ಲಿಂಗನಮಕ್ಕಿ ಭರ್ತಿಗೆ ಅರ್ಧ ಅಡಿಯಷ್ಟೇ ಬಾಕಿ : 11 ಗೇಟ್ ಓಪನ್

By Web Desk  |  First Published Sep 3, 2019, 7:51 AM IST

ಲಿಂಗನಮಕ್ಕಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಇದೀಗ 11 ಗೇಟ್ ಗಳನ್ನು ತೆರೆದು ನೀರನ್ನು ಹೊರಬಿಡಲಾಗಿದೆ. 


ಶಿವಮೊಗ್ಗ [ಸೆ.03]: ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು ಈ ನಿಟ್ಟಿನಲ್ಲಿ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಲು ಅರ್ಧ ಅಡಿಯಷ್ಟೇ ಬಾಕಿ ಇದೆ. 

ಜಲಾಶಯ ಗರಿಷ್ಠ ಮಟ್ಟ 1819 ಅಡಿಯಷ್ಟಿದ್ದು  ಸದ್ಯ 1818.50 ಅಡಿಯಷ್ಟು ಭರ್ತಿಯಾಗಿದೆ. ಇದರಿಂದ ಇಂದು ಜಲಾಶಯದಿಂದ 10508 ಕ್ಯೂಸೆಕ್ ನೀರನ್ನು ನದಿಗೆ ಹರಿಯಬಿಡಲಾಗುತ್ತಿದೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜಲಾಶಯ ನೀರಿನ ಒಳಹರಿವು 21809 ಸಾವಿರ ಕ್ಯೂಸೆಕ್ ಇದ್ದು ತುಂಬಲು ಅರ್ಧ ಅಡಿಯಷ್ಟೇ ಬಾಕಿ ಇರುವ ಕಾರಣ ಜಲಾಶಯದ 11 ಗೇಟುಗಳನ್ನು ತೆರೆದು ನೀರನ್ನು ಹೊರ ಬಿಡಲಾಗುತ್ತಿದೆ. 

 ಕಳೆದ ಆಗಸ್ಟ್ ತಿಂಗಳಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು, ಈ ವೇಳೆ ಲಿಂಗನಮಕ್ಕಿ ಜಲಾಶಯ ಬಹುತೇಕ ಭರ್ತಿಯಾಗಿತ್ತು.

click me!