ರಾಜ್ಯದ 14 ಪೊಲೀಸ್ ತರಬೇತಿ ಶಾಲೆಗಳ ಮೇಲ್ದರ್ಜೆ: ಬೊಮ್ಮಾಯಿ

By Web Desk  |  First Published Sep 23, 2019, 12:52 PM IST

ಕಲಬುರಗಿ ಸೇರಿದಂತೆ ರಾಜ್ಯದ 14 ಪೊಲೀಸ್ ತರಬೇತಿ ಶಾಲೆಗಳ ಮೇಲ್ದರ್ಜೆ| ಆರಂಭದಲ್ಲಿ ಮೈಸೂರು ಪಿಟಿಸಿಯನ್ನು ಸೆಂಟರ್ ಆಪ್ ಎಕ್ಸಿಲೆನ್ಸ್ ಮಾಡಲಾಗುವುದು|  ತದನಂತರ ಉಳಿದ ಶಾಲೆಗಳು ಹಂತ ಹಂತವಾಗಿ ಉನ್ನತಿಕರಣ ಮಾಡಲಾಗುವುದು| ಮುಂದಿನ ಎರಡು ವರ್ಷದಲ್ಲಿ 16 ಸಾವಿರ ಪೊಲೀಸ್ ಪೇದೆ, 600ಕ್ಕೂ ಹೆಚ್ಚು ಪಿ.ಎಸ್.ಐ.ನೇಮಕ ಮಾಡಿಕೊಳ್ಳಲಾಗುವುದು| 


ಕಲಬುರಗಿ: (ಸೆ.23)  ಕಲಬುರಗಿ ಸೇರಿದಂತೆ ರಾಜ್ಯದ ಹದಿನಾಲ್ಕು ಪೊಲೀಸ್ ತರಬೇತಿ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಆರಂಭದಲ್ಲಿ ಮೈಸೂರು ಪಿಟಿಸಿಯನ್ನು ಸೆಂಟರ್ ಆಪ್ ಎಕ್ಸಿಲೆನ್ಸ್ ಮಾಡಲಾಗುವುದು.ತದನಂತರ ಉಳಿದ ಶಾಲೆಗಳು ಹಂತ ಹಂತವಾಗಿ ಉನ್ನತಿಕರಣ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. 


ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ಪಿಎಸ್ಐ, ಆರ್.ಎಸ್.ಐ  ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಪರೆಡ್ ವೀಕ್ಷಿಸಿ ಪ್ರಶಿಕ್ಷಣಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು.

Latest Videos

undefined


ಬಳಿಕ ಮಾತನಾಡಿದ ಅವರು, ಇತ್ತೀಚಿಗೆ ಸೈಬರ್ ಕ್ರೈಂ ಹೆಚ್ಚುತ್ತಿರುವುದರಿಂದ ತರಬೇತಿ ಅವಧಿಯಲ್ಲಿ ಪೊಲೀಸರಿಗೆ ಇ-ಲರ್ನಿಂಗ್, ಇ- ಪೊಲೀಸಿಂಗ್  ಕುರಿತು ತರಬೇತಿ ನೀಡಲಾಗುವುದು. ಫಾರೆಂಸಿಕ್ , ಭದ್ರತೆ, ಸಂಚಾರ ನಿರ್ವಹಣೆಯಲ್ಲಿ ವೃತ್ತಿಪರತೆ ಹೆಚ್ಚಿಸಲು ರಾಜ್ಯದ ಪೊಲೀಸರಿಗೆ ಅಮೆರಿಕ, ಸ್ಕಾಟ್ಲ್ಯಾಂಡ್ ಸೇರಿದಂತೆ ವಿದೇಶದಲ್ಲಿ ತರಬೇತಿ ನೀಡಲಾಗುವುದು ಎಂದು ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮುಂದಿನ ಎರಡು ವರ್ಷದಲ್ಲಿ 16 ಸಾವಿರ ಪೊಲೀಸ್ ಪೇದೆ, 600ಕ್ಕೂ ಹೆಚ್ಚು ಪಿ.ಎಸ್.ಐ.ನೇಮಕ ಮಾಡಿಕೊಳ್ಳಲಾಗುವುದು. ಪೊಲೀಸರಿಗೆ ಶಿಸ್ತು ತಾಯಿ, ನ್ಯಾಯ ತಂದೆ ಇದ್ದಂತೆ. ಇದನ್ನು ಪೊಲೀಸರು ಮೈಗೂಡಿಸಿಕೊಂಡಲ್ಲಿ ಕರ್ತವ್ಯ ನಿರ್ವಹಣೆ ಸಲಿಸವಾಗಲಿದೆ. ಅಪರಾಧ ಪ್ರಕರಣಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಶೀಘ್ರವಾಗಿ ನೊಂದವರಿಗೆ ನ್ಯಾಯ ದೊರಕಿಸಲಾಗುವುದು ಎಂದು ತಿಳಿಸಿದರು. 

click me!