ಇಂದು ಸಾವಿನ ಶನಿವಾರ ಅಂತಾನೇ ಹೇಳಬಹುದು. ಯಾಕಂದ್ರೆ ರಾಜ್ಯದ ಎರಡು ಕಡೆ ಸಂಭವಿಸಿದ ಪ್ರತ್ಯೇಕ ಅವಘಡದಲ್ಲಿ 12 ಜನರು ಬಲಿಯಾಗಿದ್ದಾರೆ.
ಕೊಪ್ಪಳ/ಬೆಳಗಾವಿ, [ಜ.05]: ಇಂದು (ಶನಿವಾರ ) ಕೊಪ್ಪಳ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರತ್ಯೇಕ ಅವಘಡದಲ್ಲಿ 12 ಜನರು ಸಾವನ್ನಪ್ಪಿದ್ದಾರೆ.
ಒಂದೇ ಕುಟುಂಬದ 6 ಜನ ಆತ್ಮಹತ್ಯೆ
ಕೊಪ್ಪಳದ ಮೇತಗಲ್ ಗ್ರಾಮದಲ್ಲಿಂದು ಒಂದೇ ಕುಟುಂಬದ 6 ಜನ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.
ಶೇಖರಯ್ಯ ಬಿಡನಾಳ ಕುಟುಂಬದ ಹೆಂಡತಿ ನಾಲ್ವರು ಹೆಣ್ಣು ಮಕ್ಕಳು ಸೇರಿ 6 ಜನ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಗೆ ಮಕ್ಕಳಿಗೆ ವಿಷ ಉಣಬಡಿಸಿ ನಂತನ ತಾನೂ ನೇಣಿಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ.
ಊರಲ್ಲಿ ಸಹೋದರರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಅಲ್ಲದೇ ಈ ಕುಟುಂಬ ಐದಾರು ಲಕ್ಷ ಸಾಲ ಮಾಡಿತ್ತು. ಈ ಕಾರಣದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ರಸ್ತೆ ಅಪಘಾತ 6 ಜನರ ದುರ್ಮರಣ
ಇನ್ನು ಬೆಳಗಾವಿ ಜಿಲ್ಲೆಯಲ್ಲೂ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ನಿಪ್ಪಾಣಿ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭೀಕರ ಅಪಘಾತ ಸಂಭವಿಸಿದೆ.
ಲಾರಿ ಮತ್ತು ವ್ಯಾಗನರ್ ಕಾರು ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲಿ 6 ಜನರು ಮೃತಪಟ್ಟಿದ್ದಾರೆ. ದುರಂತ ಅದ್ರೆ ಮೃತಪಟ್ಟ ಆರೂ ಜನರು ಒಂದೇ ಕುಟುಂಬದವರಾಗಿದ್ದಾರೆ.