* ಅಘನಾಶಿನಿ ಉಳಿಸುವ ಹೋರಾಟಕ್ಕೆ ಎಚ್‌ಡಿಕೆ ಬೆಂಬಲ
* ಜೀವವೈವಿಧ್ಯತೆಯ ಒಡಲು ಅಘನಾಶಿನಿಯನ್ನು ಉಳಿಸಲೇಬೇಕಾಗಿದೆ
* ಚಿಪ್ಪಿಕಲ್ಲು ಇಂದು ಅಂಕೆ ಇಲ್ಲದ ಗಣಿಗಾರಿಕೆಯಿಂದಾಗಿ ಅಘನಾಶಿನಿಯ ಅಸ್ತಿತ್ವಕ್ಕೆ ಧಕ್ಕೆ ತಂದಿದೆ.
ಬೆಂಗಳೂರು (ಜ.120 ರಾಜ್ಯದ ಅತ್ಯಂತ ಸೂಕ್ಷ್ಮ ನದಿ, ಅಪರೂಪದ ಜೀವವೈವಿಧ್ಯತೆಯ ಒಡಲು ಅಘನಾಶಿನಿಯನ್ನು (Aghanashini) ಉಳಿಸಲೇಬೇಕಾಗಿದ್ದು, ನದಿ (River) ಉಳಿವಿಗಾಗಿ ನಡೆಯುವ ಹೋರಾಟದಲ್ಲಿ ನಾನೂ ದನಿಯಾಗುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ನದಿಗೆ ಧಕ್ಕೆಯಾಗುವ ರೀತಿಯಲ್ಲಿ ನಡೆಯುತ್ತಿರುವ ಚಿಪ್ಪಿಕಲ್ಲು ಗಣಿಗಾರಿಕೆಯನ್ನು ಸಂಪೂರ್ಣ ನಿಲ್ಲಿಸಬೇಕು. ಉತ್ತರ ಕನ್ನಡದ ಜೀವಸೆಲೆ ಅಘನಾಶಿನಿ ಆಪತ್ತಿನಲ್ಲಿದೆ. ಆ ನದಿ ಉಳಿಸಿಕೊಳ್ಳುವ ಬಗ್ಗೆ ಒಟ್ಟಾಗಿ ಹೋರಾಡಬೇಕಿದೆ.
ಈ ಪ್ರಯತ್ನಕ್ಕೆ ನನ್ನ ಮತ್ತು ಜೆಡಿಎಸ್‌ನ ಬೆಂಬಲ ಇದೆ. ನದಿಗಳನ್ನು ಉಳಿಸಿಕೊಳ್ಳುವ ಜತೆಗೆ, ಆ ನದಿಗಳ ನೀರನ್ನು ಬದುಕಿಗೆ ಬಳಸಿಕೊಳ್ಳುವ ಶುಭಸಂಕಲ್ಪದೊಂದಿಗೆ ನಾವು ಜನತಾ ಜಲಧಾರೆ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ಹೇಳಿದ್ದಾರೆ. ಸರ್ಕಾರ ತಕ್ಷಣವೇ ಅಘನಾಶಿನಿ ರಕ್ಷಣೆಗೆ ಅತ್ಯುನ್ನತ ಕಾರ್ಯಪಡೆ ರಚಿಸಬೇಕೆಂದು ಆಗ್ರಹಿಸಿದ್ದಾರೆ
undefined
Karnataka Politics: ಕಾಂಗ್ರೆಸ್‌ನದ್ದು ಪಾದಯಾತ್ರೆಯಲ್ಲ ಮತ ಯಾತ್ರೆ: ಎಚ್‌ಡಿಕೆ
ಸ್ಥಳೀಯರ ಜೀವನಾಧಾರವಾಗಿದ್ದ ಚಿಪ್ಪಿಕಲ್ಲು ಇಂದು ಅಂಕೆ ಇಲ್ಲದ ಗಣಿಗಾರಿಕೆಯಿಂದಾಗಿ ಅಘನಾಶಿನಿಯ ಅಸ್ತಿತ್ವಕ್ಕೆ ಧಕ್ಕೆ ತಂದಿದೆ. ಇಂತಹ ನದಿಯನ್ನು ಕಳೆದುಕೊಂಡರೆ ಅದೊಂದು ರಾಷ್ಟ್ರೀಯ ದುರಂತ. ನದಿ ಉಳಿವಿಗೆ ವಿಜ್ಞಾನಿಗಳು ನೀಡಿರುವ ವರದಿಯನ್ನು ಪರಿಗಣಿಸಬೇಕು. ಅಘನಾಶಿನಿ ಉಳಿವಿಗಾಗಿ ನಡೆಯುತ್ತಿರುವ ಹೋರಾಟವು ಶ್ಲಾಘನೀಯ ಎಂದಿದ್ದಾರೆ.
ರಾಜ್ಯದಲ್ಲಿ ಅತಿ ವಿಶಾಲ ಅಳಿವೆಯುಳ್ಳ, ಅತ್ಯಂತ ಶುದ್ಧ ನದಿಯಾದ ಅಘನಾಶಿನಿಯನ್ನು ಉಳಿಸಲೇಬೇಕು. ಇಲ್ಲಿ ನಡೆಯುತ್ತಿರುವ ಚಿಪ್ಪಿಕಲ್ಲು ಗಣಿಗಾರಿಕೆಯನ್ನು ಸಂಪೂರ್ಣ ನಿಲ್ಲಿಸಬೇಕು ಎಂಬುದು ಸರಕಾರಕ್ಕೆ ನನ್ನ ಆಗ್ರಹ. ಈ ಹೋರಾಟದಲ್ಲಿ ನಾನೂ ಅಘನಾಶಿನಿಯ ದನಿಯಾಗುತ್ತೇನೆ ಎಂದಿದ್ದಾರೆ.
ಪ್ರವಾಹಕ್ಕೆ ತತ್ತರಿಸಿದ್ದ ಉತ್ತರ ಕನ್ನ: ಕಳೆದ ಎರಡು ಮೂರು ದಿನಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕಾಳಿ, ಗಂಗಾವಳಿ, ಅಘನಾಶಿನಿ ನದಿತಟಗಳಲ್ಲಿ ಉಂಟಾಗಿರುವ ಪ್ರವಾಹ ಉತ್ತರ ಕನ್ನಡದ ಕರಾವಳಿಗರನ್ನು ಅಕ್ಷರಶಃ ತಲ್ಲಣಗೊಳಿಸಿದೆ. ಜನ ಬದುಕು ಕಂಡುಕೊಳ್ಳಲು ಹೋರಾಟ ನಡೆಸುವಂತಹ ಸ್ಥಿತಿ ನಿರ್ಮಾಣವಾಗಿತ್ತು.
ಕಾಳಿ ಹಾಗೂ ಉಪ ನದಿಗೆ ಸುಪಾ, ತಟ್ಟಿಹಳ್ಳ, ಬೊಮ್ಮನಳ್ಳಿ, ಕೊಡಸಳ್ಳಿ, ಕದ್ರಾ ಹೀಗೆ ಸಾಲುಸಾಲಾಗಿ ಅಣೆಕಟ್ಟು ನಿರ್ಮಿಸಲಾಗಿದೆ. ಈ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಿ ಒಂದು ಡ್ಯಾಂನಿಂದ ನೀರನ್ನು ಹೊರಬಿಟ್ಟರೆ ಉಳಿದೆಲ್ಲ ಡ್ಯಾಂನಿಂದ ನೀರನ್ನು ಹೊರಬಿಡಬೇಕು. ಡ್ಯಾಂ ಅನ್ನು ಪ್ರವಾಹ ನಿಯಂತ್ರಕವಾಗಿ ಬಳಸಬೇಕು ಎಂದು ಎಷ್ಟೇ ಪ್ರಯತ್ನಪಟ್ಟರೂ ಅಣೆಕಟ್ಟುಗಳು ಪ್ರವಾಹ ತಂದೊಡ್ಡುತ್ತಿವೆ. ಯಲ್ಲಾಪುರ, ಹುಬ್ಬಳ್ಳಿ ಧಾರವಾಡ ಕಡೆಗಳಲ್ಲಿ ಮಳೆಯಾದರೆ ಗಂಗಾವಳಿ ನದಿ ಆರ್ಭಟಿಸುತ್ತದೆ. ಶಿರಸಿ, ಸಿದ್ದಾಪುರದಲ್ಲಿ ಭಾರಿ ಮಳೆಯಾದರೆ ಅಘನಾಶಿನಿ ನದಿ ಅಬ್ಬರಿಸುತ್ತದೆ. ಘಟ್ಟದ ಮೇಲೆ ಸುರಿಯುವ ಮಳೆ ಕರಾವಳಿಯಲ್ಲಿ ಪ್ರವಾಹ ತಂದೊಡ್ಡುತ್ತವೆ.
ಎರಡು ಮೂರು ವರ್ಷಗಳಿಂದ ಇದೇ ಸಮಸ್ಯೆಯ ಪುನರಾವರ್ತನೆಯಾಗುತ್ತಿದ್ದು ಕಾಳಿ, ಗಂಗಾವಳಿ, ಅಘನಾಶಿನಿ, ವರದಾ ನದಿಗಳ ತೀರದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ಶುಕ್ರವಾರ, ಶನಿವಾರಗಳಂದೂ ಕಾಳಿ ನದಿ ತೀರ, ಗಂಗಾವಳಿ ನದೀ ಪಾತ್ರ ಹಾಗೂ ಅಘನಾಶಿನಿ ನದಿಗುಂಟ ಪ್ರವಾಹದಲ್ಲಿ ಸಿಲುಕಿ ತತ್ತರಗೊಂಡ ಸುಮಾರು ಸಾವಿರಾರು ಕುಟುಂಬಗಳ 8 ಸಾವಿರಕ್ಕೂ ಹೆಚ್ಚು ಜನತೆ ತೊಪ್ಪೆಯಾದ ಬಟ್ಟೆಯಲ್ಲಿ ನಡುಗುತ್ತ ಕೈಗೆ ಸಿಕ್ಕಿದ್ದನ್ನು ಎತ್ತಿಕೊಂಡು ಬಂದು ಪರಿಹಾರ ಕೇಂದ್ರದಲ್ಲಿ ನೆರೆಯ ಯಾತನೆಯನ್ನು ನೆನೆದು ಪರಿತಪಿಸಬೇಕಾಗಿ ಬಂದಿತ್ತು.