
ಹಾಸನ (ಮಾ.23) : ಸಹಪಾಠಿಗಳ ನಿಂದನೆಯಿಂದ ಮನನೊಂದು ಬಾಲಕ ಆತ್ಮಹತ್ಯೆಗೆ ಶರಣಾದ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ ಜಿಲ್ಲೆ ಹರುವನಹಳ್ಳಿ ಗ್ರಾಮದ ಹರ್ಷಿತ್ ಗೌಡ (16) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹಾಸನ ತಾಲ್ಲೂಕಿನ ಕಂಚಮಾರನಹಳ್ಳಿ ಬಳಿಯ ಖಾಸಗಿ ಶಾಲೆಯಲ್ಲಿ 10 ನೇ ತರಗತಿ ಓದುತ್ತಿದ್ದ ಬಾಲಕ ಹರ್ಷಿತ್‌ಗೆ ಒಂದು ವರ್ಷದ ಹಿಂದೆ ಅಪಘಾತದಲ್ಲಿ ಮೂಗಿಗೆ ಏಟು ಬಿದ್ದಿತ್ತು. ಇದರಿಂದ ಆತನಿಗೆ ಸಹಪಾಠಿಗಳು ಮೂಗು ಹರುಕ ಎಂದು ರೇಗಿಸುತ್ತಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹಾಲುಣಿಸಿ ಬೆಳೆಸಿದ ತಾಯಿಗೆ ಮಕ್ಕಳು ಕೊಟ್ಟ ಭಯಾನಕ ಉಡುಗೊರೆ
ಇದೇ ವಿಚಾರವಾಗಿ ಮಾ.19 ರಂದು ಶಾಲೆಯಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಬುದ್ದಿಮಾತು ಹೇಳಿದ್ದರು. ಇದರಿಂದ ಬೇಸರಗೊಂಡ ಹರ್ಷಿತ್ ಶಾಲೆ ಬಿಟ್ಟು ತನ್ನ ಊರಿಗೆ ಹೋಗಿದ್ದ.
ಊರಿನಲ್ಲಿ ದನಗಳನ್ನು ಮೇಯಿಸಲು ಹೋದಾಗ ಜಮೀನಿನ ಬಳಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಘಟನೆ ಸಂಬಂಧ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.