ಕೋಲಾರದಲ್ಲಿ ವೈದ್ಯೆ, ಬಟ್ಟೆ ವ್ಯಾಪಾರಿ ಸೇರಿ 11 ಜನಕ್ಕೆ ಸೋಂಕು ದೃಢ

By Kannadaprabha NewsFirst Published Jul 4, 2020, 10:08 AM IST
Highlights

ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಓಟ ಮುಂದುವರಿದಿದ್ದು, ಶುಕ್ರವಾರ ವೈದ್ಯೆ ಸೇರಿದಂತೆ 11 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಕೆಜಿಎಫ್‌ ನಗರದ ಬೋರಿಲಾಲ್‌ ಪೇಟೆ ಬಡಾವಣೆಯಲ್ಲಿ 50 ವರ್ಷದ ಬಟ್ಟೆವ್ಯಾಪಾರಿಗೆ ಸೋಂಕು ಹರಡಿರುವುದು ದೃಢಪಟ್ಟಿದೆ.

ಕೋಲಾರ(ಜು.04): ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಓಟ ಮುಂದುವರಿದಿದ್ದು, ಶುಕ್ರವಾರ ವೈದ್ಯೆ ಸೇರಿದಂತೆ 11 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಕೆಜಿಎಫ್‌ ನಗರದ ಬೋರಿಲಾಲ್‌ ಪೇಟೆ ಬಡಾವಣೆಯಲ್ಲಿ 50 ವರ್ಷದ ಬಟ್ಟೆವ್ಯಾಪಾರಿಗೆ ಸೋಂಕು ಹರಡಿರುವುದು ದೃಢಪಟ್ಟಿದೆ.

ಇವರು ಬಟ್ಟೆಖರೀದಿಗಾಗಿ ಇತ್ತೀಚೆಗೆ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಹೋಗಿ ಬಂದಿದ್ದರು. ಹೀಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿಯು ಇವರು ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಶುಕ್ರವಾರ ಬಂದ ಪ್ರಯೋಗಾಲಯ ವರದಿಯಲ್ಲಿ ಇವರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಇವರ ಸಂಪರ್ಕಕ್ಕೆ ಬಂದಿರುವ 5 ಮಂದಿ ಕುಟುಂಬ ಸದಸ್ಯರನ್ನು ಕ್ವಾರಂಟೈನ್‌ ಮಾಡಲಾಗಿದೆ. ಜತೆಗೆ ಇವರ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ.

ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಪ್ರಶ್ನೆಯೇ ಇಲ್ಲ: ಡಿಸಿಎಂ

ಬೆಂಗಳೂರಿನಿಂದ ನಾಲ್ಕೈದು ದಿನಗಳ ಹಿಂದೆ ಕೆಜಿಎಫ್‌ ತಾಲೂಕಿನ ಸುಂದರಪಾಳ್ಯ ಗ್ರಾಮದಲ್ಲಿನ ಸಂಬಂಧಿಕರ ಮನೆಗೆ ಬಂದಿದ್ದ ಗರ್ಭಿಣಿಗೆ ಸೋಂಕು ತಗುಲಿದೆ. ಇವರು ಅನಾರೋಗ್ಯದ ಕಾರಣಕ್ಕೆ ಆಂಧ್ರಪ್ರದೇಶದ ರಾಮಕುಪ್ಪಂಗೆ ಹೋಗಿ ಚಿಕಿತ್ಸೆ ಪಡೆದು ಬಂದಿದ್ದರು. ಇವರಿಗೆ ಕೊರೋನಾ ಸೋಂಕು ಹರಡಿರುವುದು ದೃಢಪಟ್ಟಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಜಿಎಫ್‌ನ ವಿವೇಕ ನಗರದಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ಸೋಂಕಿತ ವ್ಯಕ್ತಿಯ ಪತ್ನಿ ಮತ್ತು ಮಗಳಿಗೆ ಸೋಂಕು ಹರಡಿದೆ. ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಬೆಮಲ್‌ ಲೇಔಟ್‌ನ 57 ವರ್ಷ ವ್ಯಕ್ತಿಗೆ ಸೋಂಕು ತಗುಲಿದೆ. ಫಿಷ್‌ಲೇನ್‌ ಬಡಾವಣೆಯ 29 ವರ್ಷದ ವ್ಯಕ್ತಿಗೆ ಸೋಂಕು ಹರಡಿದೆ. ಸೋಂಕಿತ ತಂದೆಯಿಂದ ಇವರಿಗೆ ಸೋಂಕು ಬಂದಿದೆ.

ದೊಣ್ಣೆಯಿಂದ ರೈತರ ಮೇಲೆ ಹಲ್ಲೆ ಮಾಡಿದ ಅರಣ್ಯಾಧಿಕಾರಿ

ವೈದ್ಯೆಗೆ ಸೋಂಕು: ಕೋಲಾರ ನಗರದ ರಹಮತ್‌ನಗರ ಬಡಾವಣೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆಗೆ ಸೋಂಕು ಹರಡಿದೆ. ಇವರು ದರ್ಗಾ ಮೊಹಲ್ಲಾದಲ್ಲಿ ಕೊರೋನಾ ಸೋಂಕಿನಿಂದ ಜೂನ್‌ 29ರಂದು ಮೃತಪಟ್ಟವಯೋವೃದ್ಧ ವ್ಯಕ್ತಿಯ ಸಂಬಂಧಿ. ಈ ವ್ಯಕ್ತಿಯಿಂದ ವೈದ್ಯೆಯ ಜತೆಗೆ ಇಬ್ಬರು ಮಹಿಳೆಯರಿಗೂ ಸೋಂಕು ಹರಡಿದೆ.

ಸೋಂಕಿತ ವಯೋವೃದ್ಧ ವ್ಯಕ್ತಿಯು ಆರ್‌.ಎಲ್‌.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಮೃತಪಟ್ಟಿದ್ದರು. ನಂತರ ಪ್ರಯೋಗಾಲಯ ಸಿಬ್ಬಂದಿ ಅವರ ಶವದಿಂದ ಕಫಾ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಿದಾಗ ಕೊರೋನಾ ಸೋಂಕು ಇರುವುದು ಗೊತ್ತಾಗಿತ್ತು. ಜಾಲಪ್ಪ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ ಕೆಲಸ ಮಾಡುವ ಇಬ್ಬರು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಗುಲಿದೆ. ಶ್ರೀನಿವಾಸಪುರ ತಾಲೂಕಿನ 55 ವರ್ಷದ ಪುರುಷರೊಬ್ಬರಿಗೆ ಸೋಂಕು ಇರುವುದು ಖಚಿತವಾಗಿದೆ. ಇವರು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದಾರೆ.

click me!