ಮಂಗಳೂರು ಬಂದರಿಗೆ ಪ್ರವಾಸಿ ನೌಕೆ, ಕೊರೋನಾ ಭೀತಿ

Kannadaprabha News   | Asianet News
Published : Feb 19, 2020, 02:46 PM IST
ಮಂಗಳೂರು ಬಂದರಿಗೆ ಪ್ರವಾಸಿ ನೌಕೆ, ಕೊರೋನಾ ಭೀತಿ

ಸಾರಾಂಶ

ಮಂಗಳೂರಿನ ಬಂದರಿಗೆ 13ನೇ ವಿಲಾಸಿ ಹಡಗು ಮಂಗಳವಾರ ಎನ್‌ಎಂಪಿಟಿಗೆ ಆಗಮಿಸಿದ್ದು ಇದೀಗ ಮತ್ತೊಮ್ಮೆ ಕೊರೋನಾ ಭೀತಿ ಆವರಿಸಿದೆ. ಸೋಂಕಿತರು ಹಡಗಿನಲ್ಲಿದ್ದರೆ ಎಂಬ ಆತಂಕ ಸ್ಥಳೀಯರನ್ನು ಕಾಡುತ್ತಿದೆ.  

ಮಂಗಳೂರು(ಫೆ.19): ಈ ಪ್ರವಾಸಿ ಋುತುಮಾನದ 13ನೇ ವಿಲಾಸಿ ಹಡಗು ಮಂಗಳವಾರ ಎನ್‌ಎಂಪಿಟಿಗೆ ಆಗಮಿಸಿದ್ದು, ವಿದೇಶಿ ಪ್ರವಾಸಿಗರು ನಗರದ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಕೊರೋನಾ ವೈರಸ್‌ ಆತಂಕದ ಹಿನ್ನೆಲೆಯಲ್ಲಿ ಎಲ್ಲ ಪ್ರವಾಸಿಗರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಯಾರಲ್ಲೂ ಕೊರೋನಾ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈನಿಂದ ಹೊರಟಿದ್ದ ‘ಕೋಸ್ಟಾವಿಕ್ಟೋರಿಯಾ’ ಹೆಸರಿನ ಈ ಹಡಗು ಮಂಗಳವಾರ ಬೆಳಗ್ಗೆ 7 ಗಂಟೆಗೆ ಎನ್‌ಎಂಪಿಟಿಗೆ ಆಗಮಿಸಿತ್ತು. ಅದರಲ್ಲಿ 1800 ಪ್ರಯಾಣಿಕರು ಮತ್ತು 800 ಸಿಬ್ಬಂದಿಗಳಿದ್ದರು. ಕೊರೋನಾ ತಪಾಸಣೆ ಬಳಿಕ ಅವರನ್ನು ನಗರ ವೀಕ್ಷಣೆಗೆ ತೆರಳಲು ಅವಕಾಶ ಮಾಡಿಕೊಡಲಾಯಿತು.

ಮಂಗಳೂರು ಬಂದರಿಗೆ ಬಂತು ಐಷಾರಾಮಿ ಪ್ರವಾಸಿ ನೌಕೆ..!

ಕಳೆದ ಬಾರಿ ವಿಲಾಸಿ ಹಡಗು ಆಗಮಿಸಿದಾಗ ಮೂವರು ಚೀನೀ ಪ್ರಜೆಗಳಿದ್ದು, ಅವರನ್ನು ಹಡಗಿನಿಂದ ಕೆಳಗಿಳಿಯಲು ಅವಕಾಶ ನಿರಾಕರಿಸಲಾಗಿತ್ತು. ಆದರೆ ಈ ಬಾರಿಯ ಹಡಗಿನಲ್ಲಿ ಚೀನೀ ಪ್ರಜೆಗಳು ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
click me!

Recommended Stories

ಅಡಿಕೆ ತೋಟದ ದುರಂತ: ಗೊನೆ ಕೊಯ್ಯುವಾಗ ಆಯತಪ್ಪಿ ಬಿದ್ದ ಕಾರ್ಮಿಕ ಸಾವು
'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!