ಕೊಪ್ಪಳ: ಮಹಾಮಾರಿ ಕೊರೋನಾ ಗೆದ್ದ 105 ವರ್ಷದ ಅಜ್ಜಿ..!

By Suvarna News  |  First Published Sep 12, 2020, 4:01 PM IST

ಕೊರೋನಾದಿಂದ ಗುಣಮುಖರಾದ 105 ವರ್ಷ ಕಮಲಮ್ಮ ಲಿಂಗನಗೌಡ ಹಿರೇಗೌಡ್ರ| ಅಜ್ಜಿಗೆ ಇತರೇ ಕಾಯಿಲೆಗಳು ಇರದೆ ಇರುವುದರಿಂದ ಮನೆಯಲ್ಲಿಯೇ ಚಿಕಿತ್ಸೆನ್ನು ನೀಡಲಾಯಿತು, ಅಲ್ಲದೆ ಕಮಲಮ್ಮ ಅವರು ಆಸ್ಪತ್ರೆಗೆ ಹೋಗುವುದಕ್ಕೆ ಹಿಂದೇಟು ಹಾಕಿದ್ದರಿಂದ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗಿದೆ ಎಂದ ಕಮಲಮ್ಮ ಅವರ ಮೊಮ್ಮಗ ಡಾ. ಶ್ರೀನಿವಾಸ ಹ್ಯಾಟಿ| 


ಕೊಪ್ಪಳ(ಸೆ.12): ಕೊರೋನಾ ಹಾಟ್‌ಸ್ಪಾಟ್ ಎಂದೇ ಖ್ಯಾತಿಯಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್‌ಗೆ ನಿತ್ಯವೂ ಸಾಲು ಸಾಲು ಸಾವುಗಳು ಸಾಮಾನ್ಯ ಎನ್ನುವಂತೆ ಆಗಿದೆ. ಇದರ ಮಧ್ಯೆಯೂ ತಾಲೂಕಿನ ಕಾತರಕಿ ಗ್ರಾಮದ 105 ವರ್ಷ ಭರ್ತಿಯಾಗಿರುವ  ಕಮಲಮ್ಮ ಲಿಂಗನಗೌಡ ಹಿರೇಗೌಡ್ರ ಗುಣಮುಖವಾಗಿದ್ದಾರೆ.

ಕಳೆದ ವಾರವರಷ್ಟೇ ಅವರಿಗೆ ಕೊರೋನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಕೊಪ್ಪಳದ ಅವರ ಪುತ್ರ ಶಂಕರಗೌಡ ಅವರ ನಿವಾಸದಲ್ಲಿ ಹೋಂ ಐಸೋಲೇಶನ್ ಆಗಿ, ಮನೆಯಲ್ಲಿದ್ದುಕೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದರು.
ಜ್ವರ ಸೇರಿದಂತೆ ಮೊದಲಾದ ತೊಂದರೆಯನ್ನು ಅನುಭವಿಸುತ್ತಿದ್ದ ಕಮಲಮ್ಮ ಅವರಿಗೆ ಕೋವಿಡ್ ಚಕ್ ಮಾಡಿದ ವೇಳೆಯಲ್ಲಿ ಪಾಸಿಟಿವ್ ಬಂದಿತ್ತು. ಉಳಿದಂತೆ ಯಾವುದೇ ತೊಂದರೆ ಇರಲಿಲ್ಲ. ಹೀಗಾಗಿ, ಮನೆಯಲ್ಲಿಯೇ  ಚಿಕಿತ್ಸೆಯನ್ನು ನೀಡಲಾಯಿತು.

Latest Videos

undefined

ಕೊರೋನಾಗೆ ಸೋಂಕಿಗೆ ಇಬ್ಬರು ವೈದ್ಯರು ಬಲಿ

ವಾರ ಚಿಕಿತ್ಸೆ ಬಳಿಕ ಈಗ ಸಂಪೂರ್ಣ ಗುಣಮುಖವಾಗುತ್ತಿದ್ದು, ಕೊರೋನಾವನ್ನು ಮತ್ತೊಮ್ಮೆ ಟೆಸ್ಟ್ ಮಾಡಿಸಿದಾಗ ನೆಗಟಿವ್ ಬಂದಿದೆ ಎನ್ನುತ್ತಾರೆ ಚಿಕಿತ್ಸೆಯನ್ನು ನೀಡಿದ ಮೊಮ್ಮಗ ಡಾ. ಶ್ರೀನಿವಾಸ ಹ್ಯಾಟಿ ಅವರು. ಇತರೇ ಕಾಯಿಲೆಗಳು ಇರದೆ ಇರುವುದರಿಂದ ಮನೆಯಲ್ಲಿಯೇ ಚಿಕಿತ್ಸೆನ್ನು ನೀಡಲಾಯಿತು. ಅಲ್ಲದೆ ಕಮಲಮ್ಮ ಅವರು ಆಸ್ಪತ್ರೆಗೆ ಹೋಗುವುದಕ್ಕೆ ಹಿಂದೇಟು ಹಾಕಿದ್ದರಿಂದ  ಮನೆಯಲ್ಲಿಯೇ ಚಿಕಿತ್ಸೆಯನ್ನು ನೀಡಿದ್ದಾರೆ.
ಆಹಾರ ತ್ಯಜಿಸಿದ್ದಾರೆ 

ಈ ನಡುವೆ ಆಹಾರವನ್ನು ತ್ಯಜಿಸಿರುವ ಕಮಲಮ್ಮ ನನಗೆ ಇಷ್ಟು ವರ್ಷಗಳ ಕಾಲ ಬದುಕಿದ್ದು ಸಾಕು, ನನಗೇನು ಕೊಡಬೇಡಿ. ನಾನೇ ಜೀವ ತ್ಯಜಿಸುತ್ತೇನೆ ಎಂದು ವಾರಗಳ ಕಾಲ ಯಾವುದೇ ಆಹಾರವನ್ನು ಸ್ವೀಕಾರ ಮಾಡಲು ನೀರಾಕರಣೆ ಮಾಡಿದ್ದಾರೆ. ಆದರೂ ಒತ್ತಾಯ ಮಾಡಿ, ಗಂಜಿ ಮತ್ತು ನೀರನ್ನು ನೀಡಲಾಗುತ್ತದೆ. ಔಷಧಿಯನ್ನು ಅಷ್ಟಕಷ್ಟೇ ನೀಡಲಾಗಿದೆ.  ಉಳಿದಂತೆ ಅವರಿಗೆ ಯಾವುದೇ ಸಮಸ್ಯೆ ಇಲ್ಲದೆ ಇರುವುದರಿಂದ ವಿಶೇಷ ನಿಗಾ ಇಡಲಾಗಿದೆಯೇ ಹೊರತು ವಿಶೇಷ ಚಿಕಿತ್ಸೆಯನ್ನು  ನೀಡಿಲ್ಲ.

ಈ ಬಗ್ಗೆ ಮಾತನಾಡಿದ ವೃದ್ಧೆ ಕಮಲಮ್ಮ ಅವರ ಮೊಮ್ಮಗ ಡಾ. ಶ್ರೀನಿವಾಸ ಹ್ಯಾಟಿ ಅವರು, ನನ್ನ ವೃತ್ತಿ ಬದುಕಿನಲ್ಲಿ  ಇದು ಸವಾಲು ಎನ್ನುವಂತೆ ಆಗಿತ್ತು. ಆದರೂ ಯಾವುದೇ  ಇತರೆ ಕಾಯಿಲೆಗಳು ಇರದೆ ಇರುವುದರಿಂದ ಸಾಮಾನ್ಯ ಚಿಕಿತ್ಸೆಯನ್ನು ನೀಡಲಾಗಿದೆ. ಈಗ ಅವರ  ಕೋವಿಡ್ ವರದಿ ನೆಗಟಿವ್ ಬಂದಿದೆ. ನಿಜಕ್ಕೂ ಕೋವಿಡ್‌ಗೆ ಅಂಜುವರು ಅಜ್ಜಿಯ ಈ ಎದುರಿಸುವಿಕೆಯನ್ನು ಕಲಿಯಬೇಕಾಗಿದೆ. ಸಾವಿಗೆ ಅಂಜದೆ ಸಾವು ಅಪ್ಪಿಕೊಳ್ಳಲು ಮುಂದಾಗಿದ್ದರಿಂದ ರೋಗದಿಂದ ಗುಣಮುಖವಾಗಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ. 
 

click me!