪಾಸಾಗದ ಬಾಲೆಗೆ ಆರ್‌ಎಫ್ಒ ಹುದ್ದೆ ನೀಡಲಾಗಿದೆ. ಆಶ್ಚರ್ಯ ಎನಿಸಿದರೂ ಇದು ಸತ್ಯ. ಅದು ಎಲ್ಲಿ ಮತ್ತು ಹೇಗೆ ಅನ್ನೋದನ್ನು ಮುಂದೆ ಓದಿ.

Latest Videos

undefined

14ರ ಬಾಲೆಗೆ ವಲಯ ಅರಣ್ಯಾಧಿಕಾರಿ ಹುದ್ದೆ

ಇಂತಹ ಅಪರೂಪದ ಘಟನೆ ನಡೆದಿರೋದು ಕರ್ನಾಟಕ ರಾಜ್ಯದ ಹೆಸರಾಂತ ನಾಗರಹೊಳೆ ಅಭಯಾರಣ್ಯದಲ್ಲಿ(Nagarahole Tiger Reserve). ಮೂಳೆ ಕ್ಯಾನ್ಸರ್‌ಗೆ(Bone Cancer) ಒಳಗಾಗಿ ಬಳಲುತ್ತಿರುವ 14ರ ಬಾಲೆ ಒಂದು ದಿನದ ಮಟ್ಟಿಗೆ ಆರ್‌ಎಫ್ಒ(RFO) ಆಗಿ ಅಧಿಕಾರ ನಡೆಸಿದ್ದಾಳೆ. ಸದ್ಯ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ(Treatment) ಪಡೆಯುತ್ತಿರುವ ಮಂಡ್ಯ(Mandya) ಜಿಲ್ಲೆ ಬೇವಕಲ್ ಗ್ರಾಮದ ಐಶ್ವರ್ಯ ಈಗ ಆರ್‌ಎಫ್ಒ ಅಧಿಕಾರಿ.

Language War: ಕನ್ನಡ ಪ್ರಾದೇಶಿಕ ಭಾಷೆ, ಹಿಂದಿ ರಾಷ್ಟ್ರೀಯ ಭಾಷೆ: ನಿರಾಣಿ

ಸದ್ಯ ಏಳನೇ ತರಗತಿ ಓದುತ್ತಿರುವ ಐಶ್ವರ್ಯ(Aishwarya) ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಳೆ. ಆಕೆ ಚೆನ್ನಾಗಿ ಓದು ಅರಣ್ಯ ಅಧಿಕಾರಿ ಆಗಬೇಕು ಎಂಬ ಮಹದಾಸೆ‌. ಆದರೆ ಕ್ಯಾನ್ಸರ್‌ ಎಂಬ ಮಹಾಮಾರಿ ಆಕೆಯ ಆಸೆಗೆ ತಣ್ಣೀರು ಎರಚಿ ಬದುಕನ್ನೇ ಕಿತ್ತುಕೊಂಡಿದೆ. ಆದರೆ ಏನಂತೆ ನಿನ್ನೆ ನಾಗರಹೊಳೆ ಅಭಯಾರಣ್ಯದ ವಲಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕೆಲಸ ನಿರ್ವಹಿಸಿ ಖುಷಿ ಪಟ್ಟಿದ್ದಾಳೆ.

ಇಂದು ವಿಶ್ವ ವಿಶ್ ಡೇ ವಿಶೇಷ

ಅಷ್ಟಕ್ಕೂ ಇಂದು ವಿಶ್ವವಿಶ್ ಡೇ. ಜಗತ್ತಿನಾದ್ಯಂತ ಜನರಿಗೆ ಅವರ ಆಸೆಗಳು ಈಡೇರುವಂತೆ ಗೆಳೆಯ ಗೆಳತಿಯರು ಹಾಗೂ ಹಿರಿಯರು ವಿಶ್ ಮಾಡುವ ದಿನ. ಈಗಾಗಿ ಐಶ್ವರ್ಯ ಆಸೆಯನ್ನು ಮೇಕ್ ವಿಶ್ವ ಸಂಸ್ಥೆ ಈಡೇರುವಂತೆ ಮಾಡಿದೆ.
ಐಶ್ವರ್ಯ ಆಸೆ ಕುರಿತು ಬೆಂಗಳೂರಿನ ಮೇಕ್ ವಿಶ್ವ ಸಂಸ್ಥೆ ನಾಲ್ಕು ತಿಂಗಳ ಹಿಂದೆ ಅರಣ್ಯ ಇಲಾಖೆ ಗಮನ ಸೆಳೆದಿತ್ತು. ಒಂದು ದಿನದ ಮಟ್ಟಿಗೆ ಆಕೆಯ ಆಸೆ ಈಡೇರಿಸಲು ಅವಕಾಶ ಕಲ್ಪಿಸುವಂತೆ ಕೇಳಿಕೊಂಡಿತ್ತು. ಅಂತಿಮವಾಗಿ ಐಶ್ವರ್ಯ ಆಸೆ ನೆರವೇರಿದೆ. ನಾರಗಹೊಳೆ ಅಭಯಾರಣ್ಯದ ವಲಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಹಿರಿಯ ಅಧಿಕಾರಿಗಳಿಂದ ಗೌರವ ಪಡೆದಿದ್ದಾಳೆ. ಐಶ್ವರ್ಯ ಮನವಿಗೆ ಸ್ಪಂದಿಸಿ ವಲಯ ಅರಣ್ಯಾಧಿಕಾರಿ ಹುದ್ದೆ ಸ್ವೀಕರಿಸಿರುವ ಐಶ್ವರ್ಯ ಅಧಿಕಾರ ಇಂದು(ಶುಕ್ರವಾರ) ಅಂತ್ಯವಾಗಲಿದೆ.
 

click me!