ಬೆಂಗ್ಳೂರಿನ ಮಾವಳ್ಳಿಪುರ ಬಳಿ 100 ಎಕರೆ ಸ್ಪೋರ್ಟ್ಸ್‌ ಸಿಟಿ: ಸಚಿವ ನಾಗೇಂದ್ರ

By Kannadaprabha NewsFirst Published Feb 15, 2024, 6:00 AM IST
Highlights

ಮಾವಳ್ಳಿಪುರ ಬಳಿ 60 ಎಕರೆ ಕಂದಾಯ ಇಲಾಖೆ ಲಭ್ಯವಿದೆ. ಅದರ ಜತೆಗೆ ಇನ್ನೂ 40 ಎಕರೆ ಬೇರೆ ಸರ್ವೆ ಸಂಖ್ಯೆಯಲ್ಲಿ ಲಭ್ಯವಿದ್ದು, ಎರಡನ್ನೂ ಕೇಳಿದ್ದೇವೆ. ಇದಕ್ಕೆ ಕಂದಾಯ ಇಲಾಖೆಯೂ ಸಮ್ಮತಿಸಿದೆ. ಎಲ್ಲಾ ರೀತಿಯ ಕ್ರೀಡೆಗಳನ್ನು ಒಂದೇ ಸೂರಿನಡಿ ಆಡಲು ಹಾಗೂ ತರಬೇತುಗೊಳಿಸಲು ಅವಕಾಶವಾಗುವಂತೆ ಸ್ಪೋರ್ಟ್ಸ್‌ ಸಿಟಿ ನಿರ್ಮಾಣ ಮಾಡಲಾಗುವುದು: ಸಚಿವ ಬಿ.ನಾಗೇಂದ್ರ 

ವಿಧಾನಸಭೆ(ಫೆ.15):  ಬೆಂಗಳೂರು ನಗರದ ಮಾವಳ್ಳಿಪುರ ಬಳಿಯ 100 ಎಕರೆ ಜಮೀನನ್ನು ಸ್ಪೋರ್ಟ್ಸ್‌ ಸಿಟಿ ನಿರ್ಮಾಣಕ್ಕಾಗಿ ಕ್ರೀಡಾ ಇಲಾಖೆಗೆ ಹಸ್ತಾಂತರಿಸಲು ಕಂದಾಯ ಇಲಾಖೆ ಒಪ್ಪಿದ್ದು, ಈ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಪಿಪಿಪಿ ಮಾದರಿಯಲ್ಲಿ ಸ್ಪೋರ್ಟ್ಸ್ ಸಿಟಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.

ಪ್ರಶ್ನೋತ್ತರ ವೇಳೆ ಬಿಜೆಪಿ ಸದಸ್ಯ ಎಸ್‌.ಆರ್‌.ವಿಶ್ವನಾಥ್‌ ಪ್ರಶ್ನೆಗೆ ಉತ್ತರಿಸಿದ ಅವರು, ಮಾವಳ್ಳಿಪುರ ಬಳಿ 60 ಎಕರೆ ಕಂದಾಯ ಇಲಾಖೆ ಲಭ್ಯವಿದೆ. ಅದರ ಜತೆಗೆ ಇನ್ನೂ 40 ಎಕರೆ ಬೇರೆ ಸರ್ವೆ ಸಂಖ್ಯೆಯಲ್ಲಿ ಲಭ್ಯವಿದ್ದು, ಎರಡನ್ನೂ ಕೇಳಿದ್ದೇವೆ. ಇದಕ್ಕೆ ಕಂದಾಯ ಇಲಾಖೆಯೂ ಸಮ್ಮತಿಸಿದೆ. ಎಲ್ಲಾ ರೀತಿಯ ಕ್ರೀಡೆಗಳನ್ನು ಒಂದೇ ಸೂರಿನಡಿ ಆಡಲು ಹಾಗೂ ತರಬೇತುಗೊಳಿಸಲು ಅವಕಾಶವಾಗುವಂತೆ ಸ್ಪೋರ್ಟ್ಸ್‌ ಸಿಟಿ ನಿರ್ಮಾಣ ಮಾಡಲಾಗುವುದು. ಸರ್ಕಾರದಿಂದಲೇ ನಿರ್ಮಾಣ ಮಾಡಬೇಕೆ ಅಥವಾ ಪಿಪಿಪಿ ಮಾದರಿಯಲ್ಲಿ ಮಾಡಬೇಕೆ ಎಂಬ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದರು.

ಬಿಜೆಪಿಯವರಿಗಷ್ಟೇ ಅಲ್ಲ, ಕಾಂಗ್ರೆಸ್‌ನವರಿಗೂ ಶ್ರೀರಾಮಚಂದ್ರ ದೇವರು: ಸಚಿವ ನಾಗೇಂದ್ರ

ಈ ವೇಳೆ ಧನ್ಯವಾದ ತಿಳಿಸಿದ ಎಸ್‌.ಆರ್‌. ವಿಶ್ವನಾಥ್, ಆ ಕೆಲಸ ಮಾಡಿದರೆ ನಿಮ್ಮನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡುತ್ತೇವೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

click me!