ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಸಂಸ್ಥೆಯು ದಾವಣಗೆರೆಯ ಹರಿಹರದಲ್ಲಿ 60 ಕೆಎಲ್‌ಪಿಡಿ ಎಜಿ ಎಥೆನಾಲ್ ಸ್ಥಾವರ ಸ್ಥಾಪಿಸಲು ಯೋಜಿಸಿದೆ. ಈ ಸ್ಥಾವರದಲ್ಲಿ ಸಸ್ಯದಿಂದ ಉತ್ಪತ್ತಿಯಾಗುವ ಎಥೆನಾಲ್‌ನ್ನು ಪೆಟ್ರೋಲ್‌ನೊಂದಿಗೆ ಬೆರೆಸಲಾಗುತ್ತದೆ.
ಮಂಗಳೂರು (ಸೆ.27): ಇಂಧನ ಸುರಕ್ಷತೆ ಮತ್ತು ಹಸಿರು ಇಂಧನಗಳ ಉತ್ತೇಜನ ಉದ್ದೇಶದಿಂದ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಸಂಸ್ಥೆಯು ದಾವಣಗೆರೆಯ ಹರಿಹರದಲ್ಲಿ 60 ಕೆಎಲ್‌ಪಿಡಿ ಎಜಿ ಎಥೆನಾಲ್ ಸ್ಥಾವರ ಸ್ಥಾಪಿಸಲು ಯೋಜಿಸಿದೆ. ಈ ಸ್ಥಾವರದಲ್ಲಿ ಸಸ್ಯದಿಂದ ಉತ್ಪತ್ತಿಯಾಗುವ ಎಥೆನಾಲ್‌ನ್ನು ಪೆಟ್ರೋಲ್‌ನೊಂದಿಗೆ ಬೆರೆಸಲಾಗುತ್ತದೆ.
ಯೋಜನೆಗಾಗಿ ಭೂಮಿಯನ್ನು ಕೆಐಎಡಿಬಿಯಿಂದ ಖರೀದಿಸಲಾಗಿದೆ. ಎಂಜಿನಿಯರಿಂಗ್ ಪ್ಯಾಕೇಜ್ ಸಿದ್ಧಪಡಿಸಲಾಗುತ್ತಿದೆ. ಪ್ರಸ್ತುತ ಪ್ರಗತಿಯ ಆಧಾರದ ಮೇಲೆ ಸ್ಥಾವರವು ಮಾರ್ಚ್ 2024ರಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.
ಕೋವಿಡ್ ಪೂರ್ವ ಅವಧಿಗಿಂತ ಹೆಚ್ಚು ಪೆಟ್ರೋಲ್ ಮಾರಾಟ: ಆರ್ಥಿಕತೆ ಚೇತರಿಕೆ ...
ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯೊಂದಿಗೆ ಭಾರತದ ಸರ್ಕಾರವು ದೇಶದ ಇಂಧನ ಸುರಕ್ಷತೆಯನ್ನು ಸಾಧಿಸಲು ಒತ್ತು ನೀಡುತ್ತಿದೆ. ಅಂದರೆ 2022ರ ವೇಳೆಗೆ ಬಯೋ ಇಂಧನಗಳ ಬಳಕೆಯನ್ನು ಶೇ.10ರಷ್ಟುಹೆಚ್ಚಿಸುವ ಉದ್ದೇಶವಿದೆ.
2018ರಲ್ಲಿ ಘೋಷಿಸಲಾದ ಜೈವಿಕ ಇಂಧನಗಳ ರಾಷ್ಟ್ರೀಯ ನೀತಿಯಂತೆ 2030ರ ವೇಳೆಗೆ ಪೆಟ್ರೋಲ್‌ನಲ್ಲಿ ಶೇ.20ರಷ್ಟುಮತ್ತು ಡೀಸೆಲ್‌ನಲ್ಲಿ ಶೇ.5ರಂದು ಜೈವಿಕ ಇಂಧನ ಮಿಶ್ರಣವನ್ನು ಸಾಧಿಸುವ ಗುರಿ ಹಾಕಿಕೊಳ್ಳಲಾಗಿದೆ. ಪೆಟ್ರೋಲ್‌ನಲ್ಲಿ 2ಜಿ ಎಥೆನಾಲ್ ಬಳಕೆಯು ರೈತರ ಆದಾಯ ಹೆಚ್ಚಿಸುವುದಲ್ಲದೆ, ಅಪಾಯಕಾರಿ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಎಂಆರ್‌ಪಿಎಲ್ ಪ್ರಕಟಣೆ ತಿಳಿಸಿದೆ.