Karnataka Politics : ಶೇ. ನೂರಕ್ಕೆ ನೂರು ಮತ್ತೊಮ್ಮೆ ಗೆಲುವು ಸಾಧಿಸಲಿದ್ದೇವೆ

By Kannadaprabha NewsFirst Published Nov 29, 2022, 5:03 AM IST
Highlights

ನಂಜನಗೂಡು ಕ್ಷೇತ್ರದಲ್ಲಿ ಶೇ. ನೂರಕ್ಕೆ ನೂರಷ್ಟುಮತ್ತೊಮ್ಮೆ ಗೆಲುವು ಸಾಧಿಸಲಿದ್ದೇವೆ ಎಂದು ಸಂಸದ ವಿ. ಶ್ರೀನಿವಾಸಪ್ರಸಾದ್‌ ಹೇಳಿದರು.

 ನಂಜನಗೂಡು (ನ.29):  ನಂಜನಗೂಡು ಕ್ಷೇತ್ರದಲ್ಲಿ ಶೇ. ನೂರಕ್ಕೆ ನೂರಷ್ಟುಮತ್ತೊಮ್ಮೆ ಗೆಲುವು ಸಾಧಿಸಲಿದ್ದೇವೆ ಎಂದು ಸಂಸದ ವಿ. ಶ್ರೀನಿವಾಸಪ್ರಸಾದ್‌ ಹೇಳಿದರು.

ಗಳಿಂದ ಶ್ರೀಕಂಠೇಶ್ವರ ದ ಆವರಣದಲ್ಲಿ ನುಗು ಏತ ನೀರಾವರಿ ಯೋಜನೆ, ಶ್ರೀಕಂಠೇಶ್ವರ ದೇವಾಲಯದಲ್ಲಿ (Temple)  75 ಕೊಠಡಿಗಳ ಅತಿಥಿಗೃಹ ನಿರ್ಮಾಣ, ಯಡಿಯಾಲ ಭಾಗದ 12 ಕೆರೆಗಳನ್ನು ತುಂಬಿಸುವ ಯೋಜನೆ, 3.5 ಕೋಟಿ ವೆಚ್ಚದ ವಾಲ್ಮೀಕಿ ಭವನ ಉದ್ಘಾಟನೆ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶಾಸಕ ಬಿ. ಹರ್ಷವರ್ಧನ್‌ ಅವರು ಕ್ಷೇತ್ರದಲ್ಲಿ 7,500 ಕೋಟಿಗಿಂತಲೂ ಹೆಚ್ಚಿನ ಅನುದಾನ ತಂದು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ, ಆದ್ದರಿಂದ ಶಾಸಕರು ಮತ್ತೆ ಗೆಲ್ಲಲಿದ್ದಾರೆ ಎಂದರು.

ಲೋಕಸಭಾ (Loksabha)  ಸದಸ್ಯನಾದ ನಂತರ 28 ಕ್ಷೇತ್ರಗಳ ಪೈಕಿ ಚಾಮರಾಜನಗರ (Chamarajanagar)  ಕ್ಷೇತ್ರದಲ್ಲಿ ಮಾತ್ರ ಅಂಗವಿಕರಿಗೆ ಸಲಕರಣೆಗಳನ್ನು ಉಚಿತವಾಗಿ ನೀಡುವಂತಹ ಯೋಜನೆಗೆ ಈಗಾಗಲೇ ತಪಾಸಣೆ ನಡೆಸಿ ಮೂರು ಸಾವಿರ ಜನರನ್ನು ಆಯ್ಕೆಗೊಳಿಸಲಾಗಿದೆ. ಮುಂದಿನ ತಿಂಗಳಲ್ಲಿ ಚಾಮರಾಜನಗರದಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಸಲಕರಣೆ ವಿತರಿಸಲಾಗುವುದು ಎಂದರು.

ನಾನು ಎಂದೂ ಸಹ ಸೋಲಿಗೆ ಗುಗ್ಗದೆ, ಗೆಲುವಿಗೆ ಹಿಗ್ಗದೆ ಕಳೆದ 40 ವರ್ಷಗಳಿಂದಲೂ ಸಹ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ. ಸುಟ್ಟು ಬೂದಿಯಾದರೂ ಸಹ ಫೀನಿಕ್ಸ್‌ ಹಕ್ಕಿಯಂತೆ ಮತ್ತೆ ಎದ್ದು ಬಂದು ಹೋರಾಟ ನಡೆಸಿದ್ದೇನೆ ಎಂದು ಮಾರ್ಮಿಕವಾಗಿ ನುಡಿದರು.

ನಾನು ರಾಜಕಾರಣಕ್ಕೆ ಕಾಲಿಟ್ಟು 50 ವರ್ಷಗಳು ಕಳೆದಿವೆ. ನಾನು ಸಾರ್ಥಕತೆ ಹೊಂದಲು ನಂಜನಗೂಡು ಕ್ಷೇತ್ರದಲ್ಲಿ ಸಮುದಾಯ ಸಕೀರ್ಣ ನಿರ್ಮಿಸಲು 8 ಕೋಟಿ, ಕಪಿಲಾ ನದಿಗೆ ತಡೆಗೋಡೆ ನಿರ್ಮಿಸಲು 55 ಕೋಟಿ, ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿದರು.

ಶ್ವೇತಪತ್ರ ಹೊರಡಿಸಿಯೇ ಚುನಾವಣೆಗೆ ಹೋಗುತ್ತೇನೆ:

ಶಾಸಕ ಬಿ. ಹರ್ಷವರ್ಧನ್‌ ಮಾತನಾಡಿ, ನುಗು ಏತ ನಿರಾವರಿ ಯೋಜನೆ 35 ವರ್ಷಗಳಿಂದ ನೆನಗುದಿಗೆ ಬಿದ್ದಿತ್ತು. ಹಲವಾರು ನಾಯಕರು ಈ ಯೋಜನೆಯನ್ನು ಜಾರಿಗೊಳಿಸಲು ಇವರಿಂದ ಸಾಧ್ಯವೇ ಎಂದಿದ್ದರು. ಆದರೆ ಸುತ್ತೂರು ಸ್ವಾಮೀಜಿ ಮೂಲಕ ಮನವಿ ಸಲ್ಲಿಸಿದ ಪರಿಣಾಮ ಎಚ್‌.ಡಿ. ಕುಮಾರಸ್ವಾಮಿ ಬಜೆಟ್‌ನಲ್ಲಿ ಘೋಷಣೆ ಮಾಡಿದರು. ಆದರೆ ಕಾರ್ಯಗತವಾಗಲಿಲ್ಲ, ನಮ್ಮ ಸರ್ಕಾರ ಬಂದ ನಂತರ ಆಡಳಿತಾತ್ಮಕ ಅನುಮೋದನೆಗೊಂಡು 80 ಕೋಟಿ ರು. ವೆಚ್ಚದಲ್ಲಿ ನುಗು ಏತ ನೀರಾವರಿ ಯೋಜನೆ ಜಾರಿಗೊಳಿಸಲಾಗುತ್ತಿದೆ, 30 ಕೋಟಿ ರು. ವೆಚ್ಚದಲ್ಲಿ ಯಡಿಯಾಲ ಭಾಗದ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. 20 ಕೋಟಿ ರು. ವೆಚ್ಚದಲ್ಲಿ ವಿದ್ಯುತ್‌ ಉಪ ಕೇಂದ್ರ ನಿರ್ಮಾಣ, 16.5 ಕೋಟಿ ರು. ವೆಚ್ಚದಲ್ಲಿ ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿ ಡಾರ್ಮಿಟರಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. 3.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ವಾಲ್ಮೀಕಿ ಭವನ ಲೋಕಾರ್ಪಣೆಗೊಳಿಸಲಾಗಿದೆ. ಅಲ್ಲದೆ ಕ್ಷೇತ್ರದಲ್ಲಿ 750 ಕೋಟಿಗೂ ಹೆಚ್ಚಿನ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ನಗರದ ಹೊಸ ಬಡಾವನೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಮುಂದಾಗುತ್ತೇನೆ ಎಂದರು.

ವಾಲ್ಮೀಕಿ ಭವನದ ನಿರ್ಮಾಣಕ್ಕಾಗಿ ನಮ್ಮ ಸರ್ಕಾರ ಅನುದಾನ ಬಿಡುಗಡೆಗೊಳಿಸಿದೆ. ಆದರೆ ಪ್ರತಿಪಕ್ಷಗಳು ಸಿದ್ದರಾಮಯ್ಯ ಸರ್ಕಾರ ಅನುದಾನ ನೀಡಿದೆ ಎಂದು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಹೇಳಿಕೆಗೆ ಟಾಂಗ್‌ ನೀಡಿದರು.

ಕಾಂಪೋಸ್ಟ್‌ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್‌. ಮಹದೇವಯ್ಯ, ಖಾದಿ ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಕೃಷ್ಣಪ್ಪಗೌಡ, ನಗರಸಭಾಧ್ಯಕ್ಷ ಎಚ್‌.ಎಸ್‌. ಮಹದೇವಸ್ವಾಮಿ, ಉಪಾಧ್ಯಕ್ಷೆ ನಾಗಮಣಿ, ಬಿಜೆಪಿ ತಾಲೂಕು ಅಧ್ಯಕ್ಷ ಪಿ. ಮಹೇಶ್‌, ನಗರಾಧ್ಯಕ್ಷ ಶ್ರೀನಿವಾಸರೆಡ್ಡಿ, ಜಿಪಂ ಮಾಜಿ ಸದಸ್ಯರಾದ ಚಿಕ್ಕರಂಗನಾಯಕ, ಮುಖಂಡರಾದ ಕುಂಬ್ರಳ್ಳಿ ಸುಬ್ಬಣ್ಣ, ಪದ್ಮನಾಭರಾವ್‌, ಕಣೆನೂರು ಪರಶಿವಮೂರ್ತಿ, ಬಿ.ಎಸ್‌. ಮಹದೇವಪ್ಪ, ಜಿಲ್ಲಾಧಿಕಾರಿ ಡಾ. ರಾಜೇಂದ್ರ, ಜಿಪಂ ಇಓ ಪೂರ್ಣಿಮಾ, ಎಸ್ಪಿ ಆರ್‌. ಚೇತನ್‌, ತಹಸೀಲ್ದಾರ್‌ ಎಂ. ಶಿವಮೂರ್ತಿ, ತಾಪಂ ಇಓ ಎಚ್‌.ಜಿ. ಶ್ರೀನಿವಾಸ್‌, ನಗರಸಭಾಆಯುಕ್ತ ರಾಜಣ್ಣ, ಕಾರ್ಯಕರ್ತರು ಇದ್ದರು.

 ಸಾಮರಸ್ಯಕ್ಕೆ ಹೆಚ್ಚು ಒತ್ತು

ನಾನು ರಾಜ್ಯ ರಾಜಕಾರಣಕ್ಕೆ ಬಂದ ನಂತರ ಕ್ಷೇತ್ರದಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಹೆಚ್ಚು ಒತ್ತು ನೀಡಿದ್ದೇನೆ. ಜೊತೆಗೆ ಎಲ್ಲ ಜನಾಂಗದವರಿಗೂ ಸಹ ಸಾಮಾಜಿಕ ನ್ಯಾಯ ಒದಗಿಸುವ ಸಲುವಾಗಿ ಅಂಬೇಡ್ಕರ್‌ ಪ್ರತಿಮೆ ಮುಂಭಾಗ ಎಲ್ಲಾ ಜನಾಂಗದ ಸಮುದಾಯ ಭವನಕ್ಕೆ ಜಾಗ ನೀಡಲಾಗಿದೆ. ಕೆಲವು ಭವನಗಳು ಪೂರ್ಣಗೊಳ್ಳುವ ಹಂತ ತಲುಪಿವೆ ಎಂದರಲ್ಲದೆ. ನಂಜನಗೂಡನ್ನು ಸ್ಯಾಟಲೈಟ್‌ಟೌನ್‌ ಆಗಿ ಅಭಿವೃದ್ದಿಪಡಿಸುವ ಸಲುವಾಗಿ ಅಗತ್ಯವಾಗಿರುವ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಸಸ್ಯಕಾಶಿ ನಿರ್ಮಾಣಕ್ಕಾಗಿ 18 ಕೋಟಿ ಅಂದಾಜು ತಯಾರಿಸಿ 3 ಕೋಟಿ ಬಿಡುಗಡೆಗೊಳಿಸಿ ಸ್ವಲ್ಪ ಪ್ರಮಾಣದ ಕೆಲಸ ಮುಗಿಸಲಾಗಿದೆ. ಉಪ ಚುನಾವಣೆಯಲ್ಲಿ ಗೆದ್ದ ಶಾಸಕ ಕಳಲೆ ಕೇಶವಮೂರ್ತಿ ಕ್ಷೇತ್ರದಲ್ಲಿ ಯಾವ ಕೆಲಸವನ್ನೂ ಮಾಡದೆ. ಈಗ ಆರೋಪದಲ್ಲಿ ಮುಂದಾಗಿದ್ದಾರೆ. ಪ್ರವಾಸಿ ಮಂದಿರವನ್ನು ಮುಚ್ಚಲಾಗಿತ್ತು. ನಾನು ಬಂದ ನಂತರ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ಶ್ರೀನಿವಾಸ್‌ ಪ್ರಸಾದ್‌ ಹೇಳಿದರು.

click me!