KSRTC: ಡಿಪೋಗೆ 5 ತಾಸು ತಡ​ವಾಗಿ ಬಂದ ಬಸ್‌: ಡ್ರೈವರ್‌ಗೆ 12,300 ದಂಡ..!

By Kannadaprabha News  |  First Published Mar 3, 2022, 6:51 AM IST

*  ದಂಡ ಕಟ್ಟುವಂತೆ ಚಾಲ​ಕಗೆ ನೋಟಿಸ್‌
*  10 ದಿನಗಳಾದರೂ ಯಾವುದೇ ಉತ್ತರ ಕೊಡದಿದ್ದರಿಂದ ದಂಡ
*  5-6 ತಾಸು ತಡವಾಗಿ ಬಂದ ಕಾರಣ ಸಂಸ್ಥೆಗೆ ನಷ್ಟ 


ಚಾಮರಾಜನಗರ(ಮಾ.03): ಪ್ರವಾಸಕ್ಕೆ ತೆರಳಿದ ಚಾಮರಾಜನಗರ(Chamarajanagar) ಡಿಪೋ ವ್ಯಾಪ್ತಿಯ ಬಸ್ಸೊಂದು ಬರಲು 5 ತಾಸು ತಡವಾಗಿದ್ದಕ್ಕೆ 12,300 ದಂಡ ಕಟ್ಟುವಂತೆ ಚಾಲ​ಕಗೆ(Driver) ನೋಟಿಸ್‌ ನೀಡಿರುವುದು ಬೆಳಕಿಗೆ ಬಂದಿದೆ. ಚಾಲಕ ದುರ್ಗಾದಾಸ್‌ ಎಂಬವರಿಗೆ ಡಿಪೋ ಮ್ಯಾನೇಜರ್‌ ಕುಮಾರ್‌ ನಾಯ್ಕ್ ನೋಟಿಸ್‌ ಕೊಟ್ಟಿದ್ದಾರೆ. ಫೆ.20ರಂದು ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದ ನಾಗೇಂದ್ರಸ್ವಾಮಿ ಎಂಬುವರು ಬಣ್ಣಾರಿ, ಕೊಯಮತ್ತೂರು, ಈಶ ಧ್ಯಾನಕೇಂದ್ರಕ್ಕೆಂದು ಬಸ್‌ ಬುಕ್‌ ಮಾಡಿ​ದ್ದ​ರು.

ಚಾಲಕ ದುರ್ಗಾದಾಸ್‌ ಒಪ್ಪಂದದ ಕರ್ತವ್ಯ ಮುಗಿಸಿ ಡಿಪೋಗೆ ಹಿಂತಿರುಗಲು 5 ತಾಸು ತಡವಾದದ್ದರಿಂದ ದಂಡ ಕಟ್ಟುವಂತೆ ನೋಟಿಸ್‌ ಕೊಡಲಾಗಿದೆ. ಬಣ್ಣಾರಿ-ದಿಂಬಂ ಘಟ್ಟಪ್ರದೇಶದಲ್ಲಿ ಲಾರಿಯೊಂದು ಪಲ್ಟಿಯಾಗಿತ್ತು. ಈ ಹಿನ್ನೆಲೆ ವಾಪಸ್‌ ಬರಲು ತಡವಾಗಿದೆ ಎನ್ನಲಾ​ಗಿ​ದೆ.

Tap to resize

Latest Videos

undefined

Price Hike and Corona: 2900 ಕೋಟಿ ನಷ್ಟದಲ್ಲಿ ಕೆಎಸ್‌ಆರ್‌ಟಿಸಿ.. ಕೊರೋನಾ ಒಂದೇ ಅಲ್ಲ ಕಾರಣ

ಆದರೆ, ಡಿಪೋಗೆ ತಡವಾಗಿ ಬಂದಿರುವುದಕ್ಕೆ ಕಾರಣದ ಸಮಜಾಯಿಷಿ ಕೇಳಿ ಸಕಾರಣದ ವರದಿ ಕೊಡುವಂತೆ ಹೇಳಲಾಗಿತ್ತು. 10 ದಿನಗಳಾದರೂ ಯಾವುದೇ ಉತ್ತರ ಕೊಡದಿದ್ದರಿಂದ ದಂಡ(Fine) ಕಟ್ಟುವಂತೆ ಸೂಚಿಸಲಾಗಿದೆ. 5-6 ತಾಸು ತಡವಾಗಿ ಬಂದ ಕಾರಣ ಸಂಸ್ಥೆಗೆ ನಷ್ಟ ಸಂಭವಿಸಿದ್ದು, ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಮ್ಯಾನೇ​ಜರ್‌ ಕುಮಾರ್‌ ನಾಯ್ಕ್‌ ಸ್ಪಷ್ಟನೆ ನೀಡಿ​ದ್ದಾ​ರೆ.

'ಎತ್ತಿನ ಗಾಡಿಯಂತೆ' ಬಸ್‌ ಓಡಿಸಿದ BMTC ಡ್ರೈವರ್‌ಗೆ ಎಚ್ಚರಿಕೆ..!

ಬೆಂಗಳೂರು: ವಾಹನವನ್ನು ನಿಧಾನವಾಗಿ ಚಾಲನೆ ಮಾಡಿರುವುದು ಮತ್ತು ನಿಗದಿತ ಅವಧಿಗಿಂತ ಮುಂಚಿತವಾಗಿ ಡಿಪೋಗೆ ಆಗಮಿಸಿ ನಿಗಮಕ್ಕೆ ನಷ್ಟ ಉಂಟು ಮಾಡಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಬಿಎಂಟಿಸಿ(BMTC) ಚಾಲಕರಿಗೆ(Drivers) ತಿಳುವಳಿಕೆ ಮತ್ತು ಪಾಲನಾ ಪತ್ರಗಳನ್ನು ನೀಡುವ ಮೂಲಕ ಎಚ್ಚರಿಕೆ ನೀಡಲಾಗಿದೆ.

ಬಿಎಂಟಿಸಿ ಬಸ್‌ ಮಾರ್ಗಸಂಖ್ಯೆ ‘410ಕೆ’ ಎತ್ತಿನಗಾಡಿಯ ರೀತಿಯಲ್ಲಿ ತುಂಬಾ ವಿಳಂಬವಾಗಿ ಚಾಲನೆ ಮಾಡಿದ್ದರಿಂದ ಕೆಲಸಕ್ಕೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗಿಲ್ಲವೆಂದು ಪ್ರಯಾಣಿಕರೊಬ್ಬರು(Passengers) ನಿಗಮಕ್ಕೆ ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ಮುಂದೆ ಈ ರೀತಿ ಆಗದಂತೆ ಎಚ್ಚರವಹಿಸಲು ಚಾಲಕರಿಗೆ ನಿಗಮವು ತಿಳುವಳಿಕೆ ಪತ್ರ ನೀಡಿದೆ.

BMTC 15 ದಿನದಲ್ಲಿ ಬಿಎಂಟಿಸಿ ಬಸ್‌ನಲ್ಲಿ 3 ಅಗ್ನಿ ದುರುಂತ, ಇದಕ್ಕೆ ಕಾರಣಗಳೇನು?

ಮತ್ತೊಂದು ಪ್ರಕರಣದಲ್ಲಿ ಮಾರ್ಗ ಸಂಖ್ಯೆ ‘25ಬಿ’ಯಲ್ಲಿ ಕರ್ತವ್ಯ ನಿರ್ವಹಿಸಿ ಹಿಂತಿರುಗುವಾಗ ಜಯನಗರಕ್ಕೆ 30 ನಿಮಿಷ ಮುಂಚಿತವಾಗಿ ಬಂದು ಕಾಲಹರಣ ಮಾಡಿ ಸಾರಿಗೆ ಆದಾಯ(Transportation Revenue) ತಪ್ಪಿಸಿದ್ದೀರಿ. ನಿಗದಿತ ಆದಾಯ 3 ಸಾವಿರ ಇದರ ಬದಲು 2,740 ಮಾತ್ರ ಬಂದಿದೆ. ಕೊನೆಯ ಸುತ್ತುವಳಿಯಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳದೇ ಖಾಲಿ ಸುತ್ತುವಳಿಯ ಕಾರ್ಯಚರಣೆ ಮಾಡಿರುತ್ತೀರಿ. ಇದರಿಂದ ಸಂಸ್ಥೆಯ ಆದಾಯಕ್ಕೆ ನಷ್ಟವಾಗಿದೆ. ಆ ಮೂಲಕ ನಿಗಮದ ನಿಯಮಗಳನ್ನು ಉಲ್ಲಂಘಿಸಿದ್ದೀರಿ ಎಂದು ಆರೋಪಿಸಿ ಅಪಾದನಾ ಪತ್ರ ನೀಡಿ ನಿಗಮ ಎಚ್ಚರಿಸಿದೆ.

ಬಿಎಂಟಿಸಿ ಪಾಲಿಗೆ ಬಿಳಿಯಾನೆಯಾದ ಎಲೆಕ್ಟ್ರಿಕ್‌ ಬಸ್‌!

ಕೊರೋನಾ(Coronavirus) ಲಾಕ್‌ಡೌನ್‌ನಿಂದ(Lockdown) ನಷ್ಟಕ್ಕೆ ಸಿಲುಕಿ ಸಿಬ್ಬಂದಿಗೆ ವೇತನ ಪಾವತಿಗೂ ಸರ್ಕಾರದ ಮೊರೆ ಹೋಗಿದ್ದ ಬಿಎಂಟಿಸಿಗೆ ನೂತನವಾಗಿ ಆಗಮಿಸಿರುವ ಎಲೆಕ್ಟ್ರಿಕ್‌ ಬಸ್‌ಗಳು ಬಿಳಿಯಾನೆಯಾಗಿ ಪರಿಣಮಿಸಿದೆ.

ನಗರದಲ್ಲಿ ಪರಿಸರ ಮಾಲಿನ್ಯ ನಿಯಂತ್ರಿಸುವ ಸಲುವಾಗಿ ನ್ಯಾಷನಲ್‌ ಥರ್ಮಲ್‌ ಪವರ್‌ ಕಾರ್ಪೋರೇಷನ್‌(NTPCL)ನಿಂದ 90 ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಂಡಿದೆ. ಆದರೆ, ಈ ಬಸ್‌ಗಳ ಚಾರ್ಜಿಂಗ್‌ ಮಾಡುವುದಕ್ಕಾಗಿ ನಗರದಲ್ಲಿ ಸೂಕ್ತ ಸೌಲಭ್ಯಗಳಿಲ್ಲ. ಪರಿಣಾಮ ಬಸ್‌ಗಳು ಸಂಚರಿಸದಿದ್ದರೂ ಒಪ್ಪಂದದಂತೆ ನಿಗದಿತ ಮೊತ್ತ ಪಾವತಿ ಮಾಡಬೇಕಾಗಿದೆ. ಇದು ಬಿಎಂಟಿಸಿಗೆ ನಷ್ಟದ ಬಾಬ್ತು ಆಗಿದೆ.
 

click me!