ಒಂದೇ ಕುಟುಂಬದ 14 ಜನರಿಗೆ ಕೊರೋನಾ ಪಾಸಿಟಿವ್/ ಭಾವನಸೌಂಧತ್ತಿ ಗ್ರಾಮದ 14 ಜನರಲ್ಲಿ ಕೊರೋನಾ ಪಾಸಿಟಿವ್ / ನಿನ್ನೆ 7 ಜನರಲ್ಲಿ ಕೊರೋನಾ ಪಾಸಿಟವ್ ಬಂದ ಹಿನ್ನೆಲೆ/ ಗ್ರಾಮದ 353 ಜನರಿಗೆ ಕೊರೋನಾ ಟೆಸ್ಟ್ ನಡೆಸಲಾಗಿತ್ತು/ ಅವಿಭಕ್ತ ಕುಟುಂಬದ 47 ಜನರಲ್ಲಿ 21 ಜನರಲ್ಲಿ ಕೊರೋನಾ ಪಾಸಿಟಿವ್
ಚಿಕ್ಕೋಡಿ(ಮಾ. 14) ಒಂದೇ ಕುಟುಂಬದ 14 ಜನರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ. ಭಾವನಸೌಂಧತ್ತಿ ಗ್ರಾಮದ 14 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ.
ಶನಿವಾರ 7 ಜನರಲ್ಲಿ ಕೊರೋನಾ ಪಾಸಿಟವ್ ಬಂದ ಹಿನ್ನೆಲೆಯಲ್ಲಿ ಗ್ರಾಮದ 353 ಜನರಿಗೆ ಕೊರೋನಾ ಟೆಸ್ಟ್ ನಡೆಸಲಾಗಿತ್ತು. ಅವಿಭಕ್ತ ಕುಟುಂಬದ 47 ಜನರಲ್ಲಿ 21 ಜನರಲ್ಲಿ ಕೊರೋನಾ ಪಾಸಿಟಿವ್ ಬಂದ ಹಾಗೆ ಆಗಿದೆ. ವ್ಯಕ್ತಿಯೊಬ್ಬರು ವಯೋಸಹಜ ಕಾಯಿಲೆಗೆ ತುತ್ತಾಗಿದ್ದರು. ಈ ಕಾರಣದಿಂದ ಮನೆ ಮಂದಿಗೆ ಕೊರೋನಾ ಟೆಸ್ಟ್ ನಡೆಸಲಾಗಿತ್ತು.
ಕರ್ನಾಟಕದಲ್ಲಿ ಮತ್ತೆ ಕೊರೋನಾ ಅಬ್ಬರ; ಎಚ್ಚರಿಕೆ ಕ್ರಮ ಏನು?
ಮಹಾರಾಷ್ಟ್ರಕ್ಕೆ ಸಂಬಂಧಿಗಳ ಮನೆಗೆ ಕುಟುಂಬದ ಸದಸ್ಯರು ಹೋಗಿ ಬಂದಿದ್ದರು. ಮಹಾರಾಷ್ಟ್ರ ನಂಟಿನಿಂದ ಕೊರೋನಾ ಹರಡುತ್ತಿದೆ. ಕೊರೋನಾ ಪಾಸಿಟವ್ ಪ್ರಕರಣಗಳು ಈ ಸಂಖ್ಯೆಯಲ್ಲಿ ಕಾಣಿಸಿಕೊಂಡ ಕಾರಣ ಭಾವನಸೌದತ್ತಿ ಗ್ರಾಮದ ಸಂತೆ ರದ್ದು ಮಾಡಲಾಗಿದೆ.