ದಾವಣಗೆರೆಯಲ್ಲಿ ಸಕ್ರಿಯ ಕೊರೋನಾ ಕೇಸ್‌ಗಳ ಸಂಖ್ಯೆಯೂ ಇದೀಗ 67ಕ್ಕೆ ಇಳಿಮುಖ ಆಗಿದೆ. 15 ಜನರು ಗುಣಮುಖರಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ದಾವಣಗೆರೆ(ಮೇ.27): ದಾವಣಗೆರೆಯಲ್ಲಿ 11 ಹೊಸ ಪಾಸಿಟಿವ್ ಪ್ರಕರಣ ವರದಿಯಾದ ಬೆನ್ನಲ್ಲೇ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಸೇರಿದಂತೆ 15 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಸೋಮವಾರ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 136 ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಇದರಲ್ಲಿ ನಾಲ್ವರನ್ನು ಸಾವನ್ನಪ್ಪಿದ್ದರೆ, 65 ಜನಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯಕ್ಕೆ ಜಿಲ್ಲೆಯಲ್ಲಿ ಸಕ್ರಿಯ ಕೇಸ್‌ಗಳ ಸಂಖ್ಯೆಯೂ ಇದೀಗ 67ಕ್ಕೆ ಇಳಿಮುಖ ಆಗಿರುವುದು ಗಮನಾರ್ಹ.
ನಗರದ 47 ವರ್ಷದ ಮಹಿಳೆ ಪಿ-2208 ತೀವ್ರ ಸ್ವರೂಪದ ಉಸಿರಾಟದ ತೊಂದರೆ (ಎಸ್‌ಎಆರ್‌ಐ) ಪ್ರಕರಣದವರಾಗಿದ್ದಾರೆ. 28 ವರ್ಷದ ಮಹಿಳೆ ಪಿ-2257 ಎಂಬುವರು ಪಿ-933 ಸಂಪರ್ಕದಿಂದ ಸೋಂಕಿಗೆ ತುತ್ತಾಗಿದ್ದಾರೆ. 55 ವರ್ಷದ ಮಹಿಳೆ ಪಿ-2274 ಶೀತ, ಜ್ವರ (ಐಎಲ್‌ಐ) ಪ್ರಕರಣದವರಾಗಿದ್ದಾರೆ. ಇನ್ನು 38 ವರ್ಷದ ಪುರುಷ ಪಿ-2275, 9 ವರ್ಷದ ಬಾಲಕ ಪಿ-2276, 36 ವರ್ಷದ ಮಹಿಳೆ ಪಿ-2277, 14 ವರ್ಷದ ಬಾಲಕ ಪಿ-2278ಗೆ ಪಿ-1378 ಸಂಪರ್ಕದಿಂದ ಸೋಂಕಿತರಾಗಿದ್ದಾರೆ. 63 ವರ್ಷದ ವೃದ್ಧೆ ಪಿ-2279 ಎಂಬುವರು ಪಿ-627 ಸಂಪರ್ಕದಿಂದಾಗಿ ಸೋಂಕಿತರಾಗಿದ್ದಾರೆ.
ಮುಂಬೈ ಆಸ್ಪತ್ರೆ ಕಾರಿಡಾರ್ ತುಂಬಾ ಶವಗಳ ಸಾಲು: ಟ್ವೀಟ್ ವೈರಲ್!
39 ವರ್ಷದ ಪುರುಷ ಪಿ-2280 ಗುಜರಾತ್ ರಾಜ್ಯದಿಂದ ಜಿಲ್ಲೆಗೆ ಬಂದಾತ. 9 ವರ್ಷದ ಬಾಲಕ ಪಿ-2281 ಎಂಬುವರು ಪಿ-993 ಸಂಪರ್ಕದಿಂದ, 26 ವರ್ಷದ ಮಹಿಳೆ ಪಿ-2282 ಎಂಬುವರು ಪಿ-933 ಸಂಪರ್ಕದಿಂದ ಸೋಂಕಿಗೆ ಒಳಗಾದವರು. ಈ ಎಲ್ಲರಿಗೂ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪಿಸಿ ನಿರಂಜನ್ ಭಾವುಕ: ಐಜಿಪಿ ರವಿ ಧೈರ್ಯ
ದಾವಣಗೆರೆ: ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ಗುಣಮುಖರಾದ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಕಾನ್‌ಸ್ಟೇಬಲ್ ಸೇರಿದಂತೆ 15 ಜನರನ್ನು ಆಸ್ಪತ್ರೆಯಿಂದ ರೆಡ್ ಕಾರ್ಪೆಟ್ ಹಾಸಿ, ಪುಷ್ಪವೃಷ್ಟಿಸುರಿಸುವ ಮೂಲಕ ಹೃದಯಸ್ಪರ್ಶಿಯಾಗಿ ಬೀಳ್ಕೊಡಲಾಯಿತು.
ಕೊರೋನಾ ವಾರಿಯರ್ ಪೊಲೀಸ್ ಕಾನ್‌ಸ್ಟೇಬಲ್ ಆದ 34 ವರ್ಷದ ಕೆ.ಬಿ.ನಿರಂಜನ್ ಪಿ-975 ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದರು. ಕೆಟಿಜೆ ನಗರ ಕಂಟೈನ್‌ಮೆಂಟ್ ಝೋನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ನಿರಂಜನ್‌ಗೆ ಸೋಂಕು ತಗುಲಿತ್ತು. ನಿರಂಜನ ಸಂಪರ್ಕದ ಎಲ್ಲರ ವರದಿಯೂ ನೆಗೆಟಿವ್ ಬಂದಿತ್ತು.
ಜಿಲ್ಲಾಸ್ಪತ್ರೆ ಆವರಣದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ನಿರಂಜನ ಸೇರಿದಂತೆ 15 ಜನ ಸೋಂಕಿನಿಂದ ಗುಣಮುಖರಾದವರಿಗೆ ಪೂರ್ವ ವಲಯದ ಐಜಿಪಿ ಎಸ್.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಎಎಸ್‌ಪಿ ಎಂ.ರಾಜೀವ್, ಡಿವೈಎಸ್‌ಪಿ ನಾಗೇಶ ಐತಾಳ್, ಡಿಎಚ್‌ಓ ಡಾ.ರಾಘವೇಂದ್ರಸ್ವಾಮಿ ಸೇರಿದಂತೆ ವೈದ್ಯರು, ಶುಶ್ರೂಷಕರು, ಸಿಬ್ಬಂದಿ ಬೀಳ್ಕೊಟ್ಟರು.
ಗುಣಮುಖನಾಗಿ, ಆಸ್ಪತ್ರೆಯಿಂದ ಸಮವಸ್ತ್ರಧಾರಿಯಾಗಿಯೇ ಹೊರಬಂದ ಪೊಲೀಸ್ ಕಾನ್‌ಸ್ಟೇಬಲ್ ನಿರಂಜನ್ ಕ್ಷಣ ಭಾವುಕರಾದರು. ಹೂಗುಚ್ಛ ನೀಡಿ ಬೀಳ್ಕೊಡುತ್ತಿದ್ದ ಐಜಿಪಿ ಎಸ್.ರವಿ ಅವರು ತಮ್ಮ ಸಿಬ್ಬಂದಿಗೆ ಭುಜ ತಟ್ಟಿ, ಧೈರ್ಯ ಹೇಳುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ಇಲಾಖೆ ಸಿಬ್ಬಂದಿ ಜೊತೆಗೆ ತಾವೆಲ್ಲರೂ ಇದ್ದೇವೆ ಎಂಬ ಭರವಸೆಯನ್ನೂ ಮೂಡಿಸಿದರು.