* ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನಲ್ಲಿರವ ಆಲಮಟ್ಟಿ ಡ್ಯಾಂ
* ಜಲಾಶಯದ ಒಳಹರಿವು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ
* ನಿತ್ಯ 290 ಮೆಗಾವಾಟ್ ವಿದ್ಯುತ್ ಉತ್ಪಾದನೆ
ಆಲಮಟ್ಟಿ(ಸೆ.15): ದ ಹರಿದು ಬರುವ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಜಲಾಶಯದ ಎಲ್ಲಾ 26 ಗೇಟ್‌ಗಳ ಮೂಲಕ ನೀರನ್ನು ನದಿ ತಳಪಾತ್ರಕ್ಕೆ ಹರಿಸಲಾಗುತ್ತಿದೆ.
ಗೇಟ್‌ಗಳ ಮೂಲಕ 80,000 ಕ್ಯುಸೆಕ್ ಹಾಗೂ ಕೆಪಿಸಿಎಲ್ ಮೂಲಕ 40,000 ಕ್ಯುಸೆಕ್ ಸೇರಿ ಒಟ್ಟಾರೆ 1,20,000 ಕ್ಯುಸೆಕ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ. ಇದು ತಾತ್ಕಾಲಿಕವಾಗಿದ್ದು, ಒಂದೆರಡು ದಿನಗಳಲ್ಲಿ ಕಡಿಮೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಜಲಾಶಯದ ಒಳಹರಿವು 89,000 ಕ್ಯುಸೆಕ್ ಇದ್ದು, ಜಲಾಶಯದ ಮಟ್ಟ 519.50 ಮೀ. ಇದೆ.
undefined
ವರುಣನ ಅಬ್ಬರ: ಆಲಮಟ್ಟಿ ಡ್ಯಾಂನಿಂದ 2.50 ಲಕ್ಷ ಕ್ಯುಸೆಕ್ ನೀರು ಬಿಡುಗಡೆ
ಬುಧವಾರ ಜಲಾಶಯದ ಒಳಹರಿವು ಇನ್ನಷ್ಟು ಹೆಚ್ಚಳವಾಗಲಿದೆ ಎಂದು ಮೂಲಗಳು ತಿಳಿಸಿವೆ. ಕೊಯ್ನಾದಲ್ಲಿ 10.7 ಸೆಂ.ಮೀ, ನವಜಾದಲ್ಲಿ 13.9 ಸೆಂ.ಮೀ, ಮಹಾಬಳೇಶ್ವರದಲ್ಲಿ 12.1 ಸೆಂ.ಮೀ, ರಾಧಾನಗರಿಯಲ್ಲಿ 17.7 ಸೆಂ.ಮೀ ಮಳೆಯಾಗಿದೆ. ಬೆಳಗ್ಗೆ ರಾಜಾಪುರ ಬ್ಯಾರೇಜ್ ಬಳಿ ಕೃಷ್ಣೆಯ ಹರಿವು 65,750 ಕ್ಯುಸೆಕ್ ಇತ್ತು. ಜಲಾಶಯದ ಬಲಭಾಗದ ವಿದ್ಯುತ್ ಉತ್ಪಾದನಾ ಘಟಕವೂ ಗರಿಷ್ಠ ಮಟ್ಟದ ವಿದ್ಯುತ್ ಉತ್ಪಾದಿಸುತ್ತಿದ್ದು, ನಿತ್ಯ 290 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಕೆಲ ದಿನಗಳ ಹಿಂದೆ ಅಬ್ಬರಿಸಿದ್ದ ಕೃಷ್ಣೆಯ ನೀರಿನ ಬಣ್ಣ ಕೆಂಪು ವರ್ಣವಿತ್ತು. ಆದರೆ ಸದ್ಯ ನೀರಿನ ವರ್ಣ ಹಾಲ್ನೊರೆ ಬಣ್ಣವಿದ್ದು, ಜಲಾಶಯದ ಎಲ್ಲಾ 26 ಗೇಟ್‌ಗಳ ಮೂಲಕ ನೀರು ಬೀಳುವ ದೃಶ್ಯ ರಮಣೀಯವಾಗಿದೆ.