
ಬೆಳಗಾವಿ (ಸೆ.27): ಮಾದಕ ವಸ್ತುಗಳ ದಂಧೆ ವಿರುದ್ಧ ಕಾರಾರಯಚರಣೆ ಮುಂದುವರಿಸಿರುವ ಪೊಲೀಸರು, ಬೆಳಗಾವಿಯಲ್ಲಿ ಭರ್ಜರಿ ಭೇಟೆಯಾಡಿರುವ ಪೊಲೀಸರು ಬರೋಬ್ಬರಿ 20 ಲಕ್ಷ ಮೌಲ್ಯದ 120 ಕೆ.ಜಿ ಗಾಂಜಾ ವಶಪಡಿಸಿಕೊಂಡು, ದಂಧೆಯಲ್ಲಿ ತೊಡಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಈ ಮೂಲಕ ರಾಜ್ಯಾದ್ಯಂತ ಕಳೆದು ಒಂದು ತಿಂಗಳಿಂದ 3382 ಕೆ.ಜಿಗೂ ಹೆಚ್ಚು ಗಾಂಜಾ ಜಪ್ತಿ ಮಾಡಿ, ಪೊಲೀಸರು 335 ಮಂದಿ ಬಂಧಿಸಿ, 144 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಮಹಾರಾಷ್ಟ್ರದ ಮೀರಜ್ ಮಾಳಿ ಗಲ್ಲಿ ಆಶ್ಬಾಕ್ ಮೈನುದ್ದಿನ ಮುಲ್ಲಾ ಬಂಧಿತ ಆರೋಪಿ. ಸೆ.22ರಂದು ಗಾಂಜಾ ಮಾರಾಟ ಪ್ರಕರಣದಲ್ಲಿ ಬಂಧಿತನಾಗಿದ್ದ ಮೀರಜನ ವಶೀಮ್ ಶೇಖ ಎಂಬಾತನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದರು.
ಡ್ರಗ್ಸ್ ಮಾಫಿಯಾ: ಫ್ಯಾಷನ್ ಸ್ಟಾರ್ ರಮೇಶ್‌ಗೆ ಬೆವರಿಳಿಸಿದ ಸಿಸಿಬಿ .
ಆಗ ಆತ ಆಶ್ಬಾಕ್‌ನ ದಂಧೆಯ ಕುರಿತು ಮಾಹಿತಿ ನೀಡಿದ್ದ. ಈ ಮಾಹಿತಿ ಮೇರೆಗೆ ಪ್ರಮುಖ ಆರೋಪಿಯ ಬಂಧನಕ್ಕೆ ಖೆಡ್ಡಾ ತೋಡಿದ್ದ ಬೆಳಗಾವಿ ಜಿಲ್ಲಾ ಪೊಲೀಸರು, ಮಹಾರಾಷ್ಟ್ರದ ಮೀರಜ್ ತಾಲೂಕಿನ ಮೈಶಾಲ್ ಗ್ರಾಮದ ಬಳಿ ಆರೋಪಿ ಬಂಧಿಸಿದ ಡಿಸಿಐಬಿ ತಂಡ, ಆರೋಪಿಯಿಂದ 24 ಲಕ್ಷ ರು. ಮೌಲ್ಯದ 2 ಕೆಜಿ ತೂಕದ 60 ಗಾಂಜಾ ಪಾಕೆಟ್, ಕಾರು, ದ್ವಿಚಕ್ರ ವಾಹನ ಸೇರಿದಂತೆ ಒಟ್ಟು 28.5 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದೆ.
ತೆಲಂಗಾಣದ ವಾರಂಗಲ್ ಮತ್ತು ಹೈದರಾಬಾದ್‌ನಿಂದ ಗಾಂಜಾ ಖರೀದಿಸಿ ಈತ ಮಹಾರಾಷ್ಟ್ರ, ಬೆಳಗಾವಿ, ಧಾರವಾಡಕ್ಕೆ ಪೂರೈಸುತ್ತಿದ್ದ ಎನ್ನಲಾಗಿದೆ. ಆರೋಪಿ ಆಶ್ಬಾಕ್‌ಗೆ ಗಾಂಜಾ ಪೂರೈಸುತ್ತಿದ್ದ ತೆಲಂಗಾಣದ ಇಬ್ಬರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.